Stallion IPO GMP: ಸ್ಟಾಲಿಯನ್ ಇಂಡಿಯಾ ಐಪಿಒದ ಇಂದಿನ ಜಿಎಂಪಿ ಎಷ್ಟು? ಆರಂಭಿಕ ಷೇರು ವಿತರಣೆಗೆ ಬಿಡ್ ಮಾಡಲು ಜ 20 ಕೊನೆದಿನ
- Stallion India IPO GMP Today: ಸ್ಟಾಲಿಯನ್ ಇಂಡಿಯಾ ಐಪಿಒ ಈಗಾಗಲೇ ಬಿಡ್‌ಗೆ ತೆರೆದಿದೆ. ಜನವರಿ 20ರವರೆಗೆ ಚಂದಾದಾರಿಕೆಗೆ ಅವಕಾಶವಿರುತ್ತದೆ. ಶನಿವಾರ ಜನವರಿ 18ರಂದು ಸ್ಟಾಲಿಯನ್ ಇಂಡಿಯಾ ಫ್ಲೋರೋಕೆಮಿಕಲ್ಸ್ ಲಿಮಿಟೆಡ್ ಐಪಿಒದ ಜಿಎಂಪಿ 40 ರೂಪಾಯಿ ಇದೆ. ಈ ಐಪಿಒಗೆ ಅರ್ಜಿ ಸಲ್ಲಿಸಬಹುದೇ?
- Stallion India IPO GMP Today: ಸ್ಟಾಲಿಯನ್ ಇಂಡಿಯಾ ಐಪಿಒ ಈಗಾಗಲೇ ಬಿಡ್‌ಗೆ ತೆರೆದಿದೆ. ಜನವರಿ 20ರವರೆಗೆ ಚಂದಾದಾರಿಕೆಗೆ ಅವಕಾಶವಿರುತ್ತದೆ. ಶನಿವಾರ ಜನವರಿ 18ರಂದು ಸ್ಟಾಲಿಯನ್ ಇಂಡಿಯಾ ಫ್ಲೋರೋಕೆಮಿಕಲ್ಸ್ ಲಿಮಿಟೆಡ್ ಐಪಿಒದ ಜಿಎಂಪಿ 40 ರೂಪಾಯಿ ಇದೆ. ಈ ಐಪಿಒಗೆ ಅರ್ಜಿ ಸಲ್ಲಿಸಬಹುದೇ?
(1 / 9)
Stallion India IPO GMP Today: ಸ್ಟಾಲಿಯನ್ ಇಂಡಿಯಾ ಐಪಿಒಗೆ ಸಾಕಷ್ಟು ಜನರು ಬಿಡ್ ಮಾಡಿರಬಹುದು. ಇನ್ನೊಂದಿಷ್ಟು ಜನರು ಜಿಎಂಪಿ ಏರಿಳಿತ ನೋಡಿಕೊಂಡು ಜನವರಿ 20ರ ಕೊನೆಯ ದಿನದಂದು ಬಿಡ್ ಮಾಡಲು ಯೋಜಿಸಿರಬಹುದು. ಜನವರಿ 18ರಂದು ಸ್ಟಾಲಿಯನ್ ಇಂಡಿಯಾ ಐಪಿಒದ ಜಿಎಂಪಿ 40 ರೂಪಾಯಿ ಇತ್ತು. ಜಿಎಂಪಿ ಎಂದರೆ ಗ್ರೇ ಮಾರ್ಕೆಟ್ ಪ್ರೀಮಿಯಂ. ಈ ಐಪಿಒ ಎಷ್ಟು ದರಕ್ಕೆ ಲಿಸ್ಟ್ ಆಗುವ ಸಾಧ್ಯತೆ ಇದೆ ಎಂದು ತಿಳಿದುಕೊಳ್ಳುವ ಮೊದಲು ಸ್ಟಾಲಿಯನ್ ಐಪಿಒದ ಕುರಿತು ಒಂದಿಷ್ಟು ವಿವರ ಪಡೆಯೋಣ.
(2 / 9)
Stallion India IPO : 199.45 ಕೋಟಿ ರೂಪಾಯಿಯ ಬುಕ್ ಬಿಲ್ಟ್ ಇಶ್ಯು ಇದಾಗಿದೆ. ಇದರಲ್ಲಿ 1.79 ಕೋಟಿ ಷೇರುಗಳ ಹೊಸ ಇಶ್ಯು ( 160.73 ಕೋಟಿ ರೂಪಾಯಿ) ಮತ್ತು 0.43 ಕೋಟಿ ಷೇರುಗಳ ಆಫರ್ ಫಾರ್ ಸೇಲ್ (38.72 ಕೋಟಿ ರೂಪಾಯಿ) ಒಳಗೊಂಡಿದೆ.
(3 / 9)
ಸ್ಟಾಲಿಯನ್ ಇಂಡಿಯಾ ಐಪಿಒ ಹಂಚಿಕೆಯನ್ನು ಜನವರಿ 21, 2025 ರಂದು ಮಂಗಳವಾರ ಅಂತಿಮಗೊಳಿಸುವ ನಿರೀಕ್ಷೆಯಿದೆ. ಸ್ಟಾಲಿಯನ್ ಇಂಡಿಯಾ ಐಪಿಒ ಬಿಎಸ್‌ಇ, ಎನ್‌ಎಸ್‌ಇಯಲ್ಲಿ ಪಟ್ಟಿ ಮಾಡಲಾಗುತ್ತದೆ. ಜನವರಿ 23, 2025ರಂದು ಷೇರುಪೇಟೆಯಲ್ಲಿ ಲಿಸ್ಟ್ ಮಾಡಲಾಗುತ್ತದೆ.
(Pixabay)(4 / 9)
ಸ್ಟಾಲಿಯನ್ ಇಂಡಿಯಾ ಪ್ರತಿ ಷೇರಿನ ಐಪಿಒ ದರ 85 ರೂಪಾಯಿಯಿಂದ 90 ರೂಪಾಯಿ ನಿಗದಿಪಡಿಸಲಾಗಿದೆ. ಕನಿಷ್ಠ 165 ಷೇರುಗಳ ಒಂದು ಲಾಟ್‌ಗೆ ಬಿಡ್ ಮಾಡಲು 14,850 ರೂಪಾಯಿ ಬೇಕಿರುತ್ತದೆ. 2,310 ಷೇರುಗಳ 14 ಲಾಟ್‌ಗಳಿಗೆ (ಎಸ್‌ಎನ್‌ಐಐ) 2,07,900 ರೂಪಾಯಿ ಮತ್ತು 11,220 ಷೇರುಗಳ 68 ಲಾಟ್‌ಗಳಿಗೆ (ಬಿಎನ್‌ಐಐ) 10,09,800 ರೂಪಾಯಿ ಬೇಕಿರುತ್ತದೆ.
(Pixabay)(5 / 9)
ಸ್ಟಾಲಿಯನ್ ಐಪಿಒದ ಜಿಎಂಪಿ ಎಷ್ಟಿದೆ?: ಜನವರಿ 18ರಂದು ಸ್ಟಾಲಿಯನ್ ಐಪಿಒದ ಜಿಎಂಪಿ 40 ರೂಪಾಯಿ ಇದೆ. ಜನವರಿ 17ರಂದು ಮತ್ತು ಜನವರಿ 16ರಂದು ಜಿಎಂಪಿ 38 ರೂಪಾಯಿ ಇತ್ತು. ಜನವರಿ 15ರಂದು ಅಂದರೆ ಐಪಿಒಗೆ ಬಿಡ್ ಸಲ್ಲಿಸುವ ಮೊದಲ ದಿನ ಜಿಎಂಪಿ 48 ರೂಪಾಯಿ ಇತ್ತು.
(Pixabay)(6 / 9)
ಜಿಎಂಪಿ ಎಷ್ಟಿದೆಯೋ ಅಷ್ಟು ಹೆಚ್ಚು ದರಕ್ಕೆ ಐಪಿಒ ಲಿಸ್ಟ್ ಆಗಬಹುದು ಎನ್ನುವುದು ನಂಬಿಕೆ. ಇದು ನಿಜವಾಗಿರಬೇಕೆಂದಿಲ್ಲ. ಇದಕ್ಕೆ ಯಾವುದೇ ಆಧಾರಗಳು ಇಲ್ಲ. ಇದು ಐಪಿಒ ಲಿಸ್ಟ್ ಆಗುವ ದರದ ಅಧಿಕೃತ ಸೂಚಕವೂ ಅಲ್ಲ. ಆದರೆ, ಜಿಎಂಪಿ ಉತ್ತಮವಾಗಿದ್ದರೆ ಐಪಿಒ ಸಕಾರಾತ್ಮಕ ದರದಲ್ಲಿ ಲಿಸ್ಟ್ ಆಗಬಹುದೆಂಬ ಭಾವನೆ ಎಲ್ಲರಲ್ಲಿಯೂ ಇದೆ. ಇದು ಸಾಕಷ್ಟು ಬಾರಿ ನಿಜವಾಗಿದೆ.
(Pixabay)(7 / 9)
ಈ ಐಪಿಒಗೆ ಬಿಡ್ ಮಾಡಬಹುದೇ?: ಸ್ಟಾಲಿನ್ ಇಂಡಿಯಾ ಐಪಿಒಗೆ ಚಿತ್ತೋರ್‌ಗರ್‌ನ ಐಪಿಒ ವಿಶ್ಲೇಷಕರು ಅಪ್ಲೈ (ಅರ್ಜಿ ಸಲ್ಲಿಸಬಹುದು) ಎಂದಿದ್ದಾರೆ. ಈ ಕಂಪನಿಯ ಬಗ್ಗೆ ಒಂದಿಷ್ಟು ತಿಳಿದುಕೊಂಡು, ಷೇರುಪೇಟೆಯ ಕುರಿತು ಜ್ಞಾನವಿದ್ದರೆ ಈ ಐಪಿಒಗೆ ಬಿಡ್ ಮಾಡಬೇಕೇ ಅಥವಾ ಬೇಡವೇ ಎಂದು ಸ್ವಯಂ ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಿ.
(8 / 9)
ಸ್ಟಾಲಿಯನ್ ಇಂಡಿಯಾ ಫ್ಲೋರೋಕೆಮಿಕಲ್ಸ್ ಲಿಮಿಟೆಡ್ ಕಂಪನಿಯ ಬಗ್ಗೆ. ಇದು 2002ರಲ್ಲಿ ಸ್ಥಾಪನೆಯಾದ ಕಂಪನಿ. ರೆಫ್ರಿಜರೆಂಟ್‌ಗಳು ಮತ್ತು ಕೈಗಾರಿಕಾ ಅನಿಲಗಳ ಬಲ್ಕಿಂಗ್, ಮಿಶ್ರಣ ಮತ್ತು ಸಂಸ್ಕರಣೆ ಮತ್ತು ಗ್ಯಾಸ್ ತುಂಬಿರುವ ಕ್ಯಾನ್‌ಗಳು ಮತ್ತು ಸಣ್ಣ ಸಿಲಿಂಡರ್‌ಗಳು/ಕಂಟೇನರ್‌ಗಳ ಮಾರಾಟದಂತಹ ಚಟುವಟಿಕೆಗಳನ್ನು ಈ ಕಂಪನಿ ಮಾಡುತ್ತದೆ. ಕಂಪನಿಯು ಖಲಾಪುರ್ (ಮಹಾರಾಷ್ಟ್ರ), ಘಿಲೋತ್ (ರಾಜಸ್ಥಾನ), ಮಾನೇಸರ್ (ಹರಿಯಾಣ) ಮತ್ತು ಪನ್ವೇಲ್ (ಮಹಾರಾಷ್ಟ್ರ)ದಲ್ಲಿ ಸ್ಥಾವರಗಳನ್ನು ಹೊಂದಿದೆ.
(9 / 9)
ಡಿಸ್‌ಕ್ಲೈಮರ್/ ಹಕ್ಕುತ್ಯಾಗ: ಷೇರುಪೇಟೆ ಮತ್ತು ಐಪಿಒ ಕುರಿತು ಮಾಹಿತಿ ನೀಡುವ ಸಲುವಾಗಿ ಈ ಲೇಖನ ಬರೆಯಲಾಗಿದೆ. ಯಾವುದೇ ಷೇರು ಅಥವಾ ಐಪಿಒ ಖರೀದಿಸಬೇಕೆಂದು ಹಿಂದೂಸ್ತಾನ್ ಟೈಮ್ಸ್ ಕನ್ನಡವು ಶಿಫಾರಸು ಮಾಡುವುದಿಲ್ಲ. ಎಚ್‌ಟಿ ಕನ್ನಡದ ಓದುಗ ಹೂಡಿಕೆದಾರರು ಷೇರುಪೇಟೆಯ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
(Pixabay)ಇತರ ಗ್ಯಾಲರಿಗಳು