ಸುಂದರ ರಂಗೋಲಿಯ ಮೂಲಕ ನಿಮ್ಮ ದೇಶಪ್ರೇಮ ತೋರಿಸುವ ಯೋಚನೆಯಿದೆಯಾ? ಈ ಐಡಿಯಾಗಳನ್ನು ಬಳಸಿ, ವಾವ್‌ ಸೂಪರ್‌ ಎನಿಸಿಕೊಳ್ಳಿ-celebrate independence day 2024 with beautiful rangoli designs super ideas here arc ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸುಂದರ ರಂಗೋಲಿಯ ಮೂಲಕ ನಿಮ್ಮ ದೇಶಪ್ರೇಮ ತೋರಿಸುವ ಯೋಚನೆಯಿದೆಯಾ? ಈ ಐಡಿಯಾಗಳನ್ನು ಬಳಸಿ, ವಾವ್‌ ಸೂಪರ್‌ ಎನಿಸಿಕೊಳ್ಳಿ

ಸುಂದರ ರಂಗೋಲಿಯ ಮೂಲಕ ನಿಮ್ಮ ದೇಶಪ್ರೇಮ ತೋರಿಸುವ ಯೋಚನೆಯಿದೆಯಾ? ಈ ಐಡಿಯಾಗಳನ್ನು ಬಳಸಿ, ವಾವ್‌ ಸೂಪರ್‌ ಎನಿಸಿಕೊಳ್ಳಿ

  • Independence Day 2024: ಸ್ವಾತಂತ್ರ್ಯ ದಿನಾಚರಣೆಗೆ ಕೆಲವೇ ದಿನಗಳಿವೆ. ಆದೇಶಭಕ್ತಿ ಗೀತೆ, ಫ್ಯಾನ್ಸಿ ಡ್ರೆಸ್‌, ಭಾಷಣ, ಚಿತ್ರಕಲೆ, ಕ್ವಿಜ್‌, ರಂಗೋಲಿ, ಡ್ಯಾನ್ಸ್‌ ಮುಂತಾದ ಕಾರ್ಯಕ್ರಮಗಳ ಮೂಲಕ ಸಾರ್ಥಕ ರೀತಿಯಲ್ಲಿ ಆಚರಿಸಲು ತಯಾರಿ ನಡೆಯುತ್ತಿದೆ. ನಿಮ್ಮ ದೇಶಭಕ್ತಿಯನ್ನು ರಂಗೋಲಿಯ ಮುಖಾಂತರ ಚಿತ್ರಿಸಬೇಕೆಂಬ ಆಸೆ ನಿಮಗಿದ್ದರೆ ಇಲ್ಲಿದೆ ಬೆಸ್ಟ್‌ ಐಡಿಯಾಗಳು.

ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು (Independence Day 2024) ಆಚರಿಸಲಾಗುತ್ತದೆ. ಆ ದಿನ ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ನೆನಪಿಸಿಕೊಳ್ಳಲಾಗುತ್ತದೆ. ಬ್ರಿಟೀಷರ ಸಂಕೋಲೆಯಿಂದ 1947, ಆಗಸ್ಟ್‌ 15 ರಂದು ಭಾರತವು ಸ್ವತಂತ್ರವಾಯಿತು. ಆ ದಿನಕ್ಕಿರುವ ವಿಶೇಷ ಮಹತ್ವವನ್ನು ಸಾರುವ ಸಲುವಾಗಿ ಆ ತಾರೀಖನ್ನು ರಂಗೋಲಿಯಲ್ಲಿ ಚಿತ್ರಿಸಬಹುದಾಗಿದೆ. ಕೇಸರಿ, ಬಿಳಿ ಮತ್ತು ಹಸಿರು ಮತ್ತು ನೀಲಿ ಬಣ್ಣಗಳಿಂದ ಆಗಸ್ಟ್‌ 15 ರ ರಂಗೋಲಿ ಬರೆದು, ಈ ರೀತಿ ಬಣ್ಣ ತುಂಬಿ. ಇದು ನೋಡಲು ಸುಂದರವಾಗಿ ಕಾಣುವುದರ ಜೊತೆಗೆ ಈ ದಿನವನ್ನು ಸದಾ ನೆನಪಿನಲ್ಲಿಡುವಂತೆ ಮಾಡುತ್ತದೆ. 
icon

