Bandipur News: ಬಂಡೀಪುರ ಸುತ್ತಲಿನ ಹಾಡಿ ಜನರಿಗೆ ಅರಣ್ಯ ಇಲಾಖೆಯಿಂದ ಉಚಿತ ಆಂಬುಲೆನ್ಸ್: ಎರಡು ವಾಹನ ಸೇವೆಗೆ ಚಾಲನೆ
- ಬಂಡೀಪುರ ಹುಲಿ ಯೋಜನೆ ಪ್ರವಾಸಿಗರ ನೆಚ್ಚಿನ ತಾಣ. ಬಂಡೀಪುರಕ್ಕೆ ಹೊಂದಿಕೊಂಡಂತೆ 53 ಹಾಡಿಗಳಿವೆ. ಇವರ ತುರ್ತು ಆರೋಗ್ಯ ಸೇವೆಗೆ 2 ವಾಹನಗಳನ್ನು ಬಂಡೀಪುರ ಹುಲಿಧಾಮ ಯೋಜನೆಯಿಂದ ನೀಡಲಾಗಿದೆ. ಇದಲ್ಲದೇ ಗಿರಿಜನ ಸುಸ್ಥಿರ ಬದುಕು ರೂಪಿಸಲು ಒಂದು ದಿನದ ಚಟುವಟಿಕೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಸಮುದಾಯದತ್ತ ಅರಣ್ಯ ಇಲಾಖೆ ಕೈಜೋಡಿಸಿರುವ ಮಾರ್ಗವಿದು. ಇಲ್ಲಿದೆ ಚಿತ್ರ ನೋಟ

(1 / 6)
ದೇಶದಲ್ಲಿ ಹೆಚ್ಚು ಹುಲಿ ಹಾಗೂ ಕಾಡಾನೆಗಳನ್ನು ಹೊಂದಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನದ ಸುತ್ತಮುತ್ತ 53 ಹಾಡಿಗಳಿದ್ದು ಅವರ ತುರ್ತು ಬಳಕೆಗೆ ಮೊದಲ ಬಾರಿಗೆ ಆಂಬುಲೆನ್ಸ್ ವಾಹನವನ್ನು ವ್ಯವಸ್ಥೆ ಮಾಡಲಾಗಿದೆ. ಒಂದು ವಾಹನ ಮಂಗಲ ಪ್ರದೇಶದ ಹತ್ತಕ್ಕೂ ಹೆಚ್ಚು ಹಾಡಿಗಳಲ್ಲಿ ಬಳಸಲಾಗುತ್ತದೆ.
(2 / 6)
ಬಂಡೀಪುರದ ಮತ್ತೊಂದು ಬದಿಯಲ್ಲಿಯೂ ಸಾಕಷ್ಟು ಹಾಡಿಗಳಿವೆ. ಅವರುಗಳ ಉಪಯೋಗಕ್ಕೆಂದು ಮದ್ದೂರು ಪ್ರದೇಶದ ಆದಿವಾಸಿ ಮುಖಂಡರಿಗೆ ಆಂಬುಲೆನ್ಸ್ ಅನ್ನು ಹಸ್ತಾಂತರಿಸಲಾಯಿತು.
(3 / 6)
ಬಂಡೀಪುರ ಸುತ್ತಮುತ್ತ ನೆಲೆಸಿರುವ ಗಿರಿಜನ ಕುಟುಂದವರು ಅನಾರೋಗ್ಯಕ್ಕೆ ತುತ್ತಾದರೆ ತುರ್ತಾಗಿ ಅವರು ಬಳಸಲು ಅನುವಾಗುವಂತೆ ಅರಣ್ಯ ಇಲಾಖೆ ಅಂಬುಲೆನ್ಸ್ ನೀಡಿದ್ದು ಇದರ ಸೇವೆ ಕುರಿತು ಬಂಡೀಪುರ ನಿರ್ದೇಶಕ ಡಾ.ರಮೇಶ್ ಕುಮಾರ್ ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರಿಗೆ ವಿವರ ನೀಡಿದರು.
(4 / 6)
ಬಂಡೀಪುರ ಸುತ್ತಮುತ್ತಲಿನ ಜನರಿಗೆ ಹಲವಾರು ತರಬೇತಿ ಚಟುವಟಿಕೆಗಳನ್ನು ರೂಪಿಸುವ ಜತೆಗೆ ಹಿರಿಯರಿಗೆ ಸವಲತ್ತಗಳನ್ನು ಅರಣ್ಯ ಇಲಾಖೆಯಿಂದ ನೀಡಲಾಗಿದೆ. ಹುಲಿ ದಾಳಿಯಿಂದ ಮೃತಪಟ್ಟ ಕೆಲವರ ಕುಟುಂಬಕ್ಕೂ ಪರಿಹಾರವನ್ನೂ ವಿತರಿಸಲಾಯಿತು.
(5 / 6)
ಬಂಡೀಪುರ ಸುತ್ತಮುತ್ತ ನೆಲೆಸಿರುವ ಗಿರಿಜನರ ಕುಟುಂಬದೊಂದಿಗೆ ಒಂದು ದಿನ ಕಳೆದ ನಿರ್ದೇಶಕ ಡಾ.ರಮೇಶ್‌ಕುಮಾರ್ ಹಾಗೂ ಸಿಬ್ಬಂದಿ ಅವರೊಂದಿಗೆ ಊಟ ಸವಿಯುತ್ತಲೇ ಸಲಹೆಗಳನ್ನು ಪಡೆದುಕೊಂಡರು.
ಇತರ ಗ್ಯಾಲರಿಗಳು