Monsoon Tourism: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಾಂಗುಡಿ, ಮಳೆ, ಚಳಿ ವಾತಾವರಣಕ್ಕೆ ಫಿದಾ photos
- Gopala Swamy Betta ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ ವಾರಾಂತ್ಯ ಪ್ರವಾಸಿಗರ ದಂಡಿನಿಂದ ತುಂಬಿ ಹೋಗಿತ್ತು. ಕರ್ನಾಟಕ ಮಾತ್ರವಲ್ಲದೇ ಕೇರಳ, ತಮಿಳುನಾಡಿನಿಂದಲೂ ಪ್ರವಾಸಿಗರು ಆಗಮಿಸಿ ಖುಷಿಪಟ್ಟರು.
- Gopala Swamy Betta ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ ವಾರಾಂತ್ಯ ಪ್ರವಾಸಿಗರ ದಂಡಿನಿಂದ ತುಂಬಿ ಹೋಗಿತ್ತು. ಕರ್ನಾಟಕ ಮಾತ್ರವಲ್ಲದೇ ಕೇರಳ, ತಮಿಳುನಾಡಿನಿಂದಲೂ ಪ್ರವಾಸಿಗರು ಆಗಮಿಸಿ ಖುಷಿಪಟ್ಟರು.
(1 / 7)
ಗುಂಡ್ಲುಪೇಟೆಯಿಂದಲೇ 20 ಕಿ.ಮಿ ದೂರದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಮನೋಹರ ಬೆಟ್ಟಗಳಲ್ಲಿ ಒಂದು. ಇಲ್ಲಿನ ವೇಣುಗೋಪಾಲಸ್ವಾಮಿ ದೇಗುಲ ದರ್ಶನಕ್ಕೆ ಭಕ್ತರು ಆಗಮಿಸುತ್ತಾರೆ.
(2 / 7)
ಪಕ್ಕದಲ್ಲೇ ನೀಲಗಿರಿ ಜೀವವೈವಿಧ್ಯ ತಾಣ. ಇದರೊಂದಿಗೆ ಬೆಸೆದಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಚಾರಣವೇ ಬಲು ಚಂದ.
(3 / 7)
ವಾರಾಂತ್ಯದಲ್ಲಂತೂ ಇಲ್ಲಿಗೆ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿಗೆ ಸಾರಿಗೆ ಬಸ್ ಇಲ್ಲವೇ ಅರಣ್ಯ ಇಲಾಖೆ ಜೀಪಿನಲ್ಲಿ ಹೋಗಬೇಕು.
(4 / 7)
ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿಯೇ ವಾಹನ ನಿಲುಗಡೆ ಮಾಡಿ ಸಾರ್ವಜನಿಕ ಸಾರಿಗೆಯಲ್ಲಿ ಬೆಟ್ಟಕ್ಕೆ ಹೋಗಬೇಕು. ಅದರಲ್ಲೂ ವಾರಾಂತ್ಯ ಬಂದರೆ ಸರದಿ ಸಾಲಿನಲ್ಲಿ ನಿಂತೇ ಬಸ್ ಹತ್ತಬೇಕು.
(5 / 7)
ಈ ಶನಿವಾರ ಹಾಗೂ ಭಾನುವಾರವೂ ಪ್ರವಾಸಿಗರಿಂದ ಬೆಟ್ಟ ತುಂಬಿ ಹೋಗಿತ್ತು. ಚಳಿಯ ವಾತಾವರಣದ ಜತೆಗೆ ಮಳೆಯ ಸಿಂಚನಕ್ಕೂ ಪ್ರವಾಸಿಗರು ಫಿದಾ ಆದರು.
(6 / 7)
ಗಂಟೆಗಟ್ಟಲೇ ಸರದಿಯಲ್ಲಿ ಕಾದು ಬಸ್ ಏರಿ ಬಂದು ಬೆಟ್ಟದ ಮೇಲೆ ನಿಂತಾಗ ಆ ಆಯಾಸವೆಲ್ಲವೂ ಮಾಯ. ದೇಹ ಹಾಗೂ ಮನಸಿಗೆ ಆಗುವ ಆ ಸಂತಸದ ಕ್ಷಣಕ್ಕೆ ಪಾರವೇ ಇಲ್ಲ. ಕುಟುಂಬಗಳು ಹೀಗೆ ಆಗಮಿಸಿ ಇಲ್ಲಿ ಖುಷಿಯ ಕ್ಷಣ ಕಳೆದು ಹೋಗುವುದುಂಟು.
ಇತರ ಗ್ಯಾಲರಿಗಳು