(1 / 5)

ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು (Independence Day 2024) ಆಚರಿಸಲಾಗುತ್ತದೆ. ಆ ದಿನ ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ನೆನಪಿಸಿಕೊಳ್ಳಲಾಗುತ್ತದೆ. ಬ್ರಿಟೀಷರ ಸಂಕೋಲೆಯಿಂದ 1947, ಆಗಸ್ಟ್‌ 15 ರಂದು ಭಾರತವು ಸ್ವತಂತ್ರವಾಯಿತು. ಆ ದಿನಕ್ಕಿರುವ ವಿಶೇಷ ಮಹತ್ವವನ್ನು ಸಾರುವ ಸಲುವಾಗಿ ಆ ತಾರೀಖನ್ನು ರಂಗೋಲಿಯಲ್ಲಿ ಚಿತ್ರಿಸಬಹುದಾಗಿದೆ. ಕೇಸರಿ, ಬಿಳಿ ಮತ್ತು ಹಸಿರು ಮತ್ತು ನೀಲಿ ಬಣ್ಣಗಳಿಂದ ಆಗಸ್ಟ್‌ 15 ರ ರಂಗೋಲಿ ಬರೆದು, ಈ ರೀತಿ ಬಣ್ಣ ತುಂಬಿ. ಇದು ನೋಡಲು ಸುಂದರವಾಗಿ ಕಾಣುವುದರ ಜೊತೆಗೆ ಈ ದಿನವನ್ನು ಸದಾ ನೆನಪಿನಲ್ಲಿಡುವಂತೆ ಮಾಡುತ್ತದೆ. (PC: Pinterest)

ಸ್ವಾತಂತ್ರ್ಯ ದಿನಾಚರಣೆಗೆ ರಂಗೋಲಿಯನ್ನು ಹೂವುಗಳಿಂದ ಬರೆಯಬೇಕೆಂದರೆ ಇವುಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳಬಹುದು. ಸ್ವಲ್ಪ ಢಿಫರೆಂಟ್‌ ಆಗಿ ಕಾಣಿಸುವ ಈ ರಂಗೋಲಿ ಎಲ್ಲರನ್ನೂ ಆಕರ್ಷಿಸುತ್ತದೆ. ಕೇಸರಿ ಬಣ್ಣದ ಹೂವುಗಳಿಗಾಗಿ ಚೆಂಡು ಹೂವು ಆಯ್ದುಕೊಳ್ಳಿ. ಬಿಳಿ ಬಣ್ಣಕ್ಕಾಗಿ ಮಲ್ಲಿಗೆ ಮತ್ತು ಹಸಿರು ಬಣ್ಣಕ್ಕಾಗಿ ತುಳಸಿ ಎಲೆ ಅಥವಾ ಗರಿಕೆ ಆಯ್ದುಕೊಳ್ಳಿ. ಅವುಗಳನ್ನು 3 ಚೌಕಗಳಲ್ಲಿ ಕೇಸರಿ, ಬಿಳಿ, ಹಸಿರು ಬರುವಂತೆ ಹೂವುಗಳನ್ನು ಜೋಡಿಸಿ. ಮಧ್ಯದಲ್ಲಿ ದೇಶಕ್ಕೆ ನಮನ ಸಲ್ಲಿಸುವಂತೆ ದೀಪ ಬೆಳಗಿಸಬಹುದು. ಅಥವಾ ಧ್ವಜದ ಬರೆಯಬಹುದು. ಹೂವುಗಳ ಘಮದಲ್ಲಿ ನಿಮ್ಮ ರಂಗೋಲಿ ವಿಶೇಷವಾಗಿ ಕಾಣುತ್ತದೆ. 
icon

(2 / 5)

ಸ್ವಾತಂತ್ರ್ಯ ದಿನಾಚರಣೆಗೆ ರಂಗೋಲಿಯನ್ನು ಹೂವುಗಳಿಂದ ಬರೆಯಬೇಕೆಂದರೆ ಇವುಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳಬಹುದು. ಸ್ವಲ್ಪ ಢಿಫರೆಂಟ್‌ ಆಗಿ ಕಾಣಿಸುವ ಈ ರಂಗೋಲಿ ಎಲ್ಲರನ್ನೂ ಆಕರ್ಷಿಸುತ್ತದೆ. ಕೇಸರಿ ಬಣ್ಣದ ಹೂವುಗಳಿಗಾಗಿ ಚೆಂಡು ಹೂವು ಆಯ್ದುಕೊಳ್ಳಿ. ಬಿಳಿ ಬಣ್ಣಕ್ಕಾಗಿ ಮಲ್ಲಿಗೆ ಮತ್ತು ಹಸಿರು ಬಣ್ಣಕ್ಕಾಗಿ ತುಳಸಿ ಎಲೆ ಅಥವಾ ಗರಿಕೆ ಆಯ್ದುಕೊಳ್ಳಿ. ಅವುಗಳನ್ನು 3 ಚೌಕಗಳಲ್ಲಿ ಕೇಸರಿ, ಬಿಳಿ, ಹಸಿರು ಬರುವಂತೆ ಹೂವುಗಳನ್ನು ಜೋಡಿಸಿ. ಮಧ್ಯದಲ್ಲಿ ದೇಶಕ್ಕೆ ನಮನ ಸಲ್ಲಿಸುವಂತೆ ದೀಪ ಬೆಳಗಿಸಬಹುದು. ಅಥವಾ ಧ್ವಜದ ಬರೆಯಬಹುದು. ಹೂವುಗಳ ಘಮದಲ್ಲಿ ನಿಮ್ಮ ರಂಗೋಲಿ ವಿಶೇಷವಾಗಿ ಕಾಣುತ್ತದೆ. (PC: Pinterest)

ಸಾಮಾನ್ಯವಾಗಿ ಎಲ್ಲರಿಗೂ ತಾವು ಬರೆಯುವ ರಂಗೋಲಿ ಎಲ್ಲರೂ ಕುತೂಹಲದಿಂದ ನೋಡುವಂತಿರಬೇಕು ಎಂಬ ಆಸೆ ಇರುತ್ತದೆ. ಆದರೆ ಸಮಯದ ಅಭಾವವಿದ್ದಾಗ ಏನು ಮಾಡುವುದು ಎಂದೇ ತೋಚುವುದಿಲ್ಲ. ಆಗ ಈ ಸುಲಭದ ರಂಗೋಲಿ ಆಯ್ದುಕೊಳ್ಳಬಹುದು. ರಂಗೋಲಿ ಪುಡಿಯಿಂದ ಮಧ್ಯದಲ್ಲಿ ಒಂದು ಹೂವನ್ನು ಬಿಡಿಸಿ. ಅದರ ಸುತ್ತ ಅರ್ಧ ಚಂದ್ರಾಕಾರ ಬರೆಯಿರಿ. ಅವು ಸಮಾನಾಂತರದಲ್ಲಿ ಒಂದೊಕ್ಕೊಂದು ಹೊಂದಿಕೊಂಡಿರಲಿ. ಅದಕ್ಕೆ ಈಗ ನಮ್ಮ ರಾಷ್ಟ್ರಧ್ವಜದ ಕೇಸರಿ, ಬಿಳಿ, ಹಸಿರು ಬಣ್ಣವನ್ನು ತುಂಬುತ್ತಾ ಬನ್ನಿ. ನೀಲಿ ಬಣ್ಣವನ್ನು ಮಧ್ಯದ ಹೂವಿನ ಡಿಸೈನ್‌ಗೆ ಹಾಕಿ. ಆಗ ನೋಡಿ ಸ್ವತಂತ್ರ ದಿನಾಚರಣೆಗೆ ಸಿಂಪಲ್‌ ಆದ ಸೂಪರ್‌ ರಂಗೋಲಿ ಸಿದ್ಧವಾಗುತ್ತದೆ. 
icon

(3 / 5)

ಸಾಮಾನ್ಯವಾಗಿ ಎಲ್ಲರಿಗೂ ತಾವು ಬರೆಯುವ ರಂಗೋಲಿ ಎಲ್ಲರೂ ಕುತೂಹಲದಿಂದ ನೋಡುವಂತಿರಬೇಕು ಎಂಬ ಆಸೆ ಇರುತ್ತದೆ. ಆದರೆ ಸಮಯದ ಅಭಾವವಿದ್ದಾಗ ಏನು ಮಾಡುವುದು ಎಂದೇ ತೋಚುವುದಿಲ್ಲ. ಆಗ ಈ ಸುಲಭದ ರಂಗೋಲಿ ಆಯ್ದುಕೊಳ್ಳಬಹುದು. ರಂಗೋಲಿ ಪುಡಿಯಿಂದ ಮಧ್ಯದಲ್ಲಿ ಒಂದು ಹೂವನ್ನು ಬಿಡಿಸಿ. ಅದರ ಸುತ್ತ ಅರ್ಧ ಚಂದ್ರಾಕಾರ ಬರೆಯಿರಿ. ಅವು ಸಮಾನಾಂತರದಲ್ಲಿ ಒಂದೊಕ್ಕೊಂದು ಹೊಂದಿಕೊಂಡಿರಲಿ. ಅದಕ್ಕೆ ಈಗ ನಮ್ಮ ರಾಷ್ಟ್ರಧ್ವಜದ ಕೇಸರಿ, ಬಿಳಿ, ಹಸಿರು ಬಣ್ಣವನ್ನು ತುಂಬುತ್ತಾ ಬನ್ನಿ. ನೀಲಿ ಬಣ್ಣವನ್ನು ಮಧ್ಯದ ಹೂವಿನ ಡಿಸೈನ್‌ಗೆ ಹಾಕಿ. ಆಗ ನೋಡಿ ಸ್ವತಂತ್ರ ದಿನಾಚರಣೆಗೆ ಸಿಂಪಲ್‌ ಆದ ಸೂಪರ್‌ ರಂಗೋಲಿ ಸಿದ್ಧವಾಗುತ್ತದೆ. (PC: Pinterest)

ಭಾರತದ ರಾಷ್ಟ್ರ ಪಕ್ಷಿ ಯಾವುದು ಎಂದು ಯಾರಾದರೂ ಪ್ರಶ್ನಿಸಿದರೆ, ಥಟ್ಟನೆ ಬರುವ ಉತ್ತರ ನವಿಲು. ಆ ನವಿಲನ್ನು ಬಳಸಿಕೊಂಡು ಸ್ವಾತಂತ್ರ್ಯ ದಿನಾಚರಣೆಗೆ ರಂಗೋಲಿ ಹಾಕಬೇಕೆಂದುಕೊಂಡಿದ್ದರೆ ಈ ರೀತಿಯಾಗಿ ಬರೆಯಬಹುದು. ನವಿಲಿಗೆ ನೀಲಿ ಬಣ್ಣ ಹಾಕಿ ಅದರ ಗರಿಗಳಿಗೆ ಕೇಸರಿ, ಬಿಳಿ, ಹಸಿರು ಬಣ್ಣಗಳನ್ನು ಹಾಕಿ. ಜೋಡಿ ನವಿಲುಗಳ ಮಧ್ಯದಲ್ಲಿ ಭಾರತದ ಹೆಮ್ಮೆಯ ರಾಷ್ಟ್ರಧ್ವಜ ಬರೆದು ಅದಕ್ಕೆ ಬಣ್ಣ ಹಾಕಿ. 
icon

(4 / 5)

ಭಾರತದ ರಾಷ್ಟ್ರ ಪಕ್ಷಿ ಯಾವುದು ಎಂದು ಯಾರಾದರೂ ಪ್ರಶ್ನಿಸಿದರೆ, ಥಟ್ಟನೆ ಬರುವ ಉತ್ತರ ನವಿಲು. ಆ ನವಿಲನ್ನು ಬಳಸಿಕೊಂಡು ಸ್ವಾತಂತ್ರ್ಯ ದಿನಾಚರಣೆಗೆ ರಂಗೋಲಿ ಹಾಕಬೇಕೆಂದುಕೊಂಡಿದ್ದರೆ ಈ ರೀತಿಯಾಗಿ ಬರೆಯಬಹುದು. ನವಿಲಿಗೆ ನೀಲಿ ಬಣ್ಣ ಹಾಕಿ ಅದರ ಗರಿಗಳಿಗೆ ಕೇಸರಿ, ಬಿಳಿ, ಹಸಿರು ಬಣ್ಣಗಳನ್ನು ಹಾಕಿ. ಜೋಡಿ ನವಿಲುಗಳ ಮಧ್ಯದಲ್ಲಿ ಭಾರತದ ಹೆಮ್ಮೆಯ ರಾಷ್ಟ್ರಧ್ವಜ ಬರೆದು ಅದಕ್ಕೆ ಬಣ್ಣ ಹಾಕಿ. (PC: Pinterest)

ನಮ್ಮ ಧ್ವಜದ ರಂಗೋಲಿ ಹಾಕಬೇಕೆಂದುಕೊಂಡಿದ್ದರೆ ಈ ರಂಗೋಲಿ ಆಯ್ದುಕೊಳ್ಳಬಹುದು. ಬಿಳಿ ರಂಗೋಲಿ ಪುಡಿಯಲ್ಲಿ ಧ್ವಜ ಬರೆಯಿರಿ. ಅದಕ್ಕೆ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳನ್ನು ತುಂಬಿ. ಮಧ್ಯದಲ್ಲಿನ ಅಶೋಕ ಚಕ್ರಕ್ಕೆ ನೀಲಿ ಬಣ್ಣ ಹಾಕಿ. ಕೇಸರಿ, ಬಿಳಿ, ಬಣ್ಣದ ಹೂವನ್ನು ಬರೆಯಿರಿ. ದೇಶಕ್ಕೆ ನಮನ ಸಲ್ಲಿಸುವ ಘೋಷವಾಕ್ಯವಾದ ‘ಜೈ ಹಿಂದ್‌’ ಅನ್ನು ಧ್ವಜದ ಕೆಳಗೆ ಬರೆಯಿರಿ. ಇದು ಅತ್ಯಂತ ಸುಂದರವಾಗಿ ಕಾಣಿಸುವುದರ ಜೊತೆಗೆ ದೇಶಪ್ರೇಮ, ದೇಶಭಕ್ತಿ ಎರಡನ್ನೂ ನೆನಪಿಸುತ್ತದೆ. 
icon

(5 / 5)

ನಮ್ಮ ಧ್ವಜದ ರಂಗೋಲಿ ಹಾಕಬೇಕೆಂದುಕೊಂಡಿದ್ದರೆ ಈ ರಂಗೋಲಿ ಆಯ್ದುಕೊಳ್ಳಬಹುದು. ಬಿಳಿ ರಂಗೋಲಿ ಪುಡಿಯಲ್ಲಿ ಧ್ವಜ ಬರೆಯಿರಿ. ಅದಕ್ಕೆ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳನ್ನು ತುಂಬಿ. ಮಧ್ಯದಲ್ಲಿನ ಅಶೋಕ ಚಕ್ರಕ್ಕೆ ನೀಲಿ ಬಣ್ಣ ಹಾಕಿ. ಕೇಸರಿ, ಬಿಳಿ, ಬಣ್ಣದ ಹೂವನ್ನು ಬರೆಯಿರಿ. ದೇಶಕ್ಕೆ ನಮನ ಸಲ್ಲಿಸುವ ಘೋಷವಾಕ್ಯವಾದ ‘ಜೈ ಹಿಂದ್‌’ ಅನ್ನು ಧ್ವಜದ ಕೆಳಗೆ ಬರೆಯಿರಿ. ಇದು ಅತ್ಯಂತ ಸುಂದರವಾಗಿ ಕಾಣಿಸುವುದರ ಜೊತೆಗೆ ದೇಶಪ್ರೇಮ, ದೇಶಭಕ್ತಿ ಎರಡನ್ನೂ ನೆನಪಿಸುತ್ತದೆ. (PC: Pinterest)


ಇತರ ಗ್ಯಾಲರಿಗಳು