ಎಲ್ಲೆಡೆ ಇಂದು ಚಂಪಾ ಷಷ್ಠಿ ಆಚರಣೆ; ಮೈಸೂರಿನ ಸಿದ್ದಲಿಂಗಪುರ ಗ್ರಾಮದಲ್ಲಿರುವ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ
- ನಾಡಿನೆಲ್ಲೆಡೆ ಇಂದು ಶ್ರದ್ದಾ ಭಕ್ತಿಗಳ ನಡುವೆ ಚಂಪಾ ಷಷ್ಠಿ ಆಚರಣೆ: ಮೈಸೂರಿನ ಹೊರ ವಲಯದ ಸಿದ್ದಲಿಂಗಪುರ ಗ್ರಾಮದಲ್ಲಿರುವ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿತು.
- ನಾಡಿನೆಲ್ಲೆಡೆ ಇಂದು ಶ್ರದ್ದಾ ಭಕ್ತಿಗಳ ನಡುವೆ ಚಂಪಾ ಷಷ್ಠಿ ಆಚರಣೆ: ಮೈಸೂರಿನ ಹೊರ ವಲಯದ ಸಿದ್ದಲಿಂಗಪುರ ಗ್ರಾಮದಲ್ಲಿರುವ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿತು.
(1 / 10)
ಮೈಸೂರು-ಬೆಂಗಳೂರು ಮುಖ್ಯ ರಸ್ತೆಯ ಸಿದ್ದಲಿಂಗಪುರ ಗ್ರಾಮದ ಬಳಿಯಿರುವ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿಯ ದೇಗುಲ. ಸುಮಾರು 250. ವರ್ಷಗಳ ಇತಿಹಾಸ ಹೊಂದಿರುವ ದೇಗುಲ.
(2 / 10)
ಚಂಪಾ ಷಷ್ಠಿ ಅಂಗವಾಗಿ ಇಂದು ಮೂಲ ದೇವರಿಗೆ ಬೆಳ್ಳಿಯ ನಾಗಾಭರಣ ಧಾರಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಸುಬ್ರಹ್ಮಣ್ಯಸ್ವಾಮಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಸೇರಿದಂತೆ ವಿವಿಧ ಬಗೆಯ ಅಭಿಷೇಕಗಳನ್ನು ಮಾಡಿ ಪೂಜೆ ಮಾಡಿದ್ದಾರೆ.
(3 / 10)
ದೇಗುಲದ ಗರ್ಭಗುಡಿಯಲ್ಲಿರುವ ಮೂಲ ದೇವರು ಹುತ್ತಕ್ಕೆ ವಿಶೇಷ ಅಲಂಕಾರ ಮಾಡಿ ಬೆಳ್ಳಿಯ ನಾಗಾಭರಣ ಧಾರಣೆ ಮಾಡಲಾಗಿದೆ. ಅಂದಿನ ಆಳರಸ ಜಯಚಾಮರಾಜೇಂದ್ರ ಒಡೆಯರ್ ಅವರು ಉಡುಗೊರೆಯಾಗಿ ನೀಡಿರುವ ಬೆಳ್ಳಿಯ ನಾಗಾಭರಣ ಇದಾಗಿದೆ.
(4 / 10)
ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅನಾರೋಗ್ಯ ಪೀಡಿತರಾದಾಗ ಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ಹರಕೆ ಮಾಡಿಕೊಂಡಿದ್ದ ಜಯಚಾಮರಾಜೇಂದ್ರ ಒಡೆಯರ್ ಈ ಆಭರಣವನ್ನು ಹರಕೆ ರೂಪದಲ್ಲಿ ನೀಡಿದ್ದಾರೆ.
(5 / 10)
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಗುಣಮುಖವಾದ ಬಳಿಕ ಬೆಳ್ಳಿಯ ನಾಗಾಭರಣವನ್ನು ನೀಡಿ ಹರಕೆ ತೀರಿಸಿದ್ದ ಜಯಚಾಮರಾಜೇಂದ್ರ ಒಡೆಯರ್. ಪ್ರತಿ ವರ್ಷವೂ ಷಷ್ಠಿಯ ದಿನ ಮಾತ್ರ ಮೂಲದೇವರಿಗೆ ಇದೇ ಬೆಳ್ಳಿಯ ನಾಗಾಭರಣವನ್ನು ಧಾರಣೆ ಮಾಡಿ ಪೂಜೆ ಸಲ್ಲಿಸುವುದು ವಾಡಿಕೆ ಇದೆ.
(6 / 10)
ಮೊದಲೆರಡು ವರ್ಷ ಕೊರೊನಾ ಹಿನ್ನೆಲೆಯಲ್ಲಿ ಮೂಲ ದೇವರ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಕಳೆದೆರಡು ವರ್ಷಗಳಿಂದ ದೇಗುಲದ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮೂಲ ದೇವರ ದರ್ಶನ ಪಡೆಯಲು ಭಕ್ತರಿಗೆ ಸಾಧ್ಯವಾಗಿರಲಿಲ್ಲ.
(7 / 10)
ನಾಲ್ಕು ವರ್ಷಗಳ ಬಳಿಕ ಇಂದು ಮೂಲ ದೇವರ ದರ್ಶನ ಪಡೆಯಲು ಲಕ್ಷಾಂತರ ಮಂದಿ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರು. ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಭಕ್ತರು ಪುನೀತರಾದರು.
(8 / 10)
ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು. ಎಲ್ಲಿಯೂ ನೂಕುನುಗ್ಗಲು ಉಂಟಾಗದಂತೆ ಮುನ್ನೆಚ್ಚರಿಕೆ, ಬಿಗಿಯಾದ ಪೊಲೀಸ್ ಬಂದೋಬಸ್ತ್ ಮಾಡಿದ್ದರು.
(9 / 10)
ಇದೇ ವೇಳೆ ದೇಗುಲದ ಆಸುಪಾಸಿನಲ್ಲಿರುವ ಹುತ್ತಗಳಿಗೆ ಹಾಲೆರೆದು ಪೂಜೆ ಸಲ್ಲಿಸಿದ ಆಸ್ತಿಕರು. ಈ ಕುರಿತು ಸುಬ್ರಹ್ಮಣ್ಯೇಶ್ವರಸ್ವಾಮಿ ದೇಗುಲದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.
ಇತರ ಗ್ಯಾಲರಿಗಳು