Health Tips: ತನ್ನಿಂದ ತಾನೇ ಬೆಳೆಯುವ ಒಂದೆಲಗ ಹೊಂದಿದೆ ಹಲವಾರು ಪ್ರಯೋಜನ, ನಿಮ್ಮ ಆರೋಗ್ಯ ವೃದ್ದಿಗೆ ಇದು ರಾಮಬಾಣ
- Centella asiatica: ಸುಲಭವಾಗಿ ತಾನೇ ಬೆಳೆದುಕೊಳ್ಳುವ ಒಂದೆಲಗದ ಪ್ರಯೋಜನ ಒಂದೆರಡಲ್ಲ, ಹಸಿರು ಎಲೆಯನ್ನು ಬಳಸಿ ಆರೋಗ್ಯ ಸುಧಾರಿಸಿಕೊಳ್ಳಿ. ಈ ಎಲೆಯನ್ನು ನೇರವಾಗಿ ತಿನ್ನಲು ಕಷ್ಟವಾಗುತ್ತದೆ ಎಂದಾದರೆ ಇದರಿಂದ ನಾನಾ ರೀತಿಯ ಪದಾರ್ಥಗಳನ್ನು ಮನೆಯಲ್ಲೇ ಮಾಡಬಹುದು.

(1 / 6)
ಒಂದೆಲಗ ಅಥವಾ ಬ್ರಾಹ್ಮಿ ಎಂದು ಕರೆಯುವ ಈ ಎಲೆಗಳನ್ನು ಚಿಕ್ಕ ಮಕ್ಕಳಿಗೆ ನೀಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಎಂದರೆ ಇದು ಬುದ್ಧಿಯನ್ನು ಚುರುಕಾಗಿಸುತ್ತದೆ. ನೀವೂ ಕೂಡ ಇದನ್ನು ನಿತ್ಯ ತಿಂದರೆ ಬುದ್ಧಿಶಕ್ತಿ ಹೆಚ್ಚಾಗುತ್ತದೆ.
(2 / 6)
ಈ ಎಲೆಯಿಂದ ನೀವು ತಂಬುಳಿ ಮಾಡಿಕೊಂಡು ಅನ್ನದ ಜೊತೆ ಸವಿಯಬಹುದು. ಕಾಯಿತುರಿ ಹಾಕು ಈ ಎಲೆಗಳನ್ನು ಒಟ್ಟಿಗೆ ಸೇರಿಸಿ ರುಬ್ಬಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಆನಂತರದಲ್ಲಿ ಅದಕ್ಕೆ ಒಗ್ಗರಣೆ ಹಾಕಿದರಾಯಿತು.
(3 / 6)
ನಿಮಗೆ ನೆಗಡಿ, ಕೆಮ್ಮು ಅಥವಾ ಶೀತ ಇದ್ದಾಗ ನೀವಿದನ್ನು ಬಿಸಿಮಾಡಿಕೊಂಡು ಇದರ ರಸದ ಕಷಾಯ ಮಾಡಿಕೊಂಡು ಕುಡಿದರೆ ಕಡಿಮೆ ಆಗುತ್ತದೆ.
(4 / 6)
ಇದರ ಬಿಡಿ ಎಲೆಗಳನ್ನು ನೀವು ಹಸಿದಾಗಿಯೇ ಕೂಡ ತಿನ್ನಬಹುದು. ಇದನ್ನು ಮಿಕ್ಸಿಯಲ್ಲಿ ರುಬ್ಬಿ ಇದಕ್ಕೆ ಹಾಲು ಹಾಗೂ ಬೆಲ್ಲ ಹಾಕಿಯೂ ಕುಡಿಯಬಹುದು.
(5 / 6)
ಪ್ರತಿದಿನ ನಾಲ್ಕರಿಂದ 5 ಎಲೆಗಳನ್ನು ಚಿಕ್ಕ ಮಕ್ಕಳು ತಿನ್ನಬಹುದು. ದೊಡ್ಡವರು 10 ರಿಂದ 12 ಎಲೆಗಳನ್ನು ಹಸಿದಾಗಿ ತಿನ್ನಬಹುದು.
ಇತರ ಗ್ಯಾಲರಿಗಳು