Chanakya Niti: ಚಾಣಕ್ಯರ ನೀತಿಶಾಸ್ತ್ರದಿಂದ ಪ್ರತಿಯೊಬ್ಬರೂ ಕಲಿಯಲೇಬೇಕಾದ ಜೀವನ ಬದಲಿಸುವ 7 ಪಾಠಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Chanakya Niti: ಚಾಣಕ್ಯರ ನೀತಿಶಾಸ್ತ್ರದಿಂದ ಪ್ರತಿಯೊಬ್ಬರೂ ಕಲಿಯಲೇಬೇಕಾದ ಜೀವನ ಬದಲಿಸುವ 7 ಪಾಠಗಳಿವು

Chanakya Niti: ಚಾಣಕ್ಯರ ನೀತಿಶಾಸ್ತ್ರದಿಂದ ಪ್ರತಿಯೊಬ್ಬರೂ ಕಲಿಯಲೇಬೇಕಾದ ಜೀವನ ಬದಲಿಸುವ 7 ಪಾಠಗಳಿವು

  • ಆಚಾರ್ಯ ಚಾಣಕ್ಯರನ್ನು ಬದುಕು ಬದಲಿಸುವ ಗುರು ಎನ್ನಬಹುದು. ಇವರ ನೀತಿಪಾಠಗಳು ಇಂದಿಗೂ ಜನರ ಬದುಕಿಗೆ ವರವಾಗಿದೆ. ಈಗಲೂ ಹಲವರು ಇವರ ನೀತಿಗಳನ್ನು ಅನುಸರಿಸುವ ಮೂಲಕ ಬದುಕಿನಲ್ಲಿ ಯಶಸ್ಸಿನ ಹಾದಿ ಹಿಡಿಯುತ್ತಿದ್ದಾರೆ. ಚಾಣಕ್ಯರ ನೀತಿಶಾಸ್ತ್ರದಿಂದ ಕಲಿಯಲೇಬೇಕಾದ 7 ಪಾಠಗಳಿವು. ಇವು ನಮ್ಮ ಜೀವನ ಬದಲಿಸುವುದು ಖಂಡಿತ. 

ಶಿಕ್ಷಣವೇ ನಿಮ್ಮ ಅತ್ಯುತ್ತಮ ಸ್ನೇಹಿತ: ವಿದ್ಯಾವಂತ ವ್ಯಕ್ತಿಗೆ ಎಲ್ಲಿ ಹೋದರೂ ಬೆಲೆ ಇರುತ್ತದೆ. ಚಾಣಕ್ಯರ ಪ್ರಕಾರ ಶಿಕ್ಷಿತರನ್ನು ಎಲ್ಲಿ ಹೋದರು ಗೌರವಿಸುತ್ತಾರೆ. ಅವರ ಬುದ್ಧಿವಂತಿಕೆಯನ್ನು ಪ್ರಶಂಸಿಸುತ್ತಾರೆ. ಆ ಕಾರಣಕ್ಕೆ ಮನುಷ್ಯನಿಗೆ ಶಿಕ್ಷಣ ಬಹಳ ಮುಖ್ಯ. 
icon

(1 / 7)

ಇತರರ ತಪ್ಪುಗಳಿಂದ ಕಲಿಯುವುದು: ವ್ಯಕ್ತಿಗಳು ಇತರರನ್ನು, ಸಮಾಜವನ್ನು, ನಮ್ಮ ಸುತ್ತಲೂ ನಡೆಯುತ್ತಿರುವ ಘಟನೆಗಳನ್ನು ಗಮನಿಸುತ್ತಲೇ ಇರಬೇಕು. ಅವುಗಳಿಂದ ಮಾಹಿತಿಯನ್ನು ಪಡೆಯಬೇಕು. ಇತರರ ತಪ್ಪುಗಳನ್ನು ನೋಡಿ ನಾವು ಪಾಠ ಕಲಿಯಬೇಕು. ತಪ್ಪುಗಳಿಂದ ಕಲಿತ ಪಾಠದ ಪರಿಣಾಮ ಜಾಸ್ತಿ. ಇದು ಮನುಷ್ಯ ಬದುಕನ್ನು ಬೇರಯದೇ ಎತ್ತರಕ್ಕೆ ಕೊಂಡ್ಯೊಯುತ್ತದೆ.
icon

(2 / 7)

ಇತರರ ತಪ್ಪುಗಳಿಂದ ಕಲಿಯುವುದು: ವ್ಯಕ್ತಿಗಳು ಇತರರನ್ನು, ಸಮಾಜವನ್ನು, ನಮ್ಮ ಸುತ್ತಲೂ ನಡೆಯುತ್ತಿರುವ ಘಟನೆಗಳನ್ನು ಗಮನಿಸುತ್ತಲೇ ಇರಬೇಕು. ಅವುಗಳಿಂದ ಮಾಹಿತಿಯನ್ನು ಪಡೆಯಬೇಕು. ಇತರರ ತಪ್ಪುಗಳನ್ನು ನೋಡಿ ನಾವು ಪಾಠ ಕಲಿಯಬೇಕು. ತಪ್ಪುಗಳಿಂದ ಕಲಿತ ಪಾಠದ ಪರಿಣಾಮ ಜಾಸ್ತಿ. ಇದು ಮನುಷ್ಯ ಬದುಕನ್ನು ಬೇರಯದೇ ಎತ್ತರಕ್ಕೆ ಕೊಂಡ್ಯೊಯುತ್ತದೆ.(Freepik)

ವಿನಮ್ರರಾಗಿರುವುದು: ಜೀವನದಲ್ಲಿ ನಾವು ಕಲಿಯಬೇಕಾದ ಅತ್ಯುತ್ತಮ ಪಾಠ ಎಂದರೆ ವಿನ್ರಮರಾಗಿರುವುದನ್ನು ಕಲಿಯುವುದು. ವಿನಮ್ರತೆಯು ನಮ್ಮನ್ನು ಬಹಳ ಎತ್ತರಕ್ಕೆ ಕೊಂಡ್ಯೊಯುತ್ತದೆ. ಮಾನವೀಯತೆಯು ನಮ್ಮ ಮನಸ್ಸನ್ನು ನಿಗ್ರಹಿಸುತ್ತದೆ. ಇದು ನಮ್ಮಲ್ಲಿ ಆತ್ಮವಿಶ್ವಾ ಹೆಚ್ಚಿಸಲು ನೆರವಾಗುತ್ತದೆ.
icon

(3 / 7)

ನಿಮ್ಮೊಳಗಿನ ರಹಸ್ಯವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ:  ನಿಮ್ಮ ಕುರಿತಾದ ಯಾವುದೇ ರಹಸ್ಯವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾಕೆಂದರೆ ಯಾರು ಯಾವಾಗ ತಿರುಗಿ ಬೀಳುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಆ ಕಾರಣಕ್ಕೆ ಚಾಣಕ್ಯರು ನಿಮ್ಮ ಬಲ ಹಾಗೂ ನಿಮ್ಮ ಬಲಹೀನತೆ ಈ ಎರಡರ ಬಗ್ಗೆಯೂ ಯಾರೊಂದಿಗೂ ಚರ್ಚಿಸಬೇಡಿ ಎಂದು ಸಲಹೆ ನೀಡಿದ್ದಾರೆ.
icon

(4 / 7)

ನಿಮ್ಮೊಳಗಿನ ರಹಸ್ಯವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ:  ನಿಮ್ಮ ಕುರಿತಾದ ಯಾವುದೇ ರಹಸ್ಯವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾಕೆಂದರೆ ಯಾರು ಯಾವಾಗ ತಿರುಗಿ ಬೀಳುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಆ ಕಾರಣಕ್ಕೆ ಚಾಣಕ್ಯರು ನಿಮ್ಮ ಬಲ ಹಾಗೂ ನಿಮ್ಮ ಬಲಹೀನತೆ ಈ ಎರಡರ ಬಗ್ಗೆಯೂ ಯಾರೊಂದಿಗೂ ಚರ್ಚಿಸಬೇಡಿ ಎಂದು ಸಲಹೆ ನೀಡಿದ್ದಾರೆ.(Freepik)

ಕಲಿಕೆಯನ್ನು ನಿಲ್ಲಿಸಬೇಡಿ: ಜೀವನದಲ್ಲಿ ಕಲಿಕೆ ಎನ್ನುವುದು ನಿರಂತರವಾಗಿರಬೇಕು. ಕಲಿಕೆಗೆ ಅಂತ್ಯವೆಂಬುದೇ ಇಲ್ಲ. ನಿಮ್ಮ ಕಲಿಕೆಯು ನಿಮ್ಮ ಜೀವನದ ಭಾಗವಾಗಿರಬೇಕು. 
icon

(5 / 7)

ಕಲಿಕೆಯನ್ನು ನಿಲ್ಲಿಸಬೇಡಿ: ಜೀವನದಲ್ಲಿ ಕಲಿಕೆ ಎನ್ನುವುದು ನಿರಂತರವಾಗಿರಬೇಕು. ಕಲಿಕೆಗೆ ಅಂತ್ಯವೆಂಬುದೇ ಇಲ್ಲ. ನಿಮ್ಮ ಕಲಿಕೆಯು ನಿಮ್ಮ ಜೀವನದ ಭಾಗವಾಗಿರಬೇಕು. (Freepik)

ಪ್ರಾಯೋಗಿಕ ಅನುಭವಗಳು ಅವಶ್ಯ: ಜ್ಞಾನ ಎನ್ನುವುದು ಕೇವಲ ವಸ್ತುಗಳು ಹಾಗೂ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿಲ್ಲ. ನಿಜವಾದ ಜ್ಞಾನ ಹಾಗೂ ಬುದ್ಧಿವಂತಿಕೆಯು ಪುಸ್ತಕದಲ್ಲಿ ಅಡಕವಾಗಿಲ್ಲ. ನೀವು ಪ್ರತಿದಿನದ ಕೆಲಸ ಕಾರ್ಯಗಳು, ಸಮಾಜದಿಂದ ಪ್ರಾಯೋಗಿಕ ಪಾಠಗಳನ್ನು ಕಲಿತಾಗಲಷ್ಟೇ ಯಶಸ್ಸು ಗಳಿಸಲು ಸಾಧ್ಯ.
icon

(6 / 7)

ನಿಮ್ಮೊಳಗಿನ ಒಳ್ಳೆಯತನವನ್ನು ಹುಡುಕಿ: ಚಾಣಕ್ಯರು ದೇವರು ವಿಚಾರದಲ್ಲಿ ತಮ್ಮದೇ ಆದ ನಿಲುವು ಹೊಂದಿದ್ದರು, ಅವರ ಪ್ರಕಾರ ದೇವರು ನಮ್ಮೊಳಗೆ ಇದ್ದಾನೆ. ನಮ್ಮೊಳಗಿನ ಒಳ್ಳೆಯತನದಲ್ಲಿ ದೇವರು ಅಡಗಿದ್ದಾನೆ. 
icon

(7 / 7)

ನಿಮ್ಮೊಳಗಿನ ಒಳ್ಳೆಯತನವನ್ನು ