Post Office Savings: ರಿಸ್ಕ್ ಇಲ್ಲದ ಹೂಡಿಕೆ ಮಾಡಲು ಬಯಸುವಿರಾ, ಅಂಚೆ ಕಚೇರಿ ಇಲಾಖೆಯ ಅತ್ಯುತ್ತಮ ಉಳಿತಾಯ ಯೋಜನೆಗಳ ಕುರಿತು ಇಲ್ಲಿದೆ ವಿವರ
- ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಭಯಪಡುತ್ತಿದ್ದೀರಾ, ರಿಸ್ಕ್ ಇಲ್ಲದ ಹೂಡಿಕೆ ಆಯ್ಕೆಗಳ ಕುರಿತು ಪರಿಶೀಲನೆ ನಡೆಸುತ್ತಿದ್ದೀರಾ, ಹಾಗಾದರೆ, ಅಂಚೆ ಕಚೇರಿಯಲ್ಲಿ ರಿಸ್ಕ್ ಇಲ್ಲದೆ ಹೂಡಿಕೆ ಮಾಡುವ ಆಯ್ಕೆಗಳ ಕುರಿತು ಇಲ್ಲಿ ತಿಳಿದುಕೊಳ್ಳೋಣ.
- ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಭಯಪಡುತ್ತಿದ್ದೀರಾ, ರಿಸ್ಕ್ ಇಲ್ಲದ ಹೂಡಿಕೆ ಆಯ್ಕೆಗಳ ಕುರಿತು ಪರಿಶೀಲನೆ ನಡೆಸುತ್ತಿದ್ದೀರಾ, ಹಾಗಾದರೆ, ಅಂಚೆ ಕಚೇರಿಯಲ್ಲಿ ರಿಸ್ಕ್ ಇಲ್ಲದೆ ಹೂಡಿಕೆ ಮಾಡುವ ಆಯ್ಕೆಗಳ ಕುರಿತು ಇಲ್ಲಿ ತಿಳಿದುಕೊಳ್ಳೋಣ.
(1 / 7)
ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೆಟ್: ಇದು ತುಂಬಾ ಜನಪ್ರಿಯವಾದ ಅಂಚೆ ಇಲಾಖೆ ಹೂಡಿಕೆಯಾಗಿದೆ. ಈಗ ಇದರಲ್ಲಿ ಶೇಕಡ 7.7ರಷ್ಟು ಬಡ್ಡಿದರ ದೊರಕುತ್ತದೆ.
(2 / 7)
ಕಿಶಾನ್ ವಿಕಾಸ್ ಪಾತ್ರ- ಇದರಲ್ಲಿ ಕನಿಷ್ಠ ಬಂಡವಾಳ 1000 ರೂಪಾಯಿ ಹೂಡಿಕೆ ಮಾಡಬಹುದು. ಈಗ ಶೇಕಡ 7 ಬಡ್ಡಿದರವಿದೆ. ಈ ಸ್ಕೀಮ್‌ನಲ್ಲಿ ಹಾಕಿದ ಹಣ 123 ತಿಂಗಳಿನಲ್ಲಿ ಒಳ್ಳೆಯ ಗಳಿಕೆ ಕೊಡುತ್ತದೆ.
(3 / 7)
ಪೋಸ್ಟ್ ಆಫಿಸ್ ಟೈಮ್ ಠೇವಣಿ( post office time deposit): ಒಂದು ವರ್ಷದವರೆಗೆ ಹೂಡಿಕೆ ಮಾಡಬಹುದು. ಶೇಕಡ 6.9 ಬಡ್ಡಿದರ ದೊರಕುತ್ತದೆ. ಇದಕ್ಕಿಂತ ಹೆಚ್ಚಿನ ಅವಧಿಗೆ ಹೂಡಿಕೆ ಮಾಡಿದರೆ ತುಸು ಹೆಚ್ಚು ಬಡ್ಡಿದರ ದೊರಕುತ್ತದೆ. 2-3 ವರ್ಷಕ್ಕೆ ಶೇಕಡ 7 ಬಡ್ಡಿದರ ದೊರಕುತ್ತದೆ. ಅದಕ್ಕೂ ಹೆಚ್ಚು ವರ್ಷ ಹೂಡಿಕೆ ಮಾಡಿದರೆ ಶೇಕಡ 7.5 ಬಡ್ಡಿದರ ದೊರಕುತ್ತದೆ.
(4 / 7)
ಎಂಐಎಸ್ (ಮಾಸಿಕ ಆದಾಯ ಯೋಜನೆ): ನಿಯಮಿತ ಆದಾಯ ಪಡೆಯಲು ಇದು ಉತ್ತಮ. ಶೇಕಡ 7.4 ಬಡ್ಡಿದರ ಇರುತ್ತದೆ. ಮೊದಲ ಐದು ವರ್ಷ ಬಂಡವಾಳ ಲಾಕ್ ಆಗಿರುತ್ತದೆ.
(5 / 7)
ಅಂಚೆ ಕಚೇರಿ ಉಳಿತಾಯ ಖಾತೆ: ಇದು ಸಾಮಾನ್ಯ ಉಳಿತಾಯ ಖಾತೆಗೆ ಸಮನಾಗಿದೆ. ಈಗ ಶೇಕಡ 4ರಷ್ಟು ಬಡ್ಡಿದರ ದೊರಕುತ್ತದೆ. ಟಿಡಿಎಸ್ ಕಡಿತವಾಗುವುದಿಲ್ಲ.
(6 / 7)
ಪೋಸ್ಟ್ ಆಫೀಸ್ ರಿಕರಿಂಗ್ ಡೆಪೊಸಿಟ್ (ಆರ್‌ಡಿ): ಕಡಿಮೆ ಹಣದೊಂದಿಗೆ ಉಳಿತಾಯ ಮಾಡಲು ಬಯಸುವವರಿಗೆ ಈ ಎಫ್‌ಡಿ ಉಪಯುಕ್ತ. 100 ರೂಪಾಯಿಯಿಂದ ಠೇವಣಿ ಇಡಬಹುದು.
ಇತರ ಗ್ಯಾಲರಿಗಳು