Siddaramaiah temple run:ಸಿಎಂ ಸಿದ್ದರಾಮಯ್ಯ ಭಕ್ತಿಭಾವ: ಮಲೈಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯದೊಂದಿಗೆ ವಿಶೇಷ ಪೂಜೆ
- ನಾನು ದೇವಸ್ಥಾನಕ್ಕೆ ಹೋಗೋಲ್ಲ ಎನ್ನೋಲ್ಲ. ಎಲ್ಲರಂತೆಯೇ ಪೂಜೆ ಸಲ್ಲಿಸುವೆ ಎಂದು ಹೇಳುವ ಸಿಎಂ ಸಿದ್ದರಾಮಯ್ಯ ಬುಧವಾರ ಚಾಮರಾಜನಗರ ಜಿಲ್ಲೆಯ ಯಾತ್ರಾಸ್ಥಳ ಮಲೈಮಹದೇಶ್ವರ ಬೆಟ್ಟದಲ್ಲಿ ವಾಸ್ತವ್ಯ ಹೂಡಿ ಪೂಜೆ ಸಲ್ಲಿಸಿದರು. ಬೆಳ್ಳಿ ರಥೋತ್ಸವದಲ್ಲೂ ಭಾಗಿಯಾದರು. ಮಂಗಳವಾರವೂ ಮೈಸೂರಿನ ಉತ್ತನಹಳ್ಳಿಯಲ್ಲಿ ಪೂಜೆ ಸಲ್ಲಿಸಿದ್ದರು. ಹೀಗಿತ್ತು ಸಿದ್ದರಾಮಯ್ಯ ಪೂಜಾ ದಿನಚರಿ.

(1 / 7)
ಚಾಮರಾಜನಗರ ಜಿಲ್ಲೆಯ ಮಲೈಮಹದೇಶ್ವರ ಬೆಟ್ಟದ ದೇಗುಲಕ್ಕೆ ಅಪ್ಪಟ ಭಕ್ತರಂತೆ ಸಚಿವ ಮಹದೇವಪ್ಪ ಅವರೊಂದಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ
(2 / 7)
ಮಲೈಮಹದೇಶ್ವರ ಬೆಟ್ಟದ ಮಹದೇಶ್ವರ ದೇಗುಲಕ್ಕೆ ಆಗಮಿಸಿದಾಗ ಸಿಎಂ ಸಿದ್ದರಾಮಯ್ಯ ಅವರನ್ನು ದೇಗುಲು ಅರ್ಚಕರು ಸ್ವಾಗತಿಸಿದರು. ಆಗ ನಾಡಿಗೆ ಉತ್ತಮ ಮಳೆಯಾಗಲಿ ಎಂದು ಸಿಎಂ ಪೂಜೆ ಸಲ್ಲಿಸಿದರು.
(3 / 7)
ಮಲೈಮಹದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಆರತಿಯನ್ನು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ಭಕ್ತಿ ಭಾವ ಮೆರೆದರು.
(4 / 7)
ಬೆಳ್ಳಿ ರಥಾರೂಢರಾಗಿ ಮಹದೇಶ್ವರ ಮೂರ್ತಿಯೊಂದಿಗೆ ಮೆರವಣಿಗೆಯಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ, ಸಚಿವರಾದ ವೆಂಕಟೇಶ್, ಡಾ.ಮಹದೇವಪ್ಪ ಮತ್ತಿತರರು ಪೂಜೆಯಲ್ಲಿ ಭಾಗಿಯಾದರು.
(5 / 7)
ಮಲೈಮಹದೇಶ್ವರ ಬೆಟ್ಟದ ಮಹದೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಬೆಳ್ಳಿ ರಥೋತ್ಸವದೊಂದಿಗೆ ಮೆರವಣಿಗೆ ಹೊರಟ ಸಿದ್ದರಾಮಯ್ಯ ಅವರ ಭಕ್ತಿ ಭಾವ ಹೀಗಿತ್ತು.
(6 / 7)
ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬೆಳ್ಳಿ ರಥೋತ್ಸವದಲ್ಲಿ ಪಾಲ್ಗೊಂಡ ಸಿಎಂ ಆರತಿ ಸ್ವೀಕರಿಸಿದರು.
ಇತರ ಗ್ಯಾಲರಿಗಳು