ಕನ್ನಡ ಸುದ್ದಿ  /  Photo Gallery  /  Chamarajanagara News Male Mahadeshwar Became Owner Of 3 Crores In Six Days Here Is Glorious Photos Of Madappas Fair Rgs

Chamarajanagara News: ಆರು ದಿನಗಳಲ್ಲಿ 3 ಕೋಟಿ ಒಡೆಯನಾದ ಮಲೆ‌ ಮಹದೇಶ್ವರ; ಇಲ್ಲಿವೆ ಮಾದಪ್ಪನ ಜಾತ್ರೆಯ ವೈಭವದ ಫೋಟೊಗಳು

  • ಮಹಾಶಿವರಾತ್ರಿ ಪ್ರಯುಕ್ತ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ 5 ದಿನಗಳ ಕಾಲ ರಥೋತ್ಸವ ಕಾರ್ಯಕ್ರಮ ನಡೆಯಿತು. ಈ ವರ್ಷ ಲಕ್ಷಾಂತರ ಮಂದಿ ಜಾತ್ರೆಯಲ್ಲಿ ಭಾಗವಹಿಸಿದ್ದು, ಮಾದಪ್ಪನ ಆದಾಯದಲ್ಲಿ ಗಣನೀಯ ಏರಿಕೆಯಾಗಿದೆ. ಕೆಲವ 6 ದಿನಗಳಲ್ಲಿ 3 ಕೋಟಿ ಒಡೆಯನಾಗಿದ್ದಾನೆ ಮಾದೇಶ್ವರ. (ಫೋಟೊ ಸುದ್ದಿ: ರಂಗಸ್ವಾಮಿ.ಪಿ, ಮೈಸೂರು)

ಮಹಾ ಶಿವರಾತ್ರಿ ಪ್ರಯುಕ್ತ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪುರಾಣ ಪ್ರಸಿದ್ದ ತಾಣ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ, ಮಾದಪ್ಪನ ಆದಾಯದಲ್ಲಿ ಗಣನೀಯ ಏರಿಕೆಯಾಗಿದೆ.
icon

(1 / 7)

ಮಲೆ ಮಹದೇಶ್ವರ ಬೆಟ್ಟದಲ್ಲಿ ಆರು ದಿನಗಳ ಕಾಲ ನಡೆದ ಶಿವರಾತ್ರಿಯ ಜಾತ್ರಾ ಮಹೋತ್ಸವದಲ್ಲಿ ವಿವಿಧ ಮೂಲಗಳಿಂದ ಕೋಟ್ಯಾಂತರ ರೂಪಾಯಿ ಆದಾಯ ಹರಿದು ಬಂದಿದೆ. 
icon

(2 / 7)

ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಕೇವಲ 6 ದಿನಗಳಲ್ಲಿ 3.24  ಕೋಟಿಗೂ ಅಧಿಕ ಆದಾಯ ಸಂದಾಯವಾಗಿದೆ. ಚಿನ್ನದ ರಥ, ಬೆಳ್ಳಿರಥ, ಹುಲಿವಾಹನ ಸೇವೆ, ಮುಡಿ ಸೇವೆ ಸೇರಿದಂತೆ ವಿವಿಧ ಸೇವೆಗಳಿಂದ ಆದಾಯ ಹರಿದು ಬಂದಿದೆ. ಹುಂಡಿ ಹಣ ಹೊರತುಪಡಿಸಿ ಭಕ್ತರ ಸೇವೆಗಳಿಂದಲೇ ಮೂರುಕಾಲು ಕೋಟಿ ನಗದು ಸಂಗ್ರಹವಾಗಿರುವುದು ಈ ಬಾರಿಯ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ವಿಶೇಷವಾಗಿದೆ. 
icon

(3 / 7)

ದಿನದಿಂದ ದಿನಕ್ಕೆ ಆದಾಯದಲ್ಲಿ ಗಣನೀಯ ಏರಿಕೆ ಕಾಣುತ್ತಿರುವ ಮಲೆ ಮಹದೇಶ್ವರ ಸ್ವಾಮಿಯ ಸನ್ನಿಧಿ, ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಮಲೆ ಮಹದೇಶ್ವರ ಬೆಟ್ಟ, ಅತ್ಯಂತ ಹೆಚ್ಚು ಆದಾಯ ಗಳಿಸುತ್ತಿರುವ ರಾಜ್ಯದ ದೇವಾಲಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ಶ್ರೀ ಕ್ಷೇತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 
icon

(4 / 7)

ಅಮಾವಾಸ್ಯೆ, ಮಹಾಶಿವರಾತ್ರಿ, ಯುಗಾದಿ, ದೀಪಾವಳಿ ಹಬ್ಬಗಳಂದು ನಡೆಯುವ ಜಾತ್ರಾ ಮಹೋತ್ಸವದ ಜೊತೆಗೆ ಅಮಾವಾಸ್ಯೆ ಸೇವೆ, ಸೋಮವಾರ, ಶುಕ್ರವಾರದ ದಿನಗಳಂದು ಕೂಡ ಶ್ರಿಮಲೆ‌ ಮಹದೇಶ್ವರ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಶ್ರೀ ಮಲೆ ಮಹದೇಶ್ವರ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಂದ ವಿವಿಧ ಬಗೆಯ ಧಾರ್ಮಿಕ ಸೇವೆ, ದೇಣಿಗೆ, ಕಾಣಿಕೆ, ಹುಂಡಿ ರೂಪದಲ್ಲಿ ಬರುವ ಕೋಟ್ಯಾಂತರ ರೂಪಾಯಿ ನಗದು ರೂಪದಲ್ಲಿ ಹರಿದು ಬರುತ್ತಿದೆ. 
icon

(5 / 7)

ಮಲೆ ಮಹದೇಶ್ವರ ಬೆಟ್ಟಕ್ಕೆ ವಾರ್ಷಿಕವಾಗಿ ಸುಮಾರು 75 ರಿಂದ 100 ಕೋಟಿ ಆದಾಯ ಹರಿದು ಬರುತ್ತಿದೆ. ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶ್ರೀ ಕ್ಷೇತ್ರದ ನಿರ್ವಹಣೆ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳದ ಜೊತೆಗೆ ಆದಾಯದಲ್ಲೂ ಗಣನೀಯ ಏರಿಕೆಯಾಗುತ್ತಿರುವುದು ವಿಶೇಷವಾಗಿದೆ.
icon

(6 / 7)

ರಾಜ್ಯ, ದೇಶ, ವಿದೇಶಗಳ ಕ್ಷಣ ಕ್ಷಣದ ಮಾಹಿತಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ವೆಬ್‌ಸೈಟ್‌ ನೋಡಿ 
icon

(7 / 7)

ರಾಜ್ಯ, ದೇಶ, ವಿದೇಶಗಳ ಕ್ಷಣ ಕ್ಷಣದ ಮಾಹಿತಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ವೆಬ್‌ಸೈಟ್‌ ನೋಡಿ 

IPL_Entry_Point

ಇತರ ಗ್ಯಾಲರಿಗಳು