ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bandipur: ಬಂಡೀಪುರ ಅರಣ್ಯದಂಚಿನಲ್ಲಿ ಸೆರೆ ಸಿಕ್ಕ ಪುಂಡಾನೆ, ಹೇಗಿದೆ ನೋಡಿ Photos

Bandipur: ಬಂಡೀಪುರ ಅರಣ್ಯದಂಚಿನಲ್ಲಿ ಸೆರೆ ಸಿಕ್ಕ ಪುಂಡಾನೆ, ಹೇಗಿದೆ ನೋಡಿ photos

ಅರಣ್ಯದಿಂದ ಹೊರಗೆ ಬಂದು ಉಪಟಳ ನೀಡುವ ಕಾಡಾನೆ ಸೆರೆ ಕಾರ್ಯಾಚರಣೆ ಬಂಡೀಪುರ ಸಮೀಪದಲ್ಲಿ ನಡೆಯಿತು. ಕರ್ನಾಟಕ, ಕೇರಳ, ತಮಿಳುನಾಡು ಗಡಿ ಭಾಗವಾದ ಇಲ್ಲಿನ ಜನರಿಗೆ ಸಲಗ ತೊಂದರೆ ನೀಡುತ್ತಿತ್ತು. ಆನೆ ಸೆರೆ ಕಾರ್ಯಾಚರಣೆ ಹೀಗಿತ್ತು.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಭಾಗದಲ್ಲಿ ತೊಂದರೆ ಕೊಡುತ್ತಿದ್ದ ಭಾರೀ ಗಾತ್ರದ ಸಲಗವನ್ನು ಸೆರೆ ಹಿಡಿಯಲಾಗಿದೆ.
icon

(1 / 7)

ಬಂಡೀಪುರ ರಾಷ್ಟ್ರೀಯ ಉದ್ಯಾನದಿಂದ ಹೊರ ಬಂದು ಜಮೀನುಗಳಿಗೆ ನುಗ್ಗುವುದು ತೋಟಗಳ ಮೇಲೆ ದಾಳಿ ಮಾಡುತ್ತಿದ್ದ ಆನೆ ಸೆರೆಗೆ ಅರಣ್ಯ ಸಚಿವರಿಗೆ ಮನವಿ ಮಾಡಲಾಗಿತ್ತು.
icon

(2 / 7)

ಈ ಪುಂಡಾನೆ ಸೆರೆಗೆ ಒಂದು ತಿಂಗಳಿನಿಂದಲೂ ಅರಣ್ಯ ನಿರಂತರ ಪ್ರಯತ್ನ ಮಾಡುತ್ತಲೇ ಇತ್ತು. ಆದರೆ ತಪ್ಪಿಸಿಕೊಳ್ಳುತ್ತಿತ್ತು.
icon

(3 / 7)

ಮಂಗಳವಾರವೂ ಆನೆ ಉಪಟಳ ನೀಡಿದ್ದ ಮಾಹಿತಿ ಆಧರಿಸಿ ಬುಧವಾರ ಬೆಳಿಗ್ಗೆಯಿಂದಲೇ ಬಂಡೀಪುರದ ಗೋಪಾಲಸ್ವಾಮಿ ಬೆಟ್ಟ ವಲಯ ಸೇರಿ ಇತರೆ ವಲಯದ ಅಧಿಕಾರಿಗಳು, ಸಿಬ್ಬಂದಿ ಆನೆ ಸೆರೆ ಕಾರ್ಯಾಚರಣೆ ಶುರು ಮಾಡಿದ್ದರು.
icon

(4 / 7)

ಗಣೇಶ, ಪಾರ್ಥ ಸಾಕಾನೆಗಳ ನೆರವು ಪಡೆದು ಕೊನೆಗೂ ಸಲಗವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು ಅರಣ್ಯ ಸಿಬ್ಬಂದಿ
icon

(5 / 7)

ಭಾರೀ ಗಾತ್ರದ ಪುಂಡಾನೆಯನ್ನು ಸೆರೆ ಹಿಡಿದ ನಂತರ ಕ್ರೇನ್‌ ಬಳಸಿ ಅದನ್ನು ಲಾರಿಗೆ ಹತ್ತಿಸಲಾಯಿತು. 
icon

(6 / 7)

ಸುಮಾರು ನಲವತ್ತು ವರ್ಷದ ಸಲಗ ಕೊನೆಗೂ ಲಾರಿಯನ್ನು ಹತ್ತಿತು. ಸಂಜೆ ಹೊತ್ತಿಗೆ ಇದನ್ನು ಬಂಡೀಪುರದ ಅರಣ್ಯ ಪ್ರದೇಶದಲ್ಲಿಯೇ ಬಂಧಮುಕ್ತಗೊಳಿಸಲಾಯಿತು ಎಂದು ಬಂಡೀಪುರ ಉಪ ಸಂರಕ್ಷಣಾಧಿಕಾರಿ ಪ್ರಭಾಕರನ್‌ ಮಾಹಿತಿ ನೀಡಿದ್ದಾರೆ
icon

(7 / 7)

IPL_Entry_Point

ಇತರ ಗ್ಯಾಲರಿಗಳು