UPSC OMR: ಯುಪಿಎಸ್‌ಸಿ ಪರೀಕ್ಷೆಯ ಒಎಂಆರ್, ಹಾಜರಾತಿ ಶೀಟ್ ಭರ್ತಿ ಮಾಡುವ ಸರಿಯಾದ ಕ್ರಮವಿದು; ಚಿತ್ರಸಹಿತ ವಿವರಣೆ ಇಲ್ಲಿದೆ ನೋಡಿ
- ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಒಎಂಆರ್ ಶೀಟ್ ಮತ್ತು ಅಟೆಂಡೆನ್ಸ್ ಶೀಟ್‌ಗಳನ್ನು ಸರಿಯಾದ ಕ್ರಮದಲ್ಲಿ ಭರ್ತಿ ಮಾಡುವುದು ಅಗತ್ಯವಾಗಿದೆ. ಎಲ್ಲಾದರೂ ಸರಿಯಾದ ಕ್ರಮದಲ್ಲಿ ಭರ್ತಿ ಮಾಡದೆ ಇದ್ದರೆ ನೀವು ಅವಕಾಶ ಕಳೆದುಕೊಳ್ಳಬೇಕಾಗಬಹುದು.
- ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಒಎಂಆರ್ ಶೀಟ್ ಮತ್ತು ಅಟೆಂಡೆನ್ಸ್ ಶೀಟ್‌ಗಳನ್ನು ಸರಿಯಾದ ಕ್ರಮದಲ್ಲಿ ಭರ್ತಿ ಮಾಡುವುದು ಅಗತ್ಯವಾಗಿದೆ. ಎಲ್ಲಾದರೂ ಸರಿಯಾದ ಕ್ರಮದಲ್ಲಿ ಭರ್ತಿ ಮಾಡದೆ ಇದ್ದರೆ ನೀವು ಅವಕಾಶ ಕಳೆದುಕೊಳ್ಳಬೇಕಾಗಬಹುದು.
(1 / 8)
ಭಾರತದಲ್ಲಿ ಪ್ರತಿವರ್ಷ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯನ್ನು ಲಕ್ಷಾಂತರ ಜನರು ಬರೆಯುತ್ತಾರೆ. ಈ ಪರೀಕ್ಷೆ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆ ಬರೆಯುವ ಸಮಯದಲ್ಲಿ ಒಎಂಆರ್ ಶೀಟ್ ಭರ್ತಿ ಮಾಡುವ ಸಮಯದಲ್ಲಿ ಸಾಕಷ್ಟು ತಪ್ಪುಗಳನ್ನು ಕೆಲವು ಅಭ್ಯರ್ಥಿಗಳು ಮಾಡುತ್ತಾರೆ. ಅಂತಹ ತಪ್ಪುಗಳ ವಿವರ ಇಲ್ಲಿದೆ.
(2 / 8)
ಮೊದಲನೆಯದಾಗಿ ನೀವು ಸರಿಯಾದ ರೀತಿಯಲ್ಲಿ ಬುಕ್‌ಲೆಟ್‌ನಲ್ಲಿ ಬರೆದಿದ್ದೀರಿ ಮತ್ತು ಎನ್‌ಕೋಡ್ ಮಾಡಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
(3 / 8)
ಬುಕ್‌ಲೆಟ್ ಸೀರಿಸ್‌ನಲ್ಲಿ ಸರಿಯಗಿ ಎನ್‌ಕೋಡೆಡ್ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಅಂದರೆ, ಎ, ಬಿ, ಸಿ, ಡಿ ಇತ್ಯಾದಿಗಳಲ್ಲಿ ನೀವು ಯಾವುದನ್ನು ತುಂಬಬೇಕಿತ್ತೋ ಅದನ್ನೇ ಭರ್ತಿ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ.
(4 / 8)
ಇದೇ ರೀತಿ ಸಬ್ಜೆಕ್ಟ್ ಕೋಡ್ ಮತ್ತು ರೋಲ್ ನಂಬರ್ ಸರಿಯಾಗಿ ಎನ್‌ಕೋಡ್ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
(UPSC website)(6 / 8)
ಒಎಂಆರ್ ಶೀಟ್‌ನಲ್ಲಿ ಭರ್ತಿ ಮಾಡಬೇಕಿರುವ ವೃತ್ತವನ್ನು ಸರಿಯಾಗಿ ತುಂಬಿ. ಕೇವಲ ಅದರ ಮೇಲೆ ಒಂದು ಚುಕ್ಕಿ ಇಡುವುದು ಮಾಡಬೇಡಿ. ವೃತ್ತದಲ್ಲಿ ಬೇರೆ ಸಿಂಬಲ್ ಕೂಡ ಹಾಕಬೇಡಿ. ಇದೇ ರೀತಿ ಒಂದು ನಿರ್ದಿಷ್ಟ ಪ್ರಶ್ನೆಗೆ ಎರಡು ವೃತ್ತಗಳನ್ನು ತುಂಬಬೇಡಿ.
ಇತರ ಗ್ಯಾಲರಿಗಳು