ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿರುವ ನಾಯಕರು; ಇಲ್ಲೂ ಭಾರತದವರದ್ದೇ ಪ್ರಾಬಲ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿರುವ ನಾಯಕರು; ಇಲ್ಲೂ ಭಾರತದವರದ್ದೇ ಪ್ರಾಬಲ್ಯ

ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿರುವ ನಾಯಕರು; ಇಲ್ಲೂ ಭಾರತದವರದ್ದೇ ಪ್ರಾಬಲ್ಯ

  • ODI Cricket: ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಮತ್ತು ನಾಯಕರಾಗಿಯೂ ಅತ್ಯದ್ಭುತ ಪ್ರದರ್ಶನ ನೀಡಿದ ವಿಶ್ವದ ಟಾಪ್​-6 ಆಟಗಾರರ ಪ್ರದರ್ಶನ ಕುರಿತ ನೋಟ ಇಲ್ಲಿದೆ.

ಏಕದಿನ ಕ್ರಿಕೆಟ್​ನಲ್ಲಿ ಕೆಲವರು ನಾಯಕನಾಗಿ ಯಶಸ್ಸು ಕಂಡರೆ, ಬ್ಯಾಟಿಂಗ್​ನಲ್ಲಿ ನಿರಾಸೆ ಮೂಡಿಸಿದ್ದಾರೆ. ಇನ್ನೂ ಕೆಲವರು ಬ್ಯಾಟಿಂಗ್​ನಲ್ಲಿ ಸಕ್ಸಸ್ ಆದರೆ ನಾಯಕನಾಗಿ ಅಟ್ಟರ್​ಫ್ಲಾಪ್ ಆಗಿದ್ದಾರೆ. ಆದರೆ ಎರಡೂ ವಿಭಾಗಗಳಲ್ಲಿ ಮಿಂಚಿರುವ ಆಟಗಾರರು ಅಪರೂಪ.
icon

(1 / 9)

ನಾವಿಲ್ಲಿ ಏಕದಿನ ಕ್ರಿಕೆಟ್​ನಲ್ಲಿ ನಾಯಕನಾಗಿ ಮತ್ತು ಬ್ಯಾಟಿಂಗ್​ನಲ್ಲಿ ಧಮಾಕ ಸೃಷ್ಟಿಸಿರುವ ಟಾಪ್​-6 ಆಟಗಾರರನ್ನು ನೋಡೋಣ. ಈ ಪಟ್ಟಿಯಲ್ಲಿ ಭಾರತ ಮೂವರು ಆಟಗಾರರು ಇರುವುದು ವಿಶೇಷ. ಅಲ್ಲದೆ, ಅಗ್ರಸ್ಥಾನದಲ್ಲೂ ಟೀಮ್​ ಇಂಡಿಯಾದ ಕ್ರಿಕೆಟಿಗನೇ ಇದ್ದಾರೆ.
icon

(2 / 9)

ವಿರಾಟ್ ಕೊಹ್ಲಿ: ಭಾರತದ ಸೂಪರ್​ ಸ್ಟಾರ್​ ಕ್ರಿಕೆಟರ್ ಒಡಿಐನಲ್ಲಿ ನಾಯಕನಾಗಿ, ಆಟಗಾರನಾಗಿ ಎರಡರಲ್ಲೂ ಅತ್ಯಂತ ಯಶಸ್ಸು ಕಂಡಿದ್ದಾರೆ. 2013-2021ರಲ್ಲಿ 95 ಏಕದಿನ ಪಂದ್ಯಗಳಿಗೆ ನಾಯಕನಾಗಿ 65ರಲ್ಲಿ ಗೆಲುವು ಸಾಧಿಸಿದ್ದಾರೆ. 27 ಸೋಲು, 1 ಪಂದ್ಯ ಟೈ ಆಗಿದೆ. ಶೇ 70.43ರಷ್ಟು ಗೆಲುವಿನ ಪ್ರಮಾಣ ಹೊಂದಿದ್ದಾರೆ. ಬ್ಯಾಟಿಂಗ್​ನಲ್ಲಿ 72.65ರ ಬ್ಯಾಟಿಂಗ್ ಸರಾಸರಿಯಲ್ಲಿ 21 ಶತಕ, 27 ಅರ್ಧಶತಕ ಸಹಿತ 5449 ರನ್ ಕಲೆ ಹಾಕಿದ್ದಾರೆ.
icon

(3 / 9)

ಎಬಿ ಡಿವಿಲಿಯರ್ಸ್: ಸೌತ್​ ಆಫ್ರಿಕಾದ ಸ್ಫೋಟಕ ಆಟಗಾರ ಏಕದಿನ ಕ್ರಿಕೆಟ್​​ನಲ್ಲಿ ಕ್ಯಾಪ್ಟನ್​ ಮತ್ತು ಬ್ಯಾಟಿಂಗ್​ನಲ್ಲೂ ಸಕ್ಸಸ್ ಕಂಡಿದ್ದಾರೆ. 103 ಒಡಿಐಗಳನ್ನು ಮುನ್ನಡೆಸಿದ ಎಬಿಡಿ, 59ರಲ್ಲಿ ಜಯ ಸಾಧಿಸಿದ್ದಾರೆ. 39 ಸೋಲು, 1 ಪಂದ್ಯ ಟೈ ಆಗಿದೆ. ಶೇ 57.28ರಷ್ಟು ಗೆಲುವಿನ ಪ್ರಮಾಣ ಹೊಂದಿದ್ದಾರೆ. ಇನ್ನು ಬ್ಯಾಟಿಂಗ್​ನಲ್ಲಿ 63.94ರ ಸರಾಸರಿಯಲ್ಲಿ 13 ಶತಕ, 27 ಅರ್ಧಶತಕಗಳ ನೆರವಿನಿಂದ 4796 ರನ್ ಕಲೆ ಹಾಕಿದ್ದಾರೆ.
icon

(4 / 9)

ಎಂಎಸ್ ಧೋನಿ: ಭಾರತದ ಅತ್ಯಂತ ಯಶಸ್ವಿ ನಾಯಕ ಧೋನಿ, 200 ಏಕದಿನಗಳನ್ನು ಮುನ್ನಡೆಸಿದ್ದಾರೆ. 110 ಗೆಲುವು, 74 ಸೋಲು, 5 ಟೈ, 11 ಫಲಿತಾಂಶ ಇಲ್ಲ. 55ರಷ್ಟು ಗೆಲುವಿನ ಶೇಕಡವಾರು. ಬ್ಯಾಟಿಂಗ್​ನಲ್ಲಿ 53.55ರ ಸರಾಸರಿಯಲ್ಲಿ 6 ಶತಕ, 47 ಅರ್ಧಶತಕ ಸಹಿತ 6641 ರನ್ ಗಳಿಸಿದ್ದಾರೆ. 
icon

(5 / 9)

ರೋಹಿತ್ ಶರ್ಮಾ: ಪ್ರಸ್ತುತ ಏಕದಿನ ತಂಡದ ನಾಯಕನಾಗಿರುವ ಹಿಟ್​ಮ್ಯಾನ್ ಕೂಡ ಎರಡರಲ್ಲೂ ಯಶಸ್ವಿಯಾಗಿದ್ದಾರೆ. 45 ಒಡಿಐಗಳಿಗೆ ನಾಯಕನಾಗಿದ್ದು 34ರಲ್ಲಿ ಗೆದ್ದಿದ್ದಾರೆ. 10 ಸೋಲು, 1 ರದ್ದಾಗಿದೆ. ಗೆಲುವಿನ ಪ್ರಮಾಣ 75.55 ಎಂಬುದು ವಿಶೇಷ. 55.32ರ ಬ್ಯಾಟಿಂಗ್ ಸರಾಸರಿಯಲ್ಲಿ 4 ಶತಕ, 14 ಅರ್ಧಶತಕ ಸಹಿತ 2047 ರನ್ ಕಲೆ ಹಾಕಿದ್ದಾರೆ.
icon

(6 / 9)

ಬಾಬರ್ ಅಜಮ್: ಪಾಕಿಸ್ತಾನ ತಂಡದ ಪರ ಯಶಸ್ವಿ ನಾಯಕ ಎನಿಸಿರುವ ಬಾಬರ್, ಇತ್ತೀಚೆಗೆ ಕ್ಯಾಪ್ಟನ್ಸಿಗೆ ವಿದಾಯ ಹೇಳಿದರು. 46 ಪಂದ್ಯಗಳಿಗೆ ನಾಯಕನಾಗಿದ್ದು 26 ಗೆಲುವು, 14 ಸೋಲು, 1 ರದ್ದಾಗಿದೆ. 64.63ರಷ್ಟು ಗೆಲುವಿನ ಪ್ರಮಾಣ ಹೊಂದಿದ್ದಾರೆ. ಬ್ಯಾಟಿಂಗ್​ನಲ್ಲಿ 60.76ರ ಸರಾಸರಿಯಲ್ಲಿ 8 ಶತಕ, 17 ಅರ್ಧಶತಕ ಸಿಡಿಸಿ 2370 ರನ್ ಕಲೆ ಹಾಕಿದ್ದಾರೆ.
icon

(7 / 9)

ಫಾಫ್ ಡು ಪ್ಲೆಸಿಸ್: ಸೌತ್​ ಆಫ್ರಿಕಾದ ಬೆಸ್ಟ್​ ಬ್ಯಾಟ್ಸ್​ಮನ್ ಸಹ ಎರಡೂ ವಿಭಾಗಗಳಲ್ಲಿ ಯಶಸ್ವಿಯಾಗಿದ್ದಾರೆ. 39 ಏಕದಿನಗಳಿಗೆ ನಾಯಕನಾಗಿದ್ದರು. ಅದರಲ್ಲಿ 28 ಗೆಲುವು, 10 ಸೋಲು, 1 ರದ್ದು. ಗೆಲುವಿನ ಪ್ರಮಾಣ 71.79. ಹಾಗೆಯೇ ಬ್ಯಾಟಿಂಗ್​ನಲ್ಲಿ 57.62ರ ಸರಾಸರಿಯಲ್ಲಿ 5 ಶತಕ, 8 ಅರ್ಧಶತಕ ಸಿಡಿಸಿ 1671 ರನ್ ಚಚ್ಚಿದ್ದಾರೆ. 
icon

(8 / 9)

ಬಹಳಷ್ಟು ಆಟಗಾರರು ನಾಯಕನಾಗದಿದ್ದರೂ ಬ್ಯಾಟಿಂಗ್​ನಲ್ಲಿ ಭರ್ಜರಿ ಪ್ರದರ್ಶನದ ಮೂಲಕ 50+ ಸರಾಸರಿ ಹೊಂದಿದ್ದಾರೆ. ಕೆಲವು ನಾಯಕರು ಬ್ಯಾಟಿಂಗ್​​ನಲ್ಲೂ ಅಮೋಘ ಪ್ರದರ್ಶನ ನೀಡಿದ್ದರೂ 45+ ಸರಾಸರಿ ಹೊಂದಿರುವ ಉದಾಹರಣೆ ಇದೆ. 
icon

(9 / 9)

ಇತರ ಗ್ಯಾಲರಿಗಳು