ದೀಪಾವಳಿಗೂ ಮೊದಲೇ ಬೆಳ್ಳಿ ಬಂಗಾರಗಳ ಬೆಲೆ ಗಗನಕ್ಕೇರಲಿವೆ; ಬೆಂಗಳೂರಲ್ಲಿ 1 ಲಕ್ಷದ ಕಡೆಗೆ ಬೆಳ್ಳಿಯ ಬೆಲೆ
ದೀಪಾವಳಿ ಧನ ತ್ರಯೋದಶಿಗೆ ಇನ್ನೂ ಕೆಲವು ದಿನಗಳಿವೆ. ಆದರೆ ಅದಕ್ಕೂ ಮೊದಲೇ ಚಿನ್ನ ಬೆಳ್ಳಿ ಬೆಲೆ ದಾಖಲೆ ಮಟ್ಟಕ್ಕೆ ಏರಬಹುದು ಎಂದು ಚಿನಿವಾರ ಪೇಟೆ ಪರಿಣತರು ಅಂದಾಜಿಸಿದ್ದಾರೆ. ಚಿನ್ನದ ಬೆಲೆ ಇಂದು 10 ಗ್ರಾಂಗೆ 100 ರೂಪಾಯಿಯಿಂದ 110 ರೂಪಾಯಿ ಏರಿಕೆಯಾಗಿದೆ. ಇದೇ ವೇಳೆ ಬೆಳ್ಳಿ ದರ ದೇಶದಲ್ಲಿ ಸ್ಥಿರವಾಗಿದ್ದು, ಬೆಂಗಳೂರಲ್ಲಿ 2000 ರೂಪಾಯಿ ಹೆಚ್ಚಾಗಿದೆ.ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 8)
ನವರಾತ್ರಿ, ದಸರಾ ಹಬ್ಬದ ಸಂಭ್ರಮ. ಚಿನ್ನ, ಬೆಳ್ಳಿ ಆಭರಣ ಖರೀದಿಗೂ ಶುಭ ಸಂದರ್ಭ ಎಂಬುದು ಹಲವರ ನಂಬಿಕೆ. ಈ ನಡುವೆ, ಬೆಳ್ಳಿ, ಬಂಗಾರಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಇರಾನ್ - ಇಸ್ರೇಲ್ ಯುದ್ಧ ಬಿಕ್ಕಟ್ಟು, ಮಧ್ಯ ಪ್ರಾಚ್ಯದ ಬಿಕ್ಕಟ್ಟುಗಳ ಪರಿಣಾಮ ಇದು ಎಂದು ಪರಿಣತರು ವಿಶ್ಲೇಷಿಸುತ್ತಿದ್ದಾರೆ.
(2 / 8)
ಐಬಿಜೆಎ ದರಗಳ ಪ್ರಕಾರ, ಇಂದು 24 ಕ್ಯಾರೆಟ್ ಚಿನ್ನದ ಬೆಲೆ 467 ರೂ.ಗಳಷ್ಟು ಜಿಗಿದಿದ್ದು, ಸಾರ್ವಕಾಲಿಕ ಗರಿಷ್ಠ 76082 ರೂಪಾಯಿ ತಲುಪಿದೆ. ಬೆಳ್ಳಿ ಇಂದು 1615 ರೂ.ಗಳಷ್ಟು ದುಬಾರಿಯಾಗಿದೆ ಮತ್ತು ಪ್ರತಿ ಕೆಜಿಗೆ 92268 ರೂಪಾಯಿ ತಲುಪಿದೆ. ಇದು ತೆರಿಗೆ ಹೊರತುಪಡಿಸಿದ ಚಿನ್ನದ ದರ. ಈ ದರ ನಗರದಿಂದ ನಗರಕ್ಕೆ ವ್ಯತ್ಯಾಸವಾಗುತ್ತದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ 1000 ರಿಂದ 2000 ರೂಪಾಯಿಗಳವರೆಗೆ ವ್ಯತ್ಯಾಸವಾಗುವ ಸಾಧ್ಯತೆಯಿದೆ.(Pixabay)
(3 / 8)
ಅಂದ ಹಾಗೆ, ಬೆಳ್ಳಿ ದರ ಈಗಾಗಲೇ ಭಾರತದ ಕೆಲವು ನಗರಗಳಲ್ಲಿ 1 ಲಕ್ಷ ರೂಪಾಯಿ ಗಡಿ ದಾಟಿದೆ. ವಿಶೇಷವಾಗಿ ಹೈದರಾಬಾದ್‌ನಲ್ಲಿ ಬೆಳ್ಳಿ ಬೆಲೆ ಕಳೆದ ತಿಂಗಳು 1 ಲಕ್ಷ ರೂಪಾಯಿ ದಾಟಿದ್ದು, ಏರಿಕೆಯ ಹಾದಿಯಲ್ಲೇ ಮುಂದುವರಿದಿದೆ.
(4 / 8)
ಇನ್ನೊಂದೆಡೆ ಚಿನ್ನದ ಬೆಲೆ ಗಮನಿಸುವುದಾದರೆ, ಇಂದು 22 ಕ್ಯಾರೆಟ್ ಚಿನ್ನದ ದರ 465 ರೂಪಾಯಿಗಳಷ್ಟು ದುಬಾರಿಯಾಗಿದೆ ಮತ್ತು 10 ಗ್ರಾಂಗೆ ₹ 75777 ತಲುಪಿದೆ. ಆದರೆ, 22 ಕ್ಯಾರೆಟ್ ಚಿನ್ನ 428 ರೂಪಾಯಿ ಏರಿಕೆಯಾಗಿ 10 ಗ್ರಾಂಗೆ 69691 ರೂಪಾಯಿಗೆ ತಲುಪಿದೆ.
(5 / 8)
ಇಂದು 18 ಕ್ಯಾರೆಟ್ ಚಿನ್ನದ ದರ 351 ರೂಪಾಯಿ ಏರಿಕೆಯಾಗಿದ್ದು, ಪ್ರತಿ 10 ಗ್ರಾಂಗೆ ₹ 57062 ದರದಲ್ಲಿ ತೆರೆಯಲಾಗಿದೆ. ಅದೇ ಸಮಯದಲ್ಲಿ, 14 ಕ್ಯಾರೆಟ್ ಚಿನ್ನದ ಬೆಲೆ ಇಂದು ರೂ 273 ರಷ್ಟು ಏರಿಕೆಯಾಯಿತು ಮತ್ತು 10 ಗ್ರಾಂಗೆ 44508 ರೂಪಾಯಿಯಲ್ಲಿದೆ.
(6 / 8)
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ ಇಂದು ಒಂದೇ ದಿನ ಬೆಳ್ಳಿದರ ಒಂದು ಕಿಲೋಗೆ 2,000 ರೂಪಾಯಿ ಏರಿದೆ. ಅಕ್ಟೋಬರ್ 1ಕ್ಕೆ 2000 ರೂಪಾಯಿ ಏರಿಕೆಯಾಗಿ 90,000 ರೂಪಾಯಿ ತಲುಪಿದ್ದ ದರ ಕಳೆದ ಮೂರು ದಿನಗಳಿಂದ ಸ್ಥಿರವಾಗಿತ್ತು. ಇಂದು ಮತ್ತೆ 2000 ರೂಪಾಯಿ ಏರಿ 92,000 ರೂಪಾಯಿಗೆ ತಲುಪಿದೆ,
(7 / 8)
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 100 ರೂಪಾಯಿ ಏರಿಕೆಯಾಗಿ 71,200 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 110 ರೂಪಾಯಿ ಏರಿಕೆಯಾಗಿ 77,670 ರೂಪಾಯಿ ಆಗಿದೆ.
ಇತರ ಗ್ಯಾಲರಿಗಳು