ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟೆಸ್ಟ್​ನಲ್ಲಿ​ ಭಾರತದ ಪರ ಮೊದಲ ಹ್ಯಾಟ್ರಿಕ್ ಪಡೆದಿದ್ದ ದಿಗ್ಗಜ ಸ್ಪಿನ್ನರ್​ಗೆ ಜನ್ಮದಿನ; ಆತನ ದಾಖಲೆಗಳು ಇಲ್ಲಿದೆ

ಟೆಸ್ಟ್​ನಲ್ಲಿ​ ಭಾರತದ ಪರ ಮೊದಲ ಹ್ಯಾಟ್ರಿಕ್ ಪಡೆದಿದ್ದ ದಿಗ್ಗಜ ಸ್ಪಿನ್ನರ್​ಗೆ ಜನ್ಮದಿನ; ಆತನ ದಾಖಲೆಗಳು ಇಲ್ಲಿದೆ

  • Harbhajan Singhs birthday: ಭಾರತ ತಂಡದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಇಂದು 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಅವರ ದಾಖಲೆಗಳ ಪಟ್ಟಿ ಇಲ್ಲಿದೆ ನೋಡಿ.

ಟೀಮ್ ಇಂಡಿಯಾ ದಿಗ್ಗಜ ಸ್ಪಿನ್ನರ್​ ಹರ್ಭಜನ್ ಸಿಂಗ್ ಅವರು 44ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 18 ವರ್ಷಗಳ ಸುದೀರ್ಘ ಕ್ರಿಕೆಟ್ ಜರ್ನಿಯಲ್ಲಿ ಭಜ್ಜಿ ಹತ್ತು ಹಲವು ಮಹೋನ್ನತ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವುಗಳ ಒಂದು ಝಲಕ್ ಇಲ್ಲಿದೆ ನೋಡಿ.
icon

(1 / 8)

ಟೀಮ್ ಇಂಡಿಯಾ ದಿಗ್ಗಜ ಸ್ಪಿನ್ನರ್​ ಹರ್ಭಜನ್ ಸಿಂಗ್ ಅವರು 44ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 18 ವರ್ಷಗಳ ಸುದೀರ್ಘ ಕ್ರಿಕೆಟ್ ಜರ್ನಿಯಲ್ಲಿ ಭಜ್ಜಿ ಹತ್ತು ಹಲವು ಮಹೋನ್ನತ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವುಗಳ ಒಂದು ಝಲಕ್ ಇಲ್ಲಿದೆ ನೋಡಿ.(ANI)

1998ರಲ್ಲಿ ಏಕದಿನ, ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಹರ್ಭಜನ್, 2006ರಲ್ಲಿ ಟಿ20 ಕ್ರಿಕೆಟ್​ಗೆ ಡೆಬ್ಯೂ ಮಾಡಿದರು. 2015ರ ತನಕ ಟೆಸ್ಟ್, ಏಕದಿನ, 2016ರಲ್ಲಿ ಟಿ20ಐ ಕ್ರಿಕೆಟ್​ಗೆ ವಿದಾಯ ಹೇಳಿದರು. ಮೂರು ಫಾರ್ಮೆಟ್​ಗಳ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 711 ವಿಕೆಟ್ ಕಿತ್ತಿದ್ದು, 3,570 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
icon

(2 / 8)

1998ರಲ್ಲಿ ಏಕದಿನ, ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಹರ್ಭಜನ್, 2006ರಲ್ಲಿ ಟಿ20 ಕ್ರಿಕೆಟ್​ಗೆ ಡೆಬ್ಯೂ ಮಾಡಿದರು. 2015ರ ತನಕ ಟೆಸ್ಟ್, ಏಕದಿನ, 2016ರಲ್ಲಿ ಟಿ20ಐ ಕ್ರಿಕೆಟ್​ಗೆ ವಿದಾಯ ಹೇಳಿದರು. ಮೂರು ಫಾರ್ಮೆಟ್​ಗಳ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 711 ವಿಕೆಟ್ ಕಿತ್ತಿದ್ದು, 3,570 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.(harbhajan_singh-X)

2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಜಯಿಸಿದ ಭಾರತ ತಂಡದ ಸದಸ್ಯನಾಗಿದ್ದ ಹರ್ಭಜನ್, 2002ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಶ್ರೀಲಂಕಾ ತಂಡದೊಂದಿಗೆ ಜಂಟಿ ವಿಜೇತ ಟೀಮ್ ಇಂಡಿಯಾ ಭಾಗವಾಗಿದ್ದರು.
icon

(3 / 8)

2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಜಯಿಸಿದ ಭಾರತ ತಂಡದ ಸದಸ್ಯನಾಗಿದ್ದ ಹರ್ಭಜನ್, 2002ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಶ್ರೀಲಂಕಾ ತಂಡದೊಂದಿಗೆ ಜಂಟಿ ವಿಜೇತ ಟೀಮ್ ಇಂಡಿಯಾ ಭಾಗವಾಗಿದ್ದರು.(AP)

ಕೆಳ ಕ್ರಮಾಂಕದಲ್ಲಿ ಎರಡು ಟೆಸ್ಟ್​ ಶತಕ ಸಿಡಿಸಿರುವ ಭಜ್ಜಿ ಅವರ ಗರಿಷ್ಠ ಸ್ಕೋರ್ 115 ಆಗಿದೆ. 417 ವಿಕೆಟ್‌ಗಳೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ 3ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಈಡನ್ ಗಾರ್ಡನ್ಸ್‌ನಲ್ಲಿ 46 ವಿಕೆಟ್‌ಗಳೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಬೌಲರ್ ಎನಿಸಿದ್ದಾರೆ.
icon

(4 / 8)

ಕೆಳ ಕ್ರಮಾಂಕದಲ್ಲಿ ಎರಡು ಟೆಸ್ಟ್​ ಶತಕ ಸಿಡಿಸಿರುವ ಭಜ್ಜಿ ಅವರ ಗರಿಷ್ಠ ಸ್ಕೋರ್ 115 ಆಗಿದೆ. 417 ವಿಕೆಟ್‌ಗಳೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ 3ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಈಡನ್ ಗಾರ್ಡನ್ಸ್‌ನಲ್ಲಿ 46 ವಿಕೆಟ್‌ಗಳೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಬೌಲರ್ ಎನಿಸಿದ್ದಾರೆ.(PTI)

ಟೆಸ್ಟ್​ ಪಂದ್ಯವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಆರನೇ ಬೌಲರ್​​. ಅಲ್ಲದೆ, ಸತತ ಎರಡು ಬಾರಿ 10 ವಿಕೆಟ್ ಪಡೆದಿದ್ದಾರೆ. ಟೆಸ್ಟ್​​ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಬೌಲ್ (28580) ಮಾಡಿರುವ ವಿಶ್ವದ 10ನೇ ಬೌಲರ್​ ಎನಿಸಿದ್ದಾರೆ.
icon

(5 / 8)

ಏಕದಿನ ಮತ್ತು ಟೆಸ್ಟ್​ನಲ್ಲಿ ಸಾವಿರ ಪ್ಲಸ್ ರನ್ ಮತ್ತು ನೂರು ಪ್ಲಸ್ ವಿಕೆಟ್ ಪಡೆದಿರುವ ಭಜ್ಜಿ, ಟೆಸ್ಟ್​ನಲ್ಲಿ ವೇಗದ 400 ವಿಕೆಟ್ (96 ಇನ್ನಿಂಗ್ಸ್) ಪಡೆದ ವಿಶ್ವದ 9ನೇ ಬೌಲರ್​ ಆಗಿದ್ದಾರೆ. ಹೀಗೆ ಹಲವು ದಾಖಲೆಗಳನ್ನು ಭಜ್ಜಿ ನಿರ್ಮಿಸಿದ್ದಾರೆ.
icon

(6 / 8)

ದಾಖಲೆಗಳಿಗೆ ಮಾತ್ರವಲ್ಲ, ವಿವಾದಗಳಿಂದಲೂ ಹರ್ಭಜನ್ ಸಿಂಗ್ ಸುದ್ದಿಯಾಗಿದ್ದಾರೆ. ಸಹ ಕ್ರಿಕೆಟಿಗ ಶ್ರೀಶಾಂತ್​ಗೆ ಕಪಾಳಮೋಕ್ಷ ಮಾಡಿದ್ದರು. ಇದು ಭಾರಿ ವಿವಾದದಲ್ಲಿ ಸಿಲುಕಿದ್ದರು. ಟೆಸ್ಟ್​ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾದ ಬ್ಯಾಟರ್​ ರಿಕಿ ಪಾಂಟಿಂಗ್ ಅವರನ್ನು ಹತ್ತು ಬಾರಿ ಔಟ್ ಮಾಡಿದ್ದಾರೆ.
icon

(7 / 8)

2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ಎಸೆತಗಳಲ್ಲಿ 3 ವಿಕೆಟ್‌ ಕಬಳಿಸಿದ್ದ ಹರ್ಭಜನ್ ಸಿಂಗ್ ಅವರು ಭಾರತದ ಪರ ಟೆಸ್ಟ್ ಹ್ಯಾಟ್ರಿಕ್ ಪಡೆದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದಾರೆ.
icon

(8 / 8)

2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ಎಸೆತಗಳಲ್ಲಿ 3 ವಿಕೆಟ್‌ ಕಬಳಿಸಿದ್ದ ಹರ್ಭಜನ್ ಸಿಂಗ್ ಅವರು ಭಾರತದ ಪರ ಟೆಸ್ಟ್ ಹ್ಯಾಟ್ರಿಕ್ ಪಡೆದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದಾರೆ.

ಇತರ ಗ್ಯಾಲರಿಗಳು