ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pepper Rate: ಕರ್ನಾಟಕದ ಕಾಳು ಮೆಣಸು ಬೆಲೆಯಲ್ಲಿ ಏರಿಕೆ ಖುಷಿ, ಎಷ್ಟಿದೆ ಕೆಜಿ ಕರಿ ಮೆಣಿಸಿನ ಬೆಲೆ

Pepper Rate: ಕರ್ನಾಟಕದ ಕಾಳು ಮೆಣಸು ಬೆಲೆಯಲ್ಲಿ ಏರಿಕೆ ಖುಷಿ, ಎಷ್ಟಿದೆ ಕೆಜಿ ಕರಿ ಮೆಣಿಸಿನ ಬೆಲೆ

  • Market News ಕರ್ನಾಟಕದ ಮಲೆನಾಡು ಭಾಗದಲ್ಲಿ ಬೆಳೆಯುವ ಕಪ್ಪು ಕಾಳು ಮೆಣಸಿಗೆ( Black pepper) ವಿದೇಶದಲ್ಲಿ ಬೇಡಿಕೆ. ಈ ಬಾರಿ ಕಾಳು ಮೆಣಿಸಿಗೆ ಉತ್ತಮ ಬೆಲೆ ಸಿಗುತ್ತಿದೆ. 

ಕರ್ನಾಟಕದ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಭಾಗದಲ್ಲಿ ಕಾಳು ಮೆಣಸನ್ನು ಅಲ್ಲಿನ ಹವಾಗುಣಕ್ಕೆ ಅನುಗುಣವಾಗಿ ಬೆಳೆಯಲಾಗುತ್ತಿದೆ.
icon

(1 / 7)

ಪ್ರಮುಖ ಸಾಂಬಾರ ಬೆಳೆಯಾದ ಕಾಳು ಮೆಣಸಿಗೆ ಭಾರತದಲ್ಲಿ ಮಾತ್ರವಲ್ಲ. ಹೊರ ದೇಶಗಳಲ್ಲೂ ವಿಪರೀತ ಬೇಡಿಕೆ. ಇಲ್ಲಿನ ಗುಣಮಟ್ಟವೂ ಅದಕ್ಕೆ ಕಾರಣ.
icon

(2 / 7)

ಆರು ವರ್ಷದ ನಂತರ ಕರ್ನಾಟಕದ ಮಲೆನಾಡಿನ ಕಾಳು ಮೆಣಸಿನ ಬೆಲೆ ಹೆಚ್ಚಳವಾಗಿರುವುದು ಕಂಡು ಬಂದಿದೆ.
icon

(3 / 7)

2018ರಲ್ಲಿ ಕೆ.ಜಿ ಕಾಳುಮೆಣಸಿನ ಬೆಲೆ  ₹780ಗೆ ತಲುಪಿತ್ತು ಸೋಮವಾರ  ಕೆ.ಜಿ ಕಾಳುಮೆಣಸು  ₹660ಕ್ಕೆ ಮಾರಾಟ ಆಗಿದ್ದು 6 ವರ್ಷಗಳಲ್ಲಿ ಇದು ಗರಿಷ್ಠ ಧಾರಣೆ. 
icon

(4 / 7)

ಈ ವರ್ಷದ ಫೆಬ್ರುವರಿಯಲ್ಲಿ ಕಾಳುಮೆಣಸು ಕೊಯ್ಲು ನಡೆಯುತ್ತಿದ್ದಾಗ ಕೆ.ಜಿಗೆ  ₹525ರಷ್ಟಿದ್ದ ಧಾರಣೆ  2 ವಾರಗಳಲ್ಲಿ ಸತತ ಏರುಗತಿಯಲ್ಲಿದೆ. ಇದು ಇನ್ನೂ ಹೆಚ್ಚುವ ನಿರೀಕ್ಷೆಗಳಿವೆ.
icon

(5 / 7)

ವಿಯೆಟ್ನಾಂನಲ್ಲಿ ಪ್ರತಿಕೂಲ ಹವಾಮಾನದ ಕಾರಣ ರೊಬಸ್ಟಾ ಕಾಫಿ ಹಾಗೂ ಕಾಳುಮೆಣಸಿನ ಇಳುವರಿ ಕಡಿಮೆ ಆಗಿದೆ. ಹೀಗಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ಧಾರಣೆ ಹೆಚ್ಚುತ್ತಿರುವ ಚರ್ಚೆಗಳು ನಡೆದಿವೆ. 
icon

(6 / 7)

ಉತ್ತಮ ಗುಣಮಟ್ಟದ ಕಾರಣಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಕಾಳುಮೆಣಸು ಟನ್‍ಗೆ 8,000 ಡಾಲರ್ ಬೆಲೆ ಸಿಗುತ್ತಿದೆ. ಅದೇ ಬ್ರೆಜಿಲ್‌ನ ಕಾಳುಮೆಣಸಿಗೆ 7,700 ಡಾಲರ್‌, ವಿಯೆಟ್ನಾಂ ಮೆಣಸಿಗೆ 6,500 ಡಾಲರ್ ಮತ್ತು ಮಲೇಷ್ಯಾ ಮೆಣಸಿಗೆ 4,900 ಡಾಲರ್ ಬೆಲೆ ಇರುವ ಮಾಹಿತಿಯಿದೆ.
icon

(7 / 7)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು