Opening Bell: ಸೆನ್ಸೆಕ್ಸ್ ನಿಫ್ಟಿ ಉತ್ತಮ ಆರಂಭ ಸಾಧ್ಯತೆ, ಇಂದು ಷೇರುಪೇಟೆಯಲ್ಲಿ ಹೂಡಿಕೆ ಮಾಡುವಿರಾ, ಈ 9 ಅಂಶ ಗಮನಿಸಿ
Stock Market News: ಜಾಗತಿಕ ಸೂಚ್ಯಂಕಗಳ ಅಪಾಯದ ಭೀತಿಯ ನಡುವೆಯೂ ಸೋಮವಾರ ಭಾರತೀಯ ಷೇರುಪೇಟೆ ಉತ್ತಮ ಆರಂಭ ಪಡೆದುಕೊಳ್ಳುವ ಸಾಧ್ಯತೆಯಿದೆ. ಚೀನಾದ ಜಿಡಿಪಿ ಫಲಿತಾಂಶ ಇತ್ಯಾದಿಗಳೂ ಷೇರುಪೇಟೆ ಮೇಲೆ ಪರಿಣಾಮ ಬೀರಲಿದೆ. ಇಂದು ಬೆಳಗ್ಗೆ ಗಿಫ್ಟ್ ನಿಫ್ಟಿಯು 23 ಅಂಕ ಏರಿಕೆ ಕಂಡಿದೆ.
(1 / 9)
ಎಸ್‌ಆಂಡ್‌ಪಿ 500 ಮತ್ತು ನಾಸ್ದಾಕ್ ಷೇರುಪೇಟೆಯು ಶುಕ್ರವಾರ ಇಳಿಕೆ ಕಂಡಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ತೊಂದರೆ, ಗ್ರಾಹಕ ಭಾವನೆ ಇತ್ಯಾದಿ ಕಾರಣಗಳಿಂದ ಇಳಿಕೆ ಕಂಡಿದೆ. ಅಮೆರಿಕದ ಕೆಲವು ಬ್ಯಾಂಕ್‌ಗಳ ತ್ರೈಮಾಸಿಕ ಫಲಿತಾಂಶ ಉತ್ತಮಗೊಂಡಿದೆ. ವಾಲ್ ಸ್ಟ್ರೀಟ್‌ನ ಪ್ರಮುಖ ಮೂರು ಸೂಚ್ಯಂಕಗಳು ಉತ್ತಮ ಆರಂಭ ಪಡೆದರೂ, ಅಂತ್ಯದಲ್ಲಿ ಇಳಿಮುಖವಾಗಿದೆ. ಡೋಜಾನ್ಸ್ ಕೊಂಚ ಏರಿಕೆ ದಾಖಲಿಸಿದೆ. (REUTERS)
(2 / 9)
ಏಷ್ಯಾ ಮಾರುಕಟ್ಟೆಯು ಈ ವಾರ ದುರ್ಬಲ ಆರಂಭ ಪಡೆದಿವೆ. ನಿಖೈಯು ಶೇಕಡ 1.69ರಷ್ಟು ಇಳಿಕೆ ಕಂಡಿದೆ. ಕೋಸ್ಪಿ ಸೂಚ್ಯಂಕ ಶೇಕಡ 0.55 ಇಳಿಕೆ ಕಂಡಿದೆ. ನಾಳೆ ಚೀನಾವು ಮೂರನೇ ತ್ರೈಮಾಸಿಕದ ವರದಿ ಪ್ರಕಟಿಸಲಿದೆ. ಷೇರು ಪೇಟೆ ಈ ಕುರಿತು ಆತಂಕದಿಂದ ನೋಡುತ್ತಿದೆ.
(3 / 9)
ಇಂದು ಬೆಳಗ್ಗೆ 8.20 ಗಂಟೆಗೆ ಗಿಫ್ಟ್ ನಿಫ್ಟಿಯು ಶೇಕಡ 0.12 ಅಥವಾ 23 ಅಂಕದಷ್ಟು ಏರಿಕೆ ಕಂಡು 19,723ಕ್ಕೆ ತಲುಪಿದೆ. ಭಾರತೀಯ ಷೇರುಪೇಟೆಯ ಉತ್ತಮ ಆರಂಭದ ಮುನ್ಸೂಚನೆ ಇದಾಗಿದೆ.
(4 / 9)
ಶುಕ್ರವಾರ ಭಾರತದ ಷೇರುಪೇಟೆ ಸೂಚ್ಯಂಕಗಳು ಕೆಂಪಾಗಿದ್ದವು. ಎಚ್‌ಡಿಎಫ್‌ಸಿ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಸ್ಟೇಕ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್‌ನಂತಹ ಷೇರುಗಳ ಮಾರಾಟ ಹೆಚ್ಚಾಗಿದೆ. ನಿಫ್ಟಿಯು 42.95 ಅಂಕ ಇಳಿಕೆ ಕಂಡು 19,751.05ಕ್ಕೆ ತಲುಪಿತ್ತು. ಶುಕ್ರವಾರ ಸೆನ್ಸೆಕ್ಸ್ ಸೂಚ್ಯಂಕವು 125.65 ಅಂಕ ಇಳಿಕೆ ಕಂಡು 66,282.74ಕ್ಕೆ ತಲುಪಿದೆ.
(5 / 9)
ಇಂದು ಭಾರತದ ಬೃಹತ್ ಖಾಸಗಿ ಬ್ಯಾಂಕ್ ಎಚ್‌ಡಿಎಫ್‌ಸಿಯು ತನ್ನ ಎರಡನೇ ತ್ರೈಮಾಸಿಕದ ವರದಿ ಪ್ರಕಟಿಸಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನದ ಬಳಿಕದ ಮೊದಲ ತ್ರೈಮಾಸಿಕ ವರದಿ ಇದಾಗಿದೆ. (Bloomberg)
(6 / 9)
ಇಂದು ಆರಂಭಿಕ ವಹಿವಾಟಿನಲ್ಲಿ ಏಷ್ಯಾದಲ್ಲಿ ತೈಲ ದರಗಳು ತುಸು ಇಳಿಕೆ ಕಂಡಿದೆ. ಬ್ರೆಂಟ್ ಫ್ಯೂಚರ್ಸ್ 36 ಸೆಂಟ್‌ನಷ್ಟು ಇಳಿಕೆ ಕಂಡು ಪ್ರತಿಬ್ಯಾರೆಲ್‌ಗೆ 90.53 ಡಾಲರ್‌ಗೆ ತಲುಪಿದೆ. ಯುಎಸ್ ವೆಸ್ಟ್ ಟೆಕ್ಸ್ ಇಂಟರ್‌ಮೀಡಿಯೆಟ್ ಕ್ರೂಡ್ ದರವು 37ಸೆಂಟ್‌ನಷ್ಟು ಇಳಿಕೆ ಕಂಡು ಬ್ಯಾರೆಲ್‌ಗೆ 87.3 ಡಾಲರ್‌ಗೆ ತಲುಪಿದೆ.(REUTERS)
(7 / 9)
ಚಿನ್ನದ ದರವು ಒಂದು ತಿಂಗಳಲ್ಲಿಯೇ ಅತ್ಯಧಿಕ ದರಕ್ಕೆ ತಲುಪಿದೆ. ಇಸ್ರೇಲ್ ಮತ್ತು ಪ್ಯಾಲೇಸ್ತಿನ್ ಯುದ್ಧದ ಕಾರ್ಮೋಡದಿಂದಾಗಿ ಚಿನ್ನದ ಮೇಲೆ ಹೂಡಿಕೆ ಸುರಕ್ಷಿತ ಎಂಬ ಭಾವನೆ ಹೆಚ್ಚಾಗಿರುವುದು ಇದಕ್ಕೆ ಕಾರಣ.
(8 / 9)
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) 317.01 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಅಕ್ಟೋಬರ್ 13 ರಂದು 102.88 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಇತರ ಗ್ಯಾಲರಿಗಳು