ಇನ್ಮುಂದೆ ಜೊಮಾಟೋದಲ್ಲೂ ಸಿನಿಮಾ ಟಿಕೆಟ್ ಬುಕ್ ಮಾಡ್ಬೋದು; ಪೇಟಿಎಂ ಟಿಕೆಟ್ ವ್ಯವಹಾರ ಖರೀದಿಸಿದ ಫುಡ್ ಡೆಲಿವರಿ ಸಂಸ್ಥೆ
- Zomato Acquiring Paytm's Ticket Business: ಸಿನಿಮಾ, ಕ್ರೀಡೆ ಅಥವಾ ಲೈವ್ ಈವೆಂಟ್ಗೆ ಟಿಕೆಟ್ ಬುಕ್ ಮಾಡಲು ಬಯಸುವಿರಾ? ಹಾಗಿದ್ದರೆ ನೀವದನ್ನು ಆನ್ಲೈನ್ ಆಹಾರ ವಿತರಣಾ ಫ್ಲಾಟ್ಫಾರಂ ಜೊಮಾಟೋದಲ್ಲೂ ಮಾಡಬಹುದು.
- Zomato Acquiring Paytm's Ticket Business: ಸಿನಿಮಾ, ಕ್ರೀಡೆ ಅಥವಾ ಲೈವ್ ಈವೆಂಟ್ಗೆ ಟಿಕೆಟ್ ಬುಕ್ ಮಾಡಲು ಬಯಸುವಿರಾ? ಹಾಗಿದ್ದರೆ ನೀವದನ್ನು ಆನ್ಲೈನ್ ಆಹಾರ ವಿತರಣಾ ಫ್ಲಾಟ್ಫಾರಂ ಜೊಮಾಟೋದಲ್ಲೂ ಮಾಡಬಹುದು.
(1 / 5)
ಇನ್ಮುಂದೆ ಸಿನಿಮಾ, ಕ್ರೀಡೆ ಅಥವಾ ಯಾವುದೇ ಲೈವ್ ಈವೆಂಟ್ಗಳಿಗೆ ಟಿಕೆಟ್ಗಳನ್ನು ಬುಕ್ ಮೈ ಶೋ, ಪೇಟಿಎಂನಲ್ಲೇ ಬುಕ್ ಮಾಡಬೇಕು ಎಂಬುದೇನಿಲ್ಲ. ಆನ್ಲೈನ್ ಆಹಾರ ವಿತರಣಾ ವೇದಿಕೆಯಾದ ಜೊಮಾಟೋದಲ್ಲೂ ಟಿಕೆಟ್ಗಳನ್ನು ಖರೀದಿಸಬಹುದು. ಹೌದು, ಇದು ಸತ್ಯ. ಏಕೆಂದರೆ ಇಲ್ಲೂ ಸಿನಿಮಾ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಟಿಕೆಟ್ ಕಾಯ್ದಿರಿಸಬಹುದು.
(2 / 5)
ಪೇಟಿಎಂನ ಎಂಟರ್ಟೈನ್ಮೆಂಟ್ ಟಿಕೆಟ್ ವ್ಯವಹಾರಗಳನ್ನು ಆನ್ಲೈನ್ ಫುಡ್ ಡೆಲಿವರಿ ಸಂಸ್ಥೆ ಜೊಮಾಟೋ ಖರೀದಿಸಿದೆ. ಜೊಮಾಟೊ ಮತ್ತು ಪೇಟಿಎಂನ ಮಾತೃಸಂಸ್ಥೆಯಾದ ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ನ ಆಡಳಿತ ಮಂಡಳಿ ಸಭೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಒನ್ 97 ಕಮ್ಯುನಿಕೇಷನ್ಸ್ ಖಚಿತಪಡಿಸಿದ್ದು, 2,048 ಕೋಟಿ ರೂಪಾಯಿಗೆ ಒಪ್ಪಂದ ಕುದುರಿದೆ.
(3 / 5)
ಒಪ್ಪಂದದ ಪ್ರಕಾರ, ಪೇಟಿಎಂ ತನ್ನ ಅಂಗಸಂಸ್ಥೆಗಳಾದ ಆರ್ಬ್ಜೆನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (1,264.6 ಕೋಟಿ) ಮತ್ತು ವೆಸ್ಟ್ಲ್ಯಾಂಡ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ಗೆ (783.8 ಕೋಟಿ) ಸಂಪೂರ್ಣ ಟಿಕೆಟಿಂಗ್ ವ್ಯವಹಾರ ಹಸ್ತಾಂತರಿಸಿತ್ತು. ಆದರೀಗ ಈ ಎರಡು ಸಂಸ್ಥೆಗಳು ಜೊಮಾಟೋ ಪಾಲಾಗಲಿವೆ. ಇಲ್ಲಿ ಕೆಲಸ ಮಾಡುವ 280 ಉದ್ಯೋಗಿಗಳೂ ಸಹ ಜೊಮೊಟೋಗೆ ಸೇರಲಿದ್ದಾರೆ.
(4 / 5)
ಒಪ್ಪಂದಕ್ಕೆ ಸಹಿ ಹಾಕಿದ 90 ದಿನಗಳಲ್ಲಿ ಖರೀದಿ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಆದರೆ, ಎಂಟರ್ಟೈನ್ಮೆಂಟ್ ಟಿಕೆಟಿಂಗ್ ಸೇವೆಗಳು ಜೊಮೊಟೋಗೆ ವರ್ಗಾವಣೆ ಆಗಬೇಕೆಂದರೆ 1 ವರ್ಷ ಬೇಕಿರುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಪೇಟಿಎಂ ಆ್ಯಪ್ನಲ್ಲೇ ಲಭ್ಯ ಇರಲಿವೆ ಎಂದು ವರದಿಯಾಗಿದೆ.
ಇತರ ಗ್ಯಾಲರಿಗಳು