Chanakya Neeti: ವ್ಯಕ್ತಿಯ ಈ ವರ್ತನೆಗಳಿಂದಲೇ ಬಡತನ ಕಾಡುತ್ತದೆ, ಗೌರವ ಕಡಿಮೆಯಾಗುತ್ತದೆ; ಚಾಣಕ್ಯ ನೀತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Chanakya Neeti: ವ್ಯಕ್ತಿಯ ಈ ವರ್ತನೆಗಳಿಂದಲೇ ಬಡತನ ಕಾಡುತ್ತದೆ, ಗೌರವ ಕಡಿಮೆಯಾಗುತ್ತದೆ; ಚಾಣಕ್ಯ ನೀತಿ

Chanakya Neeti: ವ್ಯಕ್ತಿಯ ಈ ವರ್ತನೆಗಳಿಂದಲೇ ಬಡತನ ಕಾಡುತ್ತದೆ, ಗೌರವ ಕಡಿಮೆಯಾಗುತ್ತದೆ; ಚಾಣಕ್ಯ ನೀತಿ

Chanakya Neeti: ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಜನಿಸಿದ ಎಷ್ಟೋ ಜನರು ಕ್ರಮೇಣ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಬಡವರಾಗಿ ಹುಟ್ಟಿದ ಅನೇಕರು ಭವಿಷ್ಯದಲ್ಲಿ ಶ್ರೀಮಂತಿಕೆ ಗಳಿಸುತ್ತಾರೆ. ಇದೆಲ್ಲದಕ್ಕೂ ವ್ಯಕ್ತಿಯ ವರ್ತನೆಯೇ ಪ್ರಮುಖ ಕಾರಣ ಎನ್ನುತ್ತಾರೆ ಆಚಾರ್ಯ ಚಾಣಕ್ಯ. 

ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯರ ನೀತಿಗಳನ್ನು ಇಂದಿಗೂ ಅನುಸರಿಸಲಾಗುತ್ತಿದೆ. ಅವರ ತತ್ವಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಇದಲ್ಲದೆ, ಈ ನೀತಿಗಳು ವ್ಯಕ್ತಿಗೆ ವೈಯಕ್ತಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸಮಗ್ರ ಮಾರ್ಗದರ್ಶನವನ್ನು ನೀಡುತ್ತವೆ. ಈ ನೀತಿ ಶಾಸ್ತ್ರದಲ್ಲಿ, ಜೀವನ ನಡವಳಿಕೆಯ ಜೊತೆಗೆ, ಮನುಷ್ಯನ ಆ ಅಭ್ಯಾಸಗಳ ಉಲ್ಲೇಖಿಸಲಾಗಿದೆ. ವಾಸ್ತವವಾಗಿ, ಒಬ್ಬ ವ್ಯಕ್ತಿಯ ತನ್ನ ಅಭ್ಯಾಸಗಳಿಂದಾಗಿಯೇ ಜೀವನದಲ್ಲಿ ಸೋಲು ಕಾಣುತ್ತಾನೆ. ಎಲ್ಲವನ್ನೂ ಕಳೆದುಕೊಂಡು ಬಡತನದಲ್ಲಿ ಬದುಕುತ್ತಾನೆ. ಸಮಾಜದಲ್ಲಿ ಬೆಲೆ ಕಳೆದುಕೊಳ್ಳುತ್ತಾನೆ.  
icon

(1 / 6)

ಆಚಾರ್ಯ ಚಾಣಕ್ಯರ ಪ್ರಕಾರ, ಶುಚಿತ್ವ ಇಲ್ಲದೆ ಬದುಕುವ ಅಭ್ಯಾಸವು ವ್ಯಕ್ತಿಯ ವಿನಾಶಕ್ಕೆ ಕಾರಣವಾಗುತ್ತದೆ. ತನ್ನ ಸುತ್ತಲೂ ಕೊಳಕನ್ನು ಇಟ್ಟುಕೊಳ್ಳುವುದು ವ್ಯಕ್ತಿಯ ಜೀವನದಲ್ಲಿ ನಕಾರಾತ್ಮಕತೆಯ ಮಟ್ಟವನ್ನು ಹೆಚ್ಚಿಸುತ್ತದೆ. ಅಂತಹ ಜನರು ಯಾವಾಗಲೂ ಬಡವರಾಗಿರುತ್ತಾರೆ. ಆದ್ದರಿಂದ, ನಿಮ್ಮ ಮನೆಯ ಸುತ್ತ ಮುತ್ತಲೂ ಸದಾ ಶುಭ್ರವಾಗಿಟ್ಟುಕೊಳ್ಳಿ. ಶುಚಿ ಇಲ್ಲದ ಕಡೆ ಲಕ್ಷ್ಮಿಯೂ ಇರಲು ಇಷ್ಟಪಡುವುದಿಲ್ಲ.  
icon

(2 / 6)

ಸಾಮಾನ್ಯವಾಗಿ ಕೆಲವರು ಯೋಚಿಸದೆ ಹಣವನ್ನು ಖರ್ಚು ಮಾಡುತ್ತಾರೆ. ವ್ಯಕ್ತಿಯ ಈ ಅಭ್ಯಾಸಗಳು ಅವನಿಗೆ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಅಂತಹ ಜನರು ಭವಿಷ್ಯಕ್ಕಾಗಿ ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಹಣವನ್ನು ಖರ್ಚು ಮಾಡುವ ಮುನ್ನ ನೂರು ಬಾರಿ ಯೋಚಿಸಿ.  
icon

(3 / 6)

ಮನುಷ್ಯನ ದೊಡ್ಡ ಶತ್ರು ಸೋಮಾರಿತನ. ಸೋಮಾರಿತನದಿಂದಾಗಿ, ವ್ಯಕ್ತಿಯು ಅವಕಾಶಗಳನ್ನು ಕಳೆದುಕೊಳ್ಳುತ್ತಾನೆ. ಅಲ್ಲದೆ, ಅವರ ಸೋಮಾರಿ ಸ್ವಭಾವದಿಂದಾಗಿ ವೈಫಲ್ಯಗಳನ್ನು ಎದುರಿಸುತ್ತಾರೆ. ಅಂತಹ ಜನರು ಆರ್ಥಿಕ ಬಿಕ್ಕಟ್ಟನ್ನೂ ಎದುರಿಸುತ್ತಲೇ ಇರುತ್ತಾರೆ.
icon

(4 / 6)

ಆಚಾರ್ಯ ಚಾಣಕ್ಯರು ಮನುಷ್ಯನ ಕಟುವಾದ ಮಾತೇ ಅವನ ದೊಡ್ಡ ಶತ್ರು ಎನ್ನುತ್ತಾರೆ.  ಒಬ್ಬ ವ್ಯಕ್ತಿಯು ಯಾರ ಜೊತೆಯೂ ಕಟುವಾಗಿ ಮಾತನಾಡಬಾರದು ಎಲ್ಲರೊಂದಿಗೆ ಪ್ರೀತಿಯಿಂದ ಇರಬೇಕು. ಇಲ್ಲದಿದ್ದರೆ ಅವನ ಗೌರವ ಕ್ಷೀಣಿಸುತ್ತದೆ. ಅಂತಹ ವ್ಯಕ್ತಿಯು ಯಾವಾಗಲೂ ಒಬ್ಬಂಟಿಯಾಗಿರುತ್ತಾನೆ. ಎಂದಿಗೂ ಯಶಸ್ಸು ಸಾಧಿಸುವುದಿಲ್ಲ ಎಂದಿದ್ದಾರೆ. 
icon

(5 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(6 / 6)

ಇತರ ಗ್ಯಾಲರಿಗಳು