Bandipur: ಬಂಡೀಪುರಕ್ಕೆ ಹಸಿರು ಕಳೆ ತಂದ ನಿರಂತರ ಮಳೆ, ವನ್ಯಜೀವಿಗಳೂ ನಿರಾಳ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bandipur: ಬಂಡೀಪುರಕ್ಕೆ ಹಸಿರು ಕಳೆ ತಂದ ನಿರಂತರ ಮಳೆ, ವನ್ಯಜೀವಿಗಳೂ ನಿರಾಳ Photos

Bandipur: ಬಂಡೀಪುರಕ್ಕೆ ಹಸಿರು ಕಳೆ ತಂದ ನಿರಂತರ ಮಳೆ, ವನ್ಯಜೀವಿಗಳೂ ನಿರಾಳ photos

 Bandipur Rain ಕರ್ನಾಟಕದಲ್ಲಿ ಎಲ್ಲೆಡೆ ಈಗ ಮಳೆ ಸಮಯ.ಬಂಡೀಪುರ ಅರಣ್ಯ ಪ್ರದೇಶದಲ್ಲೂ( Bandipur Forest) ಮಳೆಯಾಗಿದೆ. ಬಿಸಿಲ ಬೇಗೆಯಿಂದ ಬಳಲಿದ್ದ ಪಕ್ಷಿ, ಪ್ರಾಣಿಗಳು ಈಗ ರಿಲಾಕ್ಸ್‌ ಸಮಯ. ಹೀಗಿದೆ ಚಿತ್ರನೋಟ.

ಬಂಡೀಪುರ ಕರ್ನಾಟಕದ ಪ್ರಮುಖ ವನ್ಯಧಾಮ/ ರಾಷ್ಟ್ರೀಯ ಉದ್ಯಾನ/ ಹುಲಿ ಸಂರಕ್ಷಿತ ಪ್ರದೇಶ.  ಎಲೆ ಉದುರುವ (Deciduous) ಅರಣ್ಯ ಪ್ರಕಾರವಾದ ಇಲ್ಲಿನ ಕಾಡು ಪ್ರತಿ ಋತುವಿಗೆ ತನ್ನ ಬಣ್ಣ ಬದಲಿಸುತ್ತದೆ. ಈಗ ಎಲ್ಲೆಡೆ ಹಸಿರುಮಯ,
icon

(1 / 6)

ಮಳೆಗಾಲದಲ್ಲಿ ಹಚ್ಚ ಹಸಿರಿದ್ದರೆ, ಚಳಿಗಾಲದಲ್ಲಿ ಹಣ್ಣೆಲೆ, ಬಲಿತ ಹುಲ್ಲು, ಬೇಸಿಗೆಯಲ್ಲಿ ಉದುರಿದ ಎಲೆ, ಒಣಗಿದ ಹುಲ್ಲಿನಿಂದ ಬರಡು ಭಾವ ಇರುತ್ತದೆ. ಈಗ ಮಳೆ ಬಂದಿರುವುದರಿಂದ ಸೀಳು ನಾಯಿ ಸಹಿತ ಎಲ್ಲ ಪ್ರಾಣಿಗಳಿಗೂ ಮಳೆಯೊಂದಿಗೆ ಕಳೆಯುವ ಸಮಯ.
icon

(2 / 6)

ಚಿರತೆಗಳಂತೂ ಮಳೆ ಬಂದರೂ ಮರವೇ, ಮಳೆ ಬಾರದೇ ಇದ್ದರೂ ಮರವೇ. ಅವುಗಳ ಆವಾಸ ಸ್ಥಾನವೂ ಮರಗಳು. ಬಂಡೀಪುರದಲ್ಲೀ ಹೀಗೆ ಮಳೆಯಿಂದ ಮರ ವೇರಿ  ಕುಳಿತ ಚಿರತೆ.
icon

(3 / 6)

ಚಿರತೆಗಳಂತೂ ಮಳೆ ಬಂದರೂ ಮರವೇ, ಮಳೆ ಬಾರದೇ ಇದ್ದರೂ ಮರವೇ. ಅವುಗಳ ಆವಾಸ ಸ್ಥಾನವೂ ಮರಗಳು. ಬಂಡೀಪುರದಲ್ಲೀ ಹೀಗೆ ಮಳೆಯಿಂದ ಮರ ವೇರಿ  ಕುಳಿತ ಚಿರತೆ.(Mohan Thomas)

ಈ ಎಲೆ ಉದುರುವ ಕಾಡುಗಳೇ ಹೆಚ್ಚಿನ ದೊಡ್ಡ ಸಸ್ತನಿಗಳಾದ ಆನೆ ಹುಲಿ, ಚಿರತೆ, ಕೆನ್ನಾಯಿ , ಕಾಟಿ, ಕಡವೆ, ಜಿಂಕೆ, ಕರಡಿ ಮತ್ತಿತ್ಯಾದಿ ಜೀವಿಗಳಿಗೆ ನೆಚ್ಚಿನ ಆವಾಸಸ್ಥಾನ. ಆನೆಗಳಿಗಂತೂ ನೀರು  ಕಂಡ ಖುಷಿ.
icon

(4 / 6)

ಈ ಎಲೆ ಉದುರುವ ಕಾಡುಗಳೇ ಹೆಚ್ಚಿನ ದೊಡ್ಡ ಸಸ್ತನಿಗಳಾದ ಆನೆ ಹುಲಿ, ಚಿರತೆ, ಕೆನ್ನಾಯಿ , ಕಾಟಿ, ಕಡವೆ, ಜಿಂಕೆ, ಕರಡಿ ಮತ್ತಿತ್ಯಾದಿ ಜೀವಿಗಳಿಗೆ ನೆಚ್ಚಿನ ಆವಾಸಸ್ಥಾನ. ಆನೆಗಳಿಗಂತೂ ನೀರು  ಕಂಡ ಖುಷಿ.(Rathika Ramaswamy)

ಕಾಡೆಮ್ಮೆಗಳೂ ಬಂಡೀಪುರ ಅರಣ್ಯದಲ್ಲಿ ಸಾಕಷ್ಟಿವೆ. ಮಳೆ ಬಿದ್ದರೆ ಅವುಗಳಿಗೂ ಒಂದು ರೀತಿಯ ಸಂತಸದ ಕ್ಷಣ, ಸಮೀಪದಲ್ಲೇ ನೀರು ಸಿಗುವ, ಹಸಿರು ವಾತಾವರಣ ಖುಷಿಯ ಸನ್ನಿವೇಶ ಸೃಷ್ಟಿಸುತ್ತದೆ.
icon

(5 / 6)

ಮಲೆನಾಡು ಕಡೆಯ ನಿತ್ಯಹರಿದ್ವರ್ಣ/ ಮಳೆಕಾಡುಗಳಿಗಿಂತ ಬಂಡೀಪುರದಂತಹ ಅರಣ್ಯದಲ್ಲಿ ಹೆಚ್ಚು ಪ್ರಾಣಿ, ಪಕ್ಷಿಗಳು ಹೆಚ್ಚಾಗಿ ಕಂಡು ಬರುತ್ತವೆ. ನವಿಲುಗಳು ಕೂಡ ಇಲ್ಲಿ ಯಥೇಚ್ಛವಾಗಿವೆ. ಮಳೆ ಕಂಡ ಅವುಗಳ ನರ್ತನದ ಸೊಬಗು ಸವಿಯುವುದೇ ಚಂದ.
icon

(6 / 6)

ಇತರ ಗ್ಯಾಲರಿಗಳು