Used Iphone Precautions: ಸೆಕೆಂಡ್ ಹ್ಯಾಂಡ್ ಐಫೋನ್ ಖರೀದಿಸುತ್ತಿದ್ದೀರಾ? ಈ ವಿಚಾರಗಳು ನಿಮಗೆ ತಿಳಿದಿರಲಿ
Used Iphone Precautions: ಬಳಸಿದ ಐಫೋನ್ ಖರೀದಿಸಲು ಯೋಚಿಸುತ್ತಿದ್ದೀರಾ? ಇತರರು ಬಳಸುವ ಐಫೋನ್ ಖರೀದಿಸುವ ಮೊದಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸೂಕ್ತ. ಅವುಗಳು ಇಲ್ಲಿವೆ ನೋಡಿ.
(1 / 13)
ಜೀವನದಲ್ಲಿ ಒಮ್ಮೆಯಾದರೂ ಐಫೋನ್ ಖರೀದಿಸಬೇಕು ಎಂಬುದು ಸಾಕಷ್ಟು ಮಂದಿಯ ಬಯಕೆ ಮತ್ತು ಕನಸು. ಆದರೆ, ಹಣಕಾಸು ಪರಿಸ್ಥಿತಿಗಳು ಮತ್ತು ಹಲವು ಜವಾಬ್ದಾರಿಗಳು ಅಂತಹವರ ಕನಸನ್ನು ಕಟ್ಟಿ ಹಾಕುತ್ತದೆ. ಹಾಗಾಗಿ ಹೊಸ ಐಫೋನ್ ಖರೀದಿಗೆ ಮುಂದಾಗುವುದಿಲ್ಲ. ಏಕೆಂದರೆ ಅದು ದುಬಾರಿ.
(2 / 13)
ಜೀವನದಲ್ಲಿ ಒಮ್ಮೆಯಾದರೂ ಐಫೋನ್ ಖರೀದಿಸಬೇಕು ಎಂಬುದು ಸಾಕಷ್ಟು ಮಂದಿಯ ಬಯಕೆ ಮತ್ತು ಕನಸು. ಆದರೆ, ಹಣಕಾಸು ಪರಿಸ್ಥಿತಿಗಳು ಮತ್ತು ಹಲವು ಜವಾಬ್ದಾರಿಗಳು ಅಂತಹವರ ಕನಸನ್ನು ಕಟ್ಟಿ ಹಾಕುತ್ತದೆ. ಹಾಗಾಗಿ ಹೊಸ ಐಫೋನ್ ಖರೀದಿಗೆ ಮುಂದಾಗುವುದಿಲ್ಲ. ಏಕೆಂದರೆ ಅದು ದುಬಾರಿ.(Unsplash)
(3 / 13)
ಹಾಗಾಗಿ ಹೊಸ ಫೋನ್ ಖರೀದಿಸಲು ಸಾಧ್ಯವಾಗದಿದ್ದರೂ ಬಳಸಿದ ಅಂದರೆ ಸೆಕೆಂಡ್ ಹ್ಯಾಂಡ್ ಐಫೋನ್ ಖರೀದಿಸಲು ಬಯಸುತ್ತಾರೆ. ಆ ಮೂಲಕ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಮುಂದಾಗುತ್ತಾರೆ. ಆದರೆ, ಅಂತಹವರು ತುಂಬಾ ಅಂದರೆ ತುಂಬಾ ಮುನ್ನೆಚ್ಚರಿಕೆಯಿಂದ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಬೇಕು?(AP)
(4 / 13)
ಬಳಸಿದ ಐಫೋನ್ ಖರೀದಿಸುವಾಗ, ಮೊದಲು ಪವರ್ ಆನ್ ಮತ್ತು ಲಾಕ್ ಬಟನ್ಗಳನ್ನು ಪರಿಶೀಲಿಸಿ. ಫೋನ್ ಅನ್ಲಾಕ್ ಪೊಸಿಷನ್ನಲ್ಲಿ ಇದೆಯೋ ಇಲ್ವೋ ಎಂಬುದನ್ನು ಚೆಕ್ ಮಾಡಿ. ಒಂದ್ವೇಳೆ ಐಫೋನ್ ಲಾಕ್ ಆಗಿದ್ದರೆ, ಅದು ಕದ್ದ ಫೋನ್ ಆಗಿರುವ ಸಾಧ್ಯತೆ ಇರುತ್ತದೆ. ಬ್ಯಾಟರಿ ಡೆಡ್ ಆಗಿದೆ ಅತವಾ ನಂತರ ಅನ್ಲಾಕ್ ಮಾಡುವೆ ಎಂದು ಮಾರುವವರು ಹೇಳಿದರೆ ನಂಬಬೇಡಿ.(Pexels)
(5 / 13)
ಸ್ಕ್ರೀನ್ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗಾಗಿ ಐಫೋನ್ ಪರದೆಯನ್ನು ಪರಿಶೀಲಿಸಿ. ಕೆಲವು ಐಫೋನ್ 15 ಪ್ರೊ ಮ್ಯಾಕ್ಸ್ ಮಾದರಿಗಳು ಸ್ಕ್ರೀನ್ ಸ್ಟ್ಯಾಟಿಕ್ ಇಮೇಜ್ ಸಮಸ್ಯೆ ಮತ್ತು ಬರ್ನ್-ಇನ್ ಸಮಸ್ಯೆಯನ್ನು ಹೊಂದಿವೆ. ಯಾವುದೇ ಪರದೆ-ಸಂಬಂಧಿತ ಸಮಸ್ಯೆಗಳು, ಜೊತೆಗೆ ಬ್ಯಾಕ್ಲೈಟ್ ಸಮಸ್ಯೆಗಳು ಇವೆಯೇ ಎಂದು ಪರಿಶೀಲಿಸಲು ಪರೀಕ್ಷಾ ವೀಡಿಯೊಗಳನ್ನು ಬಳಸಿ.(Pexels)
(6 / 13)
ಮೊಬೈಲ್ ಸ್ಕ್ರೀನ್ಗೆ ಸಂಬಂಧಿಸಿ ಯಾವುದೇ ಸಮಸ್ಯೆ ಇದೆಯೋ ಇಲ್ಲವೋ ಎಂಬುದನ್ನು ಸ್ಕ್ರೀನ್ ಪರಿಶೀಲಿಸಿ. ಏಕೆಂದರೆ ಕೆಲವು ಐಫೋನ್-15 ಪ್ರೋ ಮ್ಯಾಕ್ಸ್ ಮಾಡೆಲ್ನಲ್ಲಿ ಸ್ಕ್ರೀನ್ ಸ್ಟ್ಯಾಟಿಕ್ ಇಮೇಜ್ ಸಮಸ್ಯೆ ಮತ್ತು ಬರ್ನ್ ಇನ್ ಸಮಸ್ಯೆ ಕಾಣಿಸಿಕೊಂಡಿದೆ. ಬ್ಯಾಕ್ ಲೈಟ್ ಸಮಸ್ಯೆ ಸಮಸ್ಯೆ ಇದೆಯಾ ಎಂಬುದನ್ನು ಪರಿಶೀಲಿಸಲು ಟೆಸ್ಟ್ ವಿಡಿಯೋಗಳನ್ನು ಬಳಸುವುದು ಉತ್ತಮ.(Pexels)
(7 / 13)
ಕ್ಯಾಮೆರಾ ಅಪ್ಲಿಕೇಶನ್ ತೆರೆಯುವ ಮೂಲಕ ಕ್ಯಾಮೆರಾ ಸಿಸ್ಟಮ್ ಚೆಕ್ ಮಾಡಿ. ಕ್ಯಾಮೆರಾ ಆ್ಯಕ್ಟಿವಿಟಿಗೆ ಸಂಬಂಧಿಸಿ ಎಲ್ಲವನ್ನೂ ಪರಿಶೀಲಿಸಿ. ಕ್ಲಾರಿಟಿ ಹೇಗಿದೆ? ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಖಚಿತ ಮಾಡಿಕೊಳ್ಳಿ. ಅದಕ್ಕಾಗಿ ಕೆಲವೊಂದು ಫೋಟೋಗಳನ್ನು ತೆಗೆಯಿರಿ ಮತ್ತು ವಿಡಿಯೋ ರೆಕಾರ್ಡ್ ಮಾಡಿ ಚೆಕ್ ಮಾಡಿ. ಹಿಂಭಾಗ ಮತ್ತು ಮುಂಭಾಗ ಕ್ಯಾಮೆರಾ ಪರಿಶೀಲಿಸಿ. ಪ್ರೊ ಮಾಡೆಲ್ಗಳಲ್ಲಿ ಹೆಚ್ಚುವರಿ ಲೆನ್ಸ್ ಕೆಲಸ ಮಾಡುತ್ತಿವೆಯೇ ಎಂದು ಕನ್ಫರ್ಮ್ ಮಾಡಿ.(Pexels)
(8 / 13)
ಐಫೋನ್ನ ಬಾಡಿ ಪರಿಶೀಲಿಸಿ. ಮೊಬೈಲ್ ಮೇಲ್ಭಾಗ ಸವೆದಿದೆಯೇ ಎಂಬುದನ್ನು ನೋಡಿ. ಫ್ರೇಮ್, ಬಟನ್ಸ್ ಮತ್ತೆ ಪೋರ್ಟ್ ಸರಿಯಾಗಿದೆಯಾ ಎಂದು ಚೆಕ್ ಮಾಡಿ. ಮೊಬೈಲ್ ಅನ್ನು ಹೆಚ್ಚಾಗಿ ಬಳಸಿದ್ದಾರಾ? ದುರುಪಯೋಗ ಮಾಡಿದ್ದಾರಾ ಎಂದು ಪರಿಶೀಲಿಸಿ.(Pexels)
(9 / 13)
ಆ ಐಫೋನ್ಗೆ ಈ ಹಿಂದೆ ಏನಾದರೂ ರಿಪೇರಿ ಮಾಡಲಾಗಿದೆಯೇ ಎಂದು ಚೆಕ್ ಮಾಡಿ. ಸ್ಕ್ರೀನ್ ರಿಪ್ಲೇಸ್ಮೆಂಟ್ ಅಥವಾ ಬ್ಯಾಟರ್ ಬದಲಾವಣೆ ಮಾಡಲಾಗಿದೆಯೇ ಎಂದು ಕೇಳಿ ಖಚಿತಪಡಿಸಿಕೊಳ್ಳಿ. ಒಂದು ವೇಳೆ ರಿಪೇರಿ ಆಗಿದ್ದರೆ ರಿಪೇರಿ ರಶೀದಿ ಪಡೆಯಿರಿ. ಅಧಿಕೃತ ಸರ್ವೀಸ್ ಪ್ರೋವೈಡರ್ ಅವರ ಮೂಲಕ ಖಚಿತಪಡಿಸಿಕೊಳ್ಳಿ.(AP)
(10 / 13)
ಐಫೋನ್-11 ಅಥವಾ ನಂತರದ ಮಾಡೆಲ್ಗಳಿಗೆ ರಿಪ್ಲೇಸ್ ಮಾಡಿದ ಘಟಕಗಳ ಸತ್ಯಾಸತ್ಯತೆ ಪರಿಶೀಲಿಸಿಕೊಳ್ಳುವುದು ಅತ್ಯಂತ ಮುಖ್ಯ. ಹೀಗಾಗಿ ಸೆಟ್ಟಿಂಗ್ನಲ್ಲಿನ ಭಾಗಗಳು, ಸರ್ವೀಸ್ ಹಿಸ್ಟರಿ.. ಹೀಗೆ ಎಲ್ಲವನ್ನೂ ಚೆಕ್ ಮಾಡುವುದು ಅತ್ಯುತ್ತಮ.(REUTERS)
(11 / 13)
ಐಫೋನ್ ಸೆಟ್ಟಿಂಗ್ಗಳನ್ನು ಮೆನು ಮೂಲಕ ಪ್ರವೇಶಿಸಲಾಗುತ್ತದೆ. ಸಾಧನವು ಮೂಲ ಭಾಗಗಳನ್ನು ಹೊಂದಿದೆಯೇ ಇಲ್ಲವೇ ಎಂದು ತೋರಿಸುತ್ತದೆ. ಸಂಭಾವ್ಯ ಸಮಸ್ಯೆಗಳನ್ನು ತಪ್ಪಿಸಲು ಸ್ಕ್ರೀನ್ ಅಥವಾ ಬ್ಯಾಟರಿಗಳಂತಹ ಯಾವುದೇ ಬದಲಿ ಭಾಗಗಳು ಪ್ರಮಾಣಿತವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ.(AFP)
(12 / 13)
ಕದ್ದ ಐಫೋನ್ ಖರೀದಿಸುವುದನ್ನು ತಪ್ಪಿಸಲು, ಖರೀದಿಯ ಪುರಾವೆ ಕೇಳಿ. ಅದು ಹಾರ್ಡ್ ಕಾಪಿ ರಸೀದಿ ಅಥವಾ ಇಮೇಲ್ ದೃಢೀಕರಣವೂ ಆಗಬಹುದು. ಆ ಮೂಲಕ ಮಾರಾಟಗಾರರು ತಮ್ಮ ಹೆಸರನ್ನು ತೋರಿಸುವ ಮೂಲಕ ಅಥವಾ ಹಿಂದಿನ ಮಾಲೀಕರ ವಿವರಗಳನ್ನು ಖಚಿತಪಡಿಸಬೇಕು (ಒಂದ್ವೇಳೆ ಸೆಕೆಂಡ್ಸ್ ಆದರೆ).(AP)
ಇತರ ಗ್ಯಾಲರಿಗಳು