ITR filing 2023: ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಸಮಯದಲ್ಲಿ ಈ 8 ತಪ್ಪುಗಳನ್ನು ಎಂದಿಗೂ ಮಾಡಬೇಡಿ, ಐಟಿಆರ್ ಸಲ್ಲಿಸಲು ಟಿಪ್ಸ್
ITR filing 2023: ನೀವು ಸ್ವತಃ ನೀವಾಗಿಯೇ ಐಟಿಆರ್ ಸಲ್ಲಿಸಲು ಬಯಸಿದರೆ, ಅಂದರೆ, ಸಿಎ ಅಥವಾ ಐಟಿಆರ್ ತಜ್ಞರ ನೆರವಿಲ್ಲದೆ ನೀವೇ ಫೈಲ್ ಮಾಡುವುದಿದ್ದರೆ ತುಸು ಎಚ್ಚರಿಕೆ ಅಗತ್ಯ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಸಂದರ್ಭದಲ್ಲಿ ಮಾಡಬಾರದಾದ ಐದು ತಪ್ಪುಗಳ ವಿವರ ಇಲ್ಲಿದೆ.
(1 / 9)
Not verifying Form 26AS and AIS: ಆದಾಯ ತೆರಿಗೆ ಇಲಾಖೆಯ ಪೋರ್ಟಲ್‌ನಲ್ಲಿ ನಮೂನೆ 26ಎಎಸ್ ಮತ್ತು ವಾರ್ಷಿಕ ಮಾಹಿತಿ ಹೇಳಿಕೆ (ಎಐಎಸ್) ಅನ್ನು ಪರಿಶೀಲಿಸಿ. ನಿಮ್ಮ ಆದಾಯ, ಟಿಡಿಎಸ್, ಟಿಸಿಎಸ್ ಸಮರ್ಪಕವಾಗಿದೆಯೇ ಎಂದು ದೃಢೀಕರಿಸಿಕೊಳ್ಳಿ. ಈ ರೀತಿ ದೃಢೀಕರಣ ಮಾಡದೆ ಇರುವ ತಪ್ಪು ಮಾಡಬೇಡಿ.
(2 / 9)
ಇತರೆ ಆದಾಯ ನಮೂದಿಸದೆ ಇರುವುದು: ಹೂಡಿಕೆ, ಡಿವಿಡೆಂಡ್ ಅಥವಾ ಇತರೆ ಲಾಭಗಳ ಮಾಹಿತಿಯನ್ನು ಇತರೆ ಆದಾಯ ವಿಭಾಗದಲ್ಲಿ ನಮೂದಿಸದೆ ಇರುವ ತಪ್ಪು ಮಾಡಬೇಡಿ. ಷೇರು ಮತ್ತು ಮ್ಯೂಚುಯಲ್ ಫಂಡ್‌ನಿಂದ ಬಂದ ಆದಾಯ ನಮೂದಿಸಿ. ಈ ಆದಾಯವು ಎಐಎಸ್‌ನಲ್ಲಿ ಲಿಸ್ಟ್ ಮಾಡಲಾಗಿರುತ್ತದೆ. ತೆರಿಗೆ ಇಲಾಖೆಗೆ ತಿಳಿಯುತ್ತದೆ.
(3 / 9)
ಬಂಡವಾಳ ಲಾಭ ಮತ್ತು ನಷ್ಟ ನಮೂದಿಸದೆ ಇರುವುದು: ಬಂಡವಾಳ ಲಾಭವನ್ನು ನಮೂದಿಸುವುದು ಕಷ್ಟವೇನಲ್ಲ. ನಿಮ್ಮ ಬ್ರೋಕರ್ ಅಥವಾ ಮ್ಯೂಚುಯಲ್ ಫಂಡ್ ಸ್ಟೇಟ್‌ಮೆಂಟ್‌ನಲ್ಲಿ ಈ ವಿವರ ಇರುತ್ತದೆ.
(Photo via Pixabay)(4 / 9)
ವಿನಾಯಿತಿ ಮಿಸ್ ಮಾಡಿಕೊಳ್ಳಬೇಡಿ: ನಿಮಗೆ ಲಭ್ಯವಿರುವ ವಿನಾಯಿತಿಗಳ ಕುರಿತು ತಿಳಿದುಕೊಳ್ಳಿ. ಸೆಕ್ಷನ್ 80ಟಿಟಿಎಯಡಿ 10,000 ಉಳಿತಾಯ ಬ್ಯಾಂಕ್‌ನ ಬಡ್ಡಿ ವಿನಾಯಿತಿಯಿದೆ. ಹಿರಿಯ ನಾಗರಿಕರಿಗೆ 80TTBಯಡಿ 50 ಸಾವಿರ ರೂ.ವರೆಗೆ ವಿನಾಯಿತಿ ಇರುತ್ತದೆ.
(iStock)(5 / 9)
ವಿದೇಶಿ ಆದಾಯ ಮತ್ತು ಸ್ವತ್ತಿನ ವರದಿ ನೀಡದೆ ಇರುವುದು: ನಿಮ್ಮ ತೆರಿಗೆ ರಿಟರ್ನ್‌ನಲ್ಲಿ ಎಲ್ಲಾ ವಿದೇಶಿ ಸ್ವತ್ತುಗಳ ಮಾಹಿತಿ ನೀಡಿರಿ. ವಿದೇಶಿ ಕಂಪನಿಗಳಲ್ಲಿರುವ ಷೇರುಗಳು, ವಿದೇಶಿ ಬ್ಯಾಂಕ್‌ಗಳಲ್ಲಿರುವ ಫಂಡ್‌ಗಳ ವಿವರ ನೀಡಿ.
(7 / 9)
ಕೆಲವೊಂದು ವೆಚ್ಚಗಳನ್ನು ನಮೂದಿಸಲು ಮರೆಯುವುದು: ಆರೋಗ್ಯ ಚೆಕಪ್, ಹಿರಿಯರ ಮೆಡಿಕಲ್ ವೆಚ್ಚ, ಕೆಲವೊಂದು ಕಾಯಿಲೆಗಳಿಗೆ ಮಾಡಿದ ಖರ್ಚು ಇತ್ಯಾದಿಗಳನ್ನು ಮರೆಯದೆ ನಮೂದಿಸಿ.
(8 / 9)
ಹೆಂಡತಿ ಅಥವಾ ಮಗುವಿನ ಹೆಸರಿನ ಹೂಡಿಕೆ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಹೆಸರಿನ ಹೂಡಿಕೆಯ ಹೊಣೆಗಾರಿಕೆ ಹೆತ್ತವರಿಗೆ ಬರುತ್ತದೆ. ಇದೇ ರೀತಿ, ಸಂಗಾತಿಗೆ ಹಣ ಉಡುಗೊರೆ ನೀಡಿರುವುದರಿಂದ ಬಂದಿರುವ ಆದಾಯವೂ ನಿಮ್ಮ ಲೆಕ್ಕಕ್ಕೆ ಬರುತ್ತದೆ.
ಇತರ ಗ್ಯಾಲರಿಗಳು







