ಕೆಂಪು ಉಡುಗೆಯಲ್ಲಿ ಮಿಂಚಿದ ಪ್ರಣಿತಾ ಸುಭಾಷ್; ಕಾನ್ ಚಿತ್ರೋತ್ಸವದಲ್ಲಿ ಕನ್ನಡ ನಟಿಯ ಸೌಂದರ್ಯ ಲಹರಿ
ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಅವರು ಇತ್ತೀಚೆಗೆ ಕಾನ್ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದಾರೆ. ಅಲ್ಲಿ ಇವರು ತೊಟ್ಟ ಕೆಂಪು ಬಣ್ಣದ ಉಡುಗೆ ನೋಡುಗರ ಗಮನ ಸೆಳೆದಿದೆ.
(1 / 10)
ನಟಿ ಪ್ರಣಿತಾ ಸುಭಾಷ್ ಅವರು 78ನೇ ಕಾನ್ ಫಿಲ್ಮ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಸುಂದರ ಕ್ಷಣದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
(2 / 10)
ಕೆಂಪು ಉಡುಗೆ ಮಾತ್ರವಲ್ಲದೆ, ಬೇಬಿ ಪಿಂಕ್ ಉಡುಗೆ ಮತ್ತು ಸೀರೆಯಲ್ಲೂ ಅಲ್ಲಿ ಮಿಂಚಿದ್ದಾರೆ. ಈ ಸಂದರ್ಭದಲ್ಲಿ ನಟಿ ಮಾಧ್ಯಮಗಳೊಂದಿಗೆ ಮಾತನಾಡಿ ತನ್ನ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
(3 / 10)
ನನಗೆ ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಳ್ಳಬೇಕು ಎಂದು ಸಣ್ಣ ವಯಸ್ಸಿನಿಂದಲೂ ಆಸೆ ಇತ್ತು. ಬಾಲ್ಯದ ಆ ಕನಸು ನನಗೆ ಈಗ ಈಡೇರಿದೆ. ಭಾರತೀಯ ಸಿನಿಮಾಗಳು ಈ ಹಂತಕ್ಕೆ ಬಂದಿರುವುದರಿಂದ ನಮಗೆ ಅವಕಾಶ ದೊರಕಿದೆ ಎಂದು ನಟಿ ಪ್ರಣಿತಾ ಹೇಳಿದ್ದಾರೆ.
(4 / 10)
78ನೇ ಕಾನ್ ಫಿಲ್ಮ್ ಫೆಸ್ಟಿವಲ್ ಮೇ 13ರಿಂದ ಮೇ 24ರವರೆಗೆ ನಡೆಯುತ್ತದೆ. ಇಂದು ಕಾನ್ ಫೆಸ್ಟಿವಲ್ ಕೊನೆಯ ದಿನವಾಗಿದೆ. ಈ ಹಬ್ಬದಲ್ಲಿ ಭಾಗವಹಿಸಲು ಕೆಲವು ನಟಿಯರಿಗೆ ಮಾತ್ರ ಅವಕಾಶ ದೊರಕುತ್ತದೆ. ಪ್ರಣಿತಾ ಸುಭಾಷ್‌ಗೂ ಈ ಅವಕಾಶ ದೊರಕಿದೆ.
(5 / 10)
ಐಶ್ವರ್ಯಾ ರೈ, ಜಾನ್ವಿ ಕಪೂರ್, ಅದಿತಿ ರಾವ್ ಹೈದರಿ, ದಿಶಾ ಮದನ್ ಸೇರಿದಂತೆ ಹಲವು ನಟಿಯರು ಈ ಬಾರಿಯ ಕಾನ್ ಫೆಸ್ಟಿವಲ್‌ನಲ್ಲಿ ಹೆಜ್ಜೆ ಹಾಕಿದ್ದಾರೆ.
(6 / 10)
ನಟಿ ಪ್ರಣಿತಾ ಸುಭಾಷ್ ಅವರು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಚಿತ್ರರಂಗದಲ್ಲಿ ಖ್ಯಾತಿ ಪಡೆದಿದ್ದಾರೆ.
(8 / 10)
ಇವರು ನಟನೆಯೊಂದಿಗೆ ಮಾಡೆಲಿಂಗ್‌ನಲ್ಲಿಯೂ ಸಕ್ರೀಯರಾಗಿದ್ದಾರೆ. ಜಾಯಿ ಆಲುಕಾಸ್ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಜತೆ ಸಹಯೋಗ ಹೊಂದಿದ್ದಾರೆ.
(9 / 10)
ಇವರು ಉದ್ಯಮಿಯೂ ಹೌದು. ಬೆಂಗಳೂರಿನಲ್ಲಿ ಒಂದು ರೆಸ್ಟೂರೆಂಟ್ ಕೂಡ ಹೊಂದಿದ್ದಾರೆ. ಜರಾಸಂಧ, ಬ್ರಹ್ಮ, ಅಂಗಾರಕ ಮುಂತಾದ ಕನ್ನಡ ಸಿನಿಮಾಗಳಲ್ಲಿ ಪ್ರಣಿತಾ ಸುಭಾಷ್ ನಟಿಸಿದ್ದಾರೆ.
ಇತರ ಗ್ಯಾಲರಿಗಳು