ಗರ್ಭಿಣಿಯರಾಗಿದ್ದಾಗ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ಬೆಡಗಿಯರಿವರು!
- ಕರೀನಾ ಕಪೂರ್ ಖಾನ್‌ನಿಂದ ಲಿಸಾ ಹೇಡನ್‌ವರೆಗೆ, ಗರ್ಭಿಣಿಯರಾಗಿದ್ದಾಗ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ಬೆಡಗಿಯರ ಬಗ್ಗೆ ಇಲ್ಲಿದೆ ಮಾಹಿತಿ.
- ಕರೀನಾ ಕಪೂರ್ ಖಾನ್‌ನಿಂದ ಲಿಸಾ ಹೇಡನ್‌ವರೆಗೆ, ಗರ್ಭಿಣಿಯರಾಗಿದ್ದಾಗ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ಬೆಡಗಿಯರ ಬಗ್ಗೆ ಇಲ್ಲಿದೆ ಮಾಹಿತಿ.
(1 / 6)
ಗರ್ಭಾವಸ್ಥೆಯ ಸಮಯದಲ್ಲಿ ಹೆಣ್ಣುಮಕ್ಕಳು ಹೆಚ್ಚು ವಿಶ್ರಾಂತಿ ಪಡೆಯಬೇಕು ಹಾಗೂ ಕೆಲಸಗಳನ್ನು ಮಾಡದೆ ಮನೆಯೊಳಗೆ ಇರಬೇಕು ಎನ್ನುತ್ತಾರೆ. ಆದರೆ ಈ ಸೆಲೆಬ್ರಿಟಿಗಳು ಈ ಮನೋಭಾವವನ್ನು ಎದುರಿಸಿ ಹೊರಗಡಿ ಇಟ್ಟಿದ್ದರು, ಮಾತ್ರವಲ್ಲ ಹೊಟ್ಟೆಯಲ್ಲಿ ಮಗುವನ್ನಿಟ್ಟುಕೊಂಡು ರ‍್ಯಾಂಪ್ ವಾಕ್ ಮಾಡುವ ಮೂಲಕ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದರು.
(2 / 6)
ಅಂತರಾ ಮೋತಿವಾಲಾ ಮಾರ್ವಾ: ನಟ ಮೋಹಿತ್ ಮರ್ವಾ ಅವರ ಪತ್ನಿ ಅಂತರಾ ಮೋತಿವಾಲಾ ಇತ್ತೀಚೆಗೆ ಮುಂಬೈನಲ್ಲಿ ನಡೆದ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ತಮ್ಮ ಬೇಬಿ ಬಂಪ್‌ನೊಂದಿಗೆ ರ‍್ಯಾಂಪ್ ವಾಕ್ ಮಾಡಿದರು. ತನ್ನ ಎರಡನೇ ಮಗುವಿಗೆ ಗರ್ಭಿಣಿಯಾಗಿರುವ ಅಂತರಾ, ಮಿನುಗುವ ಟಾಪ್ ಮತ್ತು ಮ್ಯಾಚಿಂಗ್ ಸ್ಕರ್ಟ್ ಧರಿಸಿದ್ದರು.
(3 / 6)
ಲೀಸಾ ಹೇಡನ್: ಲಿಸಾ ತನ್ನ ಮನಸ್ಸಿಗೆ ತೋಚಿದ್ದನ್ನು ಯಾರಿಗೂ ಹೆದರದೆ ಧೈರ್ಯವಾಗಿ ಹೇಳುವ ಬಾಲಿವುಡ್ ನಟಿ. ಆಕೆ ಸದಾ ಭಿನ್ನ ಉಡುಪುಗಳನ್ನು ಪ್ರಯೋಗ ಮಾಡುವ ಮೂಲಕ ಗಮನ ಸೆಳೆಯುತ್ತಾರೆ. ಸದಾ ಬೋಲ್ಡ್ ಆಗಿ ಡ್ರೆಸ್ ಮಾಡಿಕೊಳ್ಳುವುದು ಈಕೆಗೆ ಅಚ್ಚುಮೆಚ್ಚು. ಆಗಸ್ಟ್ 22, 2019 ರಂದು, ಡಿಸೈನರ್ ಅಮಿತ್ ಅಗರ್ವಾಲ್ ಷೋನಲ್ಲಿ ಆಕೆ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದರು. ಆ ಸಮಯದಲ್ಲಿ ಈ ನಟಿ ತನ್ನ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದರು.
(4 / 6)
ಕರೋಲ್ ಗ್ರ್ಯಾಸಿಯಾಸ್: ಭಾರತೀಯ ಸೂಪರ್ ಮಾಡೆಲ್ ಕರೋಲ್ ಗ್ರ್ಯಾಸಿಯಾಸ್. ಈಕೆ 2016ರ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಗೌರಂಗ್ ಸೀರೆಯಲ್ಲಿ ತನ್ನ ಬೇಬಿ ಬಂಪ್ ಅನ್ನು ತೋರಿಸುತ್ತಾ ರ‍್ಯಾಂಪ್ ವಾಕ್ ಮಾಡಿದ್ದಕ್ಕಾಗಿ ಸುದ್ದಿಯಾಗಿದ್ದರು.
(5 / 6)
ಕರೀನಾ ಕಪೂರ್: 2016ರಲ್ಲಿ ಬೆಬೋ ಆರು ತಿಂಗಳ ಗರ್ಭಿಣಿಯಾಗಿದ್ದಾಗ, ಡಿಸೈನರ್ ಸಬ್ಯಸಾಚಿಗಾಗಿ ರನ್‌ವೇಯಲ್ಲಿ ನಡೆದರು.
ಇತರ ಗ್ಯಾಲರಿಗಳು