Tata Curvv ಹೇಗಿದೆ? ಇಲ್ಲಿವೆ ನೋಡಿ ಬೊಂಬಾಟ್ ಫೋಟೋಸ್, ಕಣ್ತುಂಬಿಕೊಳ್ಳಿ
Tata Curvv Launched: ಕಾರು ಪ್ರಿಯರ ಪೈಕಿ ಹಲವರಿಗೆ ಟಾಟಾ ಕಾರುಗಳೆಂದರೆ ಅಚ್ಚುಮೆಚ್ಚು. ಹೊಸ ಕಾರುಗಳು ಬಿಡುಗಡೆಯಾಗುವುದನ್ನೇ ಕಾಯುತ್ತಿರುತ್ತಾರೆ. ಅವರಿಗೊಂದು ಖುಷಿ ಸುದ್ದಿ. ಬಹು ನಿರೀಕ್ಷಿತ ಟಾಟಾ ಕರ್ವ್ ಬಿಡುಗಡೆಯಾಗಿದೆ. ಈ ಕಾರಿನ ಫೀಚರ್ಸ್, ದರ ಮತ್ತು ಬೊಂಬಾಟ್ ಫೋಟೋಸ್ ಇಲ್ಲಿವೆ ನೋಡಿ, ಕಣ್ತುಂಬಿಕೊಳ್ಳಿ!
(1 / 6)
ಭಾರತೀಯ ಕಾರು ಮಾರುಕಟ್ಟೆಗೆ ಟಾಟಾ ಮೋಟಾರ್ಸ್ ತನ್ನ ಟಾಟಾ ಕರ್ವ್ ICE ಕಾರನ್ನು ಪರಿಚಯಿಸಿದೆ. ಈಗಾಗಲೇ ಮಾರುಕಟ್ಟೆ ಪ್ರವೇಶಿಸಿದ ಟಾಟಾ ಕರ್ವ್ ಆಲ್ ಎಲೆಕ್ಟ್ರಿಕ್ ಮಾದರಿ ನಂತರ ಇತ್ತೀಚೆಗೆ ಟಾಟಾ ಕರ್ವ್ (Tata Curvv) ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆವೃತ್ತಿಯನ್ನೂ ಬಿಡುಗಡೆ ಮಾಡಿದೆ. ಈ ಕಾರು ಪ್ರಸ್ತುತ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮುಂತಾದವುಗಳ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಯಲ್ಲಿದೆ.
(2 / 6)
ಟಾಟಾ ಮೋಟಾರ್ಸ್‌ನ ಕರ್ವ್ ICE ಆವೃತ್ತಿಯು ಮೂರು ಎಂಜಿನ್ ಮಾದರಿಗಳಲ್ಲಿ ಲಭ್ಯವಿದೆ. 1.2-ಲೀಟರ್ ಟರ್ಬೊ ಪೆಟ್ರೋಲ್, ಹೊಸ 1.2-ಲೀಟರ್ GDI ಪೆಟ್ರೋಲ್, 1.5-ಲೀಟರ್ ಡೀಸೆಲ್ ಎಂಜಿನ್‌ಗಳ ಮೂಲಕ ಗ್ರಾಹಕರ ಗಮನಸೆಳೆದಿದೆ. ಇದು ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಎರಡೂ ವಿಧದಲ್ಲಿ ಲಭ್ಯವಿದೆ.
(3 / 6)
ಟಾಟಾ ಕರ್ವ್ ICE ನ ವಿನ್ಯಾಸವು ಕರ್ವ್ EV ಯಂತೆಯೇ ಇದ್ದರೂ,. ಎರಡೂ ಮಾದರಿಗಳು ಮುಖ್ಯವಾಗಿ ಅವುಗಳ ಇಳಿಜಾರು ಛಾವಣಿಯ ಕಾರಣದಿಂದಾಗಿ ಭಿನ್ನವಾಗಿ ಎದ್ದು ಕಾಣುತ್ತವೆ. ಆದರೆ ಟಾಟಾ ಕರ್ವ್ ICE ಏರ್ ಡ್ಯಾಮ್‌ಗಳನ್ನು ಗಮನಸೆಳೆಯುವಂತೆ ವಿನ್ಯಾಸಗೊಳಿಸಿದ್ದು, 18 ಇಂಚಿನ ಚಕ್ರಗಳಲ್ಲಿನ ಮಿಶ್ರಲೋಹಗಳು ಸಹ ವಿಭಿನ್ನವಾಗಿವೆ.
(4 / 6)
ಇದು 12.3-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಒಂಬತ್ತು-ಸ್ಪೀಕರ್ JBL ಸೌಂಡ್ ಸಿಸ್ಟಮ್, ವೈರ್ಲೆಸ್ ಫೋನ್ ಚಾರ್ಜರ್ ಮುಂತಾದ ಹಲವು ಫೀಚರ್‌ಗಳನ್ನೂ ಹೊಂದಿದೆ. ಪನೋರಮಿಕ್ ಸನ್ ರೂಫ್ ಕೂಡ ಇರುವ ಕಾರಣ ಗ್ರಾಹಕರ ಗಮನಸೆಳೆಯುತ್ತಿದೆ.
(5 / 6)
ಟಾಟಾ ಕರ್ವ್ ಒಳಗೆ ಆಡಿಯೋ ಮತ್ತು ದೃಶ್ಯ ಮನರಂಜನೆಗಾಗಿ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಕಮಾಂಡ್ ಸೆಂಟರ್ ರೀತಿ ಕೆಲಸ ಮಾಡುತ್ತದೆ. ಪವರ್ ಟೈಲ್ ಗೇಟ್, ಎಲೆಕ್ಟ್ರಿಕಲ್ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಇಂಜಿನ್ ಸ್ಟಾರ್ಟ್ ಮತ್ತು ಸ್ಟಾಪ್ ಬಟನ್ ಮುಂತಾದ ಫೀಚರ್ಸ್ ಗ್ರಾಹಕರ ಮನಸೂರೆಗೊಂಡಿವೆ.
(6 / 6)
ಟಾಟಾ ಕರ್ವ್ ICE ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಅಚೀವ್ಡ್ ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ. ಆರಂಭಿಕ ಬೆಲೆ 9.99 ಲಕ್ಷದಿಂದ 17.69 ಲಕ್ಷ ರೂ. ತನಕ ಇದ್ದು. ಇದು ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ SUV ಗಳ ಪಟ್ಟಿಗೆ ಸೇರುತ್ತದೆ. ಇದು ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಮುಂತಾದವುಗಳಿಗೆ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿದೆ.
ಇತರ ಗ್ಯಾಲರಿಗಳು