ರಿಲಯನ್ಸ್ ಮತ್ತು ಡಿಸ್ನಿ ವಿಲೀನಕ್ಕೆ ಅನುಮೋದನೆ; ಬಲಿಷ್ಠ ಪ್ರತಿಸ್ಪರ್ಧಿಯನ್ನೇ ತಂಡಕ್ಕೆ ಸೇರಿಸಿಕೊಂಡ ಮುಕೇಶ್ ಅಂಬಾನಿ-business news cci approves reliance and walt disney company merger competition commission of india mukesh ambani jra ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಿಲಯನ್ಸ್ ಮತ್ತು ಡಿಸ್ನಿ ವಿಲೀನಕ್ಕೆ ಅನುಮೋದನೆ; ಬಲಿಷ್ಠ ಪ್ರತಿಸ್ಪರ್ಧಿಯನ್ನೇ ತಂಡಕ್ಕೆ ಸೇರಿಸಿಕೊಂಡ ಮುಕೇಶ್ ಅಂಬಾನಿ

ರಿಲಯನ್ಸ್ ಮತ್ತು ಡಿಸ್ನಿ ವಿಲೀನಕ್ಕೆ ಅನುಮೋದನೆ; ಬಲಿಷ್ಠ ಪ್ರತಿಸ್ಪರ್ಧಿಯನ್ನೇ ತಂಡಕ್ಕೆ ಸೇರಿಸಿಕೊಂಡ ಮುಕೇಶ್ ಅಂಬಾನಿ

  • Reliance and Disney Merger: ವ್ಯವಹಾರ ಚತುರ ಮುಕೇಶ್ ಅಂಬಾನಿ ತಮ್ಮ ಪ್ರತಿಸ್ಪರ್ಧಿಯನ್ನು ಬಹುತೇಕ ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ. ರಿಲಯನ್ಸ್ ಮತ್ತು ವಾಲ್ಟ್ ಡಿಸ್ನಿ ಕಂಪನಿ ವಿಲೀನಕ್ಕೆ ಭಾರತೀಯ ಸ್ಪರ್ಧಾ ಆಯೋಗ (CCI) ಅನುಮೋದನೆ ನೀಡಿದೆ. ಡಿಸ್ನಿಯ 70,000 ಕೋಟಿ ರೂಪಾಯಿ ಮೌಲ್ಯದ ವ್ಯವಹಾರ ರಿಲಯನ್ಸ್‌ ಪಾಲಾಗಿದೆ.

ರಿಲಯನ್ಸ್ ಮತ್ತು ವಾಲ್ಟ್ ಡಿಸ್ನಿ ಕಂಪನಿ ವಿಲೀನಕ್ಕೆ ಭಾರತೀಯ ಸ್ಪರ್ಧಾ ಆಯೋಗ ಬುಧವಾ ಸಮ್ಮತಿ ಸೂಚಿಸಿದೆ. ಈ ಅನುಮೋದನೆಯ ಬಳಿಕ ಭಾರತೀಯ ಮಾಧ್ಯಮ ಜಗತ್ತಿನಲ್ಲಿ ಅತಿದೊಡ್ಡ ಸಾಮ್ರಾಜ್ಯವನ್ನು ಅಂಬಾನಿ ರಚಿಸಿದ್ದಾರೆ. ಬರೋಬ್ಬರಿ 70,000 ಕೋಟಿ ರೂಪಾಯಿ ಮೌಲ್ಯ ಡೀಲ್‌ ಕುದುರಿಸಿದ ಮುಖೇಶ್‌ ಅಂಬಾನಿ, ಭಾರತೀಯ ಮನರಂಜನಾ ವಲಯದಲ್ಲಿ ಹೊಸ ಶಕೆ ಆರಂಭಿಸಲು ಹೊರಟಿದ್ದಾರೆ. ಒಟಿಟಿ ವಲಯದ ಈ ಹೊಸ ಬೆಳವಣಿಗೆಯು ಸೋನಿ, ಜೀ ಎಂಟರ್‌ಟೈನ್‌ಮೆಂಟ್‌ನಂಥ ಕಂಪನಿಗಳ ಎದೆಬಡಿತ ಹೆಚ್ಚಿಸಿದೆ.
icon

(1 / 5)

ರಿಲಯನ್ಸ್ ಮತ್ತು ವಾಲ್ಟ್ ಡಿಸ್ನಿ ಕಂಪನಿ ವಿಲೀನಕ್ಕೆ ಭಾರತೀಯ ಸ್ಪರ್ಧಾ ಆಯೋಗ ಬುಧವಾ ಸಮ್ಮತಿ ಸೂಚಿಸಿದೆ. ಈ ಅನುಮೋದನೆಯ ಬಳಿಕ ಭಾರತೀಯ ಮಾಧ್ಯಮ ಜಗತ್ತಿನಲ್ಲಿ ಅತಿದೊಡ್ಡ ಸಾಮ್ರಾಜ್ಯವನ್ನು ಅಂಬಾನಿ ರಚಿಸಿದ್ದಾರೆ. ಬರೋಬ್ಬರಿ 70,000 ಕೋಟಿ ರೂಪಾಯಿ ಮೌಲ್ಯ ಡೀಲ್‌ ಕುದುರಿಸಿದ ಮುಖೇಶ್‌ ಅಂಬಾನಿ, ಭಾರತೀಯ ಮನರಂಜನಾ ವಲಯದಲ್ಲಿ ಹೊಸ ಶಕೆ ಆರಂಭಿಸಲು ಹೊರಟಿದ್ದಾರೆ. ಒಟಿಟಿ ವಲಯದ ಈ ಹೊಸ ಬೆಳವಣಿಗೆಯು ಸೋನಿ, ಜೀ ಎಂಟರ್‌ಟೈನ್‌ಮೆಂಟ್‌ನಂಥ ಕಂಪನಿಗಳ ಎದೆಬಡಿತ ಹೆಚ್ಚಿಸಿದೆ.(AP)

ದಿ ವಾಲ್ಟ್ ಡಿಸ್ನಿ ಕಂಪನಿಯ (TWDC) ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SIPL) ಹಾಗೂ ಸ್ಟಾರ್ ಟೆಲಿವಿಷನ್ ಪ್ರೊಡಕ್ಷನ್ಸ್ ಲಿಮಿಟೆಡ್ (STPL) ಇದೀಗ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL), ವಯಾಕಾಮ್‌ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್ (Viacom18) ಮತ್ತು ಡಿಜಿಟಲ್‌ 18 ಮೀಡಿಯಾ ಲಿಮಿಟೆಡ್‌ನೊಂದಿಗೆ  ವಿಲೀನವಾಗಿದೆ.
icon

(2 / 5)

ದಿ ವಾಲ್ಟ್ ಡಿಸ್ನಿ ಕಂಪನಿಯ (TWDC) ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SIPL) ಹಾಗೂ ಸ್ಟಾರ್ ಟೆಲಿವಿಷನ್ ಪ್ರೊಡಕ್ಷನ್ಸ್ ಲಿಮಿಟೆಡ್ (STPL) ಇದೀಗ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL), ವಯಾಕಾಮ್‌ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್ (Viacom18) ಮತ್ತು ಡಿಜಿಟಲ್‌ 18 ಮೀಡಿಯಾ ಲಿಮಿಟೆಡ್‌ನೊಂದಿಗೆ  ವಿಲೀನವಾಗಿದೆ.

ಈ ವಿಲೀನವು ಭಾರತದಲ್ಲಿ ಕ್ರಿಕೆಟ್ ಮತ್ತು ಟಿವಿ ಪ್ರಸಾರದ ಹೆಚ್ಚಿನ ಹಕ್ಕುಗಳನ್ನು ನಿಯಂತ್ರಿಸುತ್ತದೆ ಮತ್ತು ಜಾಹೀರಾತುದಾರರನ್ನು ನೋಯಿಸುತ್ತದೆ ಎಂದು ಸಿಸಿಐ ಈ ಹಿಂದೆ ಕಳವಳ ವ್ಯಕ್ತಪಡಿಸಿತ್ತು. ಸಹಜವಾಗಿಯೇ ರಿಲಯನ್ಸ್‌ ಕಂಪನಿಯು ಎಲ್ಲಾ ಕ್ಷೇತ್ರಗಳಲ್ಲೂ ದೊಡ್ಢಣ್ಣನಾಗುವತ್ತ ಮುನ್ನುಗ್ಗುತ್ತಿದೆ.
icon

(3 / 5)

ಈ ವಿಲೀನವು ಭಾರತದಲ್ಲಿ ಕ್ರಿಕೆಟ್ ಮತ್ತು ಟಿವಿ ಪ್ರಸಾರದ ಹೆಚ್ಚಿನ ಹಕ್ಕುಗಳನ್ನು ನಿಯಂತ್ರಿಸುತ್ತದೆ ಮತ್ತು ಜಾಹೀರಾತುದಾರರನ್ನು ನೋಯಿಸುತ್ತದೆ ಎಂದು ಸಿಸಿಐ ಈ ಹಿಂದೆ ಕಳವಳ ವ್ಯಕ್ತಪಡಿಸಿತ್ತು. ಸಹಜವಾಗಿಯೇ ರಿಲಯನ್ಸ್‌ ಕಂಪನಿಯು ಎಲ್ಲಾ ಕ್ಷೇತ್ರಗಳಲ್ಲೂ ದೊಡ್ಢಣ್ಣನಾಗುವತ್ತ ಮುನ್ನುಗ್ಗುತ್ತಿದೆ.

ಒಪ್ಪಂದದ ಪ್ರಕಾರ, ಮುಖೇಶ್ ಅಂಬಾನಿ ಅವರ ರಿಲಯನ್ಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಡಿಸ್ನಿ ನಡುವಿನ ಜಂಟಿ ಉದ್ಯಮದ ಶೇಕಡಾ 63.16ರಷ್ಟು ಒಡೆತನವನ್ನು ಹೊಂದಿರುತ್ತದೆ. ಉಳಿದ 36.84 ಪ್ರತಿಶತದಷ್ಟು ಪಾಲನ್ನು ವಾಲ್ಟ್ ಡಿಸ್ನಿ ಹೊಂದಲಿದೆ. ಈ ಜಂಟಿ ಉದ್ಯಮದ ನೇತೃತ್ವವನ್ನು ನೀತಾ ಅಂಬಾನಿ ವಹಿಸಲಿದ್ದಾರೆ.
icon

(4 / 5)

ಒಪ್ಪಂದದ ಪ್ರಕಾರ, ಮುಖೇಶ್ ಅಂಬಾನಿ ಅವರ ರಿಲಯನ್ಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಡಿಸ್ನಿ ನಡುವಿನ ಜಂಟಿ ಉದ್ಯಮದ ಶೇಕಡಾ 63.16ರಷ್ಟು ಒಡೆತನವನ್ನು ಹೊಂದಿರುತ್ತದೆ. ಉಳಿದ 36.84 ಪ್ರತಿಶತದಷ್ಟು ಪಾಲನ್ನು ವಾಲ್ಟ್ ಡಿಸ್ನಿ ಹೊಂದಲಿದೆ. ಈ ಜಂಟಿ ಉದ್ಯಮದ ನೇತೃತ್ವವನ್ನು ನೀತಾ ಅಂಬಾನಿ ವಹಿಸಲಿದ್ದಾರೆ.(PTI)

ಕಳೆದ ಬಾರಿ ಐಪಿಎಲ್ ಪ್ರಸಾರ ಹಕ್ಕುಗಳನ್ನು ಪಡೆಯಲು ಡಿಸ್ನಿ ಮತ್ತು ರಿಲಯನ್ಸ್ ತೀವ್ರ ಹೋರಾಟ ನಡೆಸಿದ್ದವು. ಕೊನೆಯಲ್ಲಿ, ಡಿಸ್ನಿ ಟಿವಿ ಪ್ರಸಾರ ಹಕ್ಕುಗಳನ್ನು ಪಡೆಯಿತು. ಆ ಬಳಿಕ ಅಂಬಾನಿ ಕಂಪನಿಯ ಡಿಸ್ನಿಯನ್ನು ಸೋಲಿಸಿ ಡಿಜಿಟಲ್ ಸ್ಟ್ರೀಮಿಂಗ್ ಮಾಲೀಕತ್ವವನ್ನು ಪಡೆಯಿತು. ಈಗ ಒಪ್ಪಂದ ಪೂರ್ಣಗೊಂಡಿದ್ದು, ಹಾಟ್‌ಸ್ಟಾರ್‌ (ಡಿಸ್ನಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್) ಮತ್ತು ಜಿಯೋ ಸಿನಿಮಾ ಒಂದರಡಿಯಲ್ಲೇ ಬರುತ್ತವೆ. ಈ ವಿಲೀನದೊಂದಿಗೆ 120 ಟಿವಿ ಚಾನೆಲ್‌ಗಳು ಮತ್ತು ಎರಡು ಸ್ಟ್ರೀಮಿಂಗ್ ಸೇವೆಗಳೊಂದಿಗೆ ರಿಲಯನ್ಸ್‌ ಭಾರತದ ಅತಿದೊಡ್ಡ ಮನರಂಜನಾ ಕಂಪನಿಯನ್ನು ರಚಿಸುತ್ತದೆ.
icon

(5 / 5)

ಕಳೆದ ಬಾರಿ ಐಪಿಎಲ್ ಪ್ರಸಾರ ಹಕ್ಕುಗಳನ್ನು ಪಡೆಯಲು ಡಿಸ್ನಿ ಮತ್ತು ರಿಲಯನ್ಸ್ ತೀವ್ರ ಹೋರಾಟ ನಡೆಸಿದ್ದವು. ಕೊನೆಯಲ್ಲಿ, ಡಿಸ್ನಿ ಟಿವಿ ಪ್ರಸಾರ ಹಕ್ಕುಗಳನ್ನು ಪಡೆಯಿತು. ಆ ಬಳಿಕ ಅಂಬಾನಿ ಕಂಪನಿಯ ಡಿಸ್ನಿಯನ್ನು ಸೋಲಿಸಿ ಡಿಜಿಟಲ್ ಸ್ಟ್ರೀಮಿಂಗ್ ಮಾಲೀಕತ್ವವನ್ನು ಪಡೆಯಿತು. ಈಗ ಒಪ್ಪಂದ ಪೂರ್ಣಗೊಂಡಿದ್ದು, ಹಾಟ್‌ಸ್ಟಾರ್‌ (ಡಿಸ್ನಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್) ಮತ್ತು ಜಿಯೋ ಸಿನಿಮಾ ಒಂದರಡಿಯಲ್ಲೇ ಬರುತ್ತವೆ. ಈ ವಿಲೀನದೊಂದಿಗೆ 120 ಟಿವಿ ಚಾನೆಲ್‌ಗಳು ಮತ್ತು ಎರಡು ಸ್ಟ್ರೀಮಿಂಗ್ ಸೇವೆಗಳೊಂದಿಗೆ ರಿಲಯನ್ಸ್‌ ಭಾರತದ ಅತಿದೊಡ್ಡ ಮನರಂಜನಾ ಕಂಪನಿಯನ್ನು ರಚಿಸುತ್ತದೆ.(AP)


ಇತರ ಗ್ಯಾಲರಿಗಳು