ಈ ನಗರದಲ್ಲಿ ಚಿಕನ್ ರೇಟ್ ಏಕಾಏಕಿ ಇಳಿಕೆ; ಮಾಂಸಪ್ರಿಯರಿಗೆ ಖುಷಿಯೋ ಖುಷಿ, ಹೆಚ್ಚಾಯ್ತು ಚಿಕನ್ ರೆಸಿಪಿ ಹುಡುಕಾಟ
ಮಾಂಸ ಪ್ರಿಯರಿಗೆ ಚಿಕನ್ ರೇಟ್ ಇಳಿಯಿತೆಂದರೆ ಭಾರಿ ಖುಷಿ. ಅಂದ ಹಾಗೆ ಈ ನಗರದಲ್ಲಿ ಚಿಕನ್ ರೇಟ್ ಏಕಾಏಕಿ ಇಳಿಕೆಯಾಯಿತು ನೋಡಿ. ಮಾಂಸಪ್ರಿಯರಿಗೆ ಖುಷಿಯೋ ಖುಷಿ. ಅದೇ ಖುಷಿಯಲ್ಲಿ ಕಳೆದ ಒಂದು ವಾರದಿಂದ ಚಿಕನ್ ರೆಸಿಪಿ ಹುಡುಕಾಟ ಕೂಡ ಹೆಚ್ಚಾಯ್ತು. ಇದು ಯಾವ ನಗರ, ಯಾವ ರೆಸಿಪಿ ಹುಡುಕುತ್ತಿದ್ದಾರೆ- ಇಲ್ಲಿದೆ ಸಚಿತ್ರ ವರದಿ.
(1 / 7)
ಮಾಂಸ ಪ್ರಿಯರಲ್ಲಿ ಬಹುತೇಕರಿಗೆ ಚಿಕನ್ ಅಂದ್ರೆ ಬಹಳ ಖುಷಿ. ನಿತ್ಯವೂ ಚಿಕನ್ ಸಿಕ್ಕರೆ ಊಟವೂ ಜಬರ್‌ದಸ್ತ್. ಹೀಗಿರುವಾಗ ಚಿಕನ್ ದುಬಾರಿಯಾದರೆ ಈ ಕನಸು ನನಸಾಗೋದು ಸಾಧ್ಯವೇ ಇಲ್ಲ. ಕೆಲವೊಮ್ಮೆ ಜಾಕ್‌ಪಾಟ್ ಹೊಡೆಯುವುದು ಅಂತ ಇರುತ್ತೆ. ಅಂಥದ್ದೊಂದು ಜಾಕ್‌ಪಾಟ್ ಸಿಕ್ಕಂತೆ ಈ ನಗರದಲ್ಲಿ ಚಿಕನ್ ರೇಟ್ ಏಕಾಏಕಿ ಇಳಿಕೆಯಾಯಿತು ನೋಡಿ. ಮಾಂಸಪ್ರಿಯರಿಗೆ ಖುಷಿಯೋ ಖುಷಿ, ಆ ಊರಲ್ಲಿ ಚಿಕನ್ ರೆಸಿಪಿ ಹುಡುಕಾಟ ಕೂಡ ಹೆಚ್ಚಾಯಿತು. ಎಲ್ಲಿಯ ನಗರ, ಯಾವ ರೆಸಿಪಿ ಎಂಬಿತ್ಯಾದಿ ವಿವರ ಈ ವರದಿಯಲ್ಲಿದೆ.
(2 / 7)
ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಹಲವಾರು ಅಂಶಗಳ ಕಾರಣ ಕೋಳಿಮಾಂಸದ ಬೆಲೆ ಕಡಿಮೆಯಾಗಿದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ಮೀನು ಮತ್ತು ತರಕಾರಿಗಳ ಬೆಲೆ ಏರಿಕೆಯಾಗಿರುವ ಈ ಸಂದರ್ಭದಲ್ಲಿ ಚಿಕನ್ ಬೆಲೆ ಇಳಿಕೆಯಾಗಿದ್ದು ಅನೇಕರಿಗೆ ಸ್ವರ್ಗ ಸುಖವೇ ಸಿಕ್ಕಂತಾಗಿದೆ.
(3 / 7)
ಕೋಲ್ಕತ್ತಾದಲ್ಲಿ ಕೋಳಿ ಬೆಲೆಯಲ್ಲಿ ಪ್ರಮುಖ ಬದಲಾವಣೆಯಾಗಿದ್ದು, ಕಳೆದ ಭಾನುವಾರ ಡ್ರೆಸ್ಡ್ ಚಿಕನ್‌ಗೆ ಕಿಲೋಗೆ ಸುಮಾರು 120 ರೂಪಾಯಿ ಇದೆ. ಪೂರ್ಣ ಕೋಳಿಗಳ ಬೆಲೆ 60-70 ರೂಪಾಯಿ ಇತ್ತು.
(4 / 7)
ಪಶ್ಚಿಮ ಬಂಗಾಳ ಪೌಲ್ಟ್ರಿ ಫೆಡರೇಶನ್ ಜುಲೈ ಎರಡನೇ ವಾರದಲ್ಲಿ ಡ್ರೆಸ್ಡ್ ಚಿಕನ್ ಪ್ರತಿ ಕೆಜಿಗೆ 300 ರೂ ದರದಲ್ಲಿ ಮಾರಾಟ ಮಾಡಿತ್ತು. ಇಡೀ ಕೋಳಿಯ ಬೆಲೆ ಕೆಜಿಗೆ 180 ರೂಪಾಯಿ ಇತ್ತು, ಆದರೆ ಈ ವಾರಾಂತ್ಯದಲ್ಲಿ ಡ್ರೆಸ್ಡ್ ಚಿಕನ್ ಬೆಲೆ 180-190 ಕೆಜಿಗೆ ಇಳಿಕೆಯಾಗಿದ್ದು, ಸಂಪೂರ್ಣ ಕೋಳಿ ಮಾಂಸದ ಬೆಲೆ 110-120 ರೂಪಾಯಿ ಇಳಿಕೆಯಾಗಿ ಅಚ್ಚರಿ ಮೂಡಿಸಿದೆ.
(5 / 7)
ಮಿತಿ ಮೀರಿದ ಬೇಸಿಗೆಯ ಬೇಗೆ ಬಳಿಕ ಬೇಡಿಕೆಯನ್ನು ಹೆಚ್ಚಿಸಿದ ಸಾರ್ವತ್ರಿಕ ಚುನಾವಣೆಗಳ ಕಾರಣ ಚಿಕನ್ ಬೆಲೆ ಏಪ್ರಿಲ್ ಮಧ್ಯದಿಂದ ಏರಿಕೆಯಾಗಿದ್ದವು. ಕೆಲವು ಮೀನುಗಳು ಮತ್ತು ತರಕಾರಿಗಳ ಬೆಲೆಗಳು ಗಗನಮುಖಿಯಾಗಿವೆ. ಆದರೆ, ಚಿಕನ್ ಬೆಲೆ ಇಳಿಕೆಯಾಗಿರುವುದು ಕೆಲವರ ನಿಟ್ಟುಸಿರಿಗೆ ಕಾರಣವಾಗಿದೆ.
(6 / 7)
ಈಗ ಮುಂಗಾರು ಸಮಯವಾಗಿದ್ದು, ಸಮುದ್ರಾಹಾರವು ವಿರಳ. ಹೀಗಾಗಿ ಮೀನುಗಳ ಬೆಲೆ ತುಸು ಹೆಚ್ಚೇ ಇರುತ್ತದೆ. ಕೋಳಿ ಹೆಚ್ಚಿನವರ ಪ್ರೋಟೀನ್‌ನ ಮೂಲವಾಗಿದೆ. ಈಗ ಕೋಳಿ ಬೆಲೆ ಇಳಿಕೆಯಾಗಿರುವ ಕಾರಣ ಪಶ್ಚಿಮ ಬಂಗಾಳದಲ್ಲಿ ಚಿಕನ್ ರೆಸಿಪಿ ಹುಡುಕಾಟ ಜೋರಾಗಿದೆ.
(7 / 7)
ಗೂಗಲ್ ಟ್ರೆಂಡ್ಸ್ ಪ್ರಕಾರ ಕಳೆದ ಒಂದು ವಾರದ ಅವಧಿಯಲ್ಲಿ ಪಶ್ಚಿಮ ಬಂಗಾಳದ ಜನ, ಚಿಲ್ಲಿ ಚಿಕನ್ ರೆಸಿಪಿ ಇನ್ ಬೆಂಗಾಲಿ, ಚಿಕನ್ ಪಕೋಡಾ ರೆಸಿಪಿ ಇನ್ ಬೆಂಗಾಲಿ, ಚಿಕನ್ ಕ್ಸಕುಟಿ, ಚಿಕನ್ ಬಿರಿಯಾನಿ ರೆಸಿಪಿ ಇನ್ ಬೆಂಗಾಲಿ, ಮ್ಯಾಗಿ ಚಿಕನ್ ನೂಡಲ್ಸ್, ಚಿಕನ್ ಲೋಲಿಪಾಪ್, ದಾದಾ ಬೌಡಿ ಬಿರಿಯಾನಿ ಬಾರಕ್‌ಪೋರ್ ಚಿಕನ್ ಬಿರಿಯಾನಿ, ಚಿಕನ್ ಡ್ರಮ್‌ಸ್ಟಿಕ್ಸ್ ಮುಂತಾದವುಗಳನ್ನು ಗೂಗಲ್‌ನಲ್ಲಿ ಹುಡುಕಾಡುತ್ತಿದ್ದಾರೆ.
ಇತರ ಗ್ಯಾಲರಿಗಳು