US midterm elections 2022: ಅಮೆರಿಕದಲ್ಲಿ ಜೋರಾಗಿದೆ ಮಧ್ಯಾವಧಿ ಚುನಾವಣೆಯ ಕಾವು: ಟ್ರಂಪ್ ವಿರುದ್ಧ ಗುಡುಗಿದ ಬೈಡನ್!
- ವಾಷಿಂಗ್ಟನ್: ಅಮೆರಿಕದಲ್ಲಿ ಮುಂದಿನ ವಾರ ಮಧ್ಯಾವಧಿ ಚುನಾವಣೆಗಳು ನಡೆಯಲಿದ್ದು, 2020ರ ಕ್ಯಾಪಿಟಲ್ ಮೇಲಿನ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಿರುವ ರಿಪಬ್ಲಿಕನ್ನರ ಬಗ್ಗೆ ಎಚ್ಚರದಿಂದ ಇರುವಂತೆ ಮತದಾರರಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮನವಿ ಮಾಡಿದ್ದಾರೆ. ರಾಜಕೀಯ ಹಿಂಸಾಚಾರವನ್ನು ಸಮರ್ಥಿಸಿಕೊಳ್ಳುವ ಡೊನಾಲ್ಡ್ ಟ್ರಂಪ್ ಮತ್ತು ಇತರ ರಿಪಬ್ಲಿಕನ್ ನಾಯಕರು, ದೇಶದ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಜೋ ಬೈಡನ್ ಎಚ್ಚರಿಸಿದ್ದಾಅರೆ. ಬೈಡನ್ ಭಾಷಣದ ಸಾರಾಂಶ ಇಲ್ಲಿದೆ.

(1 / 5)
2020ರ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಒಪ್ಪದ ಡೊನಾಲ್ಡ್ ಟ್ರಂಪ್, ಕ್ಯಾಪಿಟಲ್ ಮೇಲೆ ನಡೆದ ಕ್ರೂರ ದಾಳಿಗೆ ಕಾರಣರಾದರು. ಅಲ್ಲದೇ ಟ್ರಂಪ್ ಈ ದಾಳಿಯನ್ನು ಸಮರ್ಥಿಸಿಕೊಂಡರು. ಆದರೆ ಅಮೆರಿಕದ ಜನತೆ ಇಂತಹ ಹಿಂಸಾಚಾರವನ್ನು ಎಂದಿಗೂ ಒಪ್ಪುವುದಿಲ್ಲ ಎಂದು ಜೋ ಬೈಡನ್ ಗುಡುಗಿದ್ದಾರೆ.(AFP)
(2 / 5)
ಅಮೆರಿಕದ ಪ್ರಜಾಪ್ರಭುತ್ವದ ಮೇಲೆ ನಿರಂತರವಾಗಿ ಆಕ್ರಮಣ ಮಾಡಲಾಗುತ್ತಿದೆ. ಜನರ ಇಚ್ಛೆಯನ್ನು ಸ್ವೀಕರಿಸಲು ನಿರಾಕರಿಸುವ ಮನಸ್ಥಿತಿ ಉಳ್ಳವರು ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ ಎಂದು ಜೊ ಬೈಡನ್ ಅವರು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.(AFP)
(3 / 5)
ನಾವು ನಿರ್ಣಾಯಕ ಕ್ಷಣವನ್ನು ಎದುರು ನೋಡುತ್ತಿದ್ದೇವೆ. ನಾವು ಒಂದು ಅಗಾಧ, ಏಕೀಕೃತ ಧ್ವನಿಯೊಂದಿಗೆ ಒಂದು ದೇಶವಾಗಿ ಮಾತನಾಡಬೇಕು. ಅಮೆರಿಕದಲ್ಲಿ ಮತದಾರರಿಗೆ ಬೆದರಿಕೆ ಹಾಕುವುದು ಅಥವಾ ರಾಜಕೀಯ ಹಿಂಸಾಚಾರಕ್ಕೆ ಜಾಗವಿಲ್ಲ. ಎಂಬ ಸತ್ಯವನ್ನು ಸಾರಿ ಹೇಳಬೇಕು ಎಂದು ಜೋ ಬೈಡನ್ ಹೇಳಿದರು.(AFP)
(4 / 5)
ಅಧಿಕಾರ ಮತ್ತು ಲಾಭಕ್ಕಾಗಿ ಹೇಳಿದ ಸುಳ್ಳುಗಳು, ನಡೆಸಿದ ಪಿತೂರಿ, ಕೋಪ, ದ್ವೇಷ ಮತ್ತು ಹಿಂಸೆಯನ್ನು ಸೃಷ್ಟಿಸಲು ಮಾಡಿದ ಹುನ್ನಾರಗಳನ್ನು ನಾವು ಅರಿಯಬೇಕು. ರಾಜಕೀಯ ಹಿಂಸಾಚಾರವನ್ನು ತಿರಸ್ಕರಿಸಬೇಕು ಎಂದು ಓ ಬೈಡನ್ ಕದೇ ವೇಳೆ ಕರೆ ನೀಡಿದರು.(AFP)
ಇತರ ಗ್ಯಾಲರಿಗಳು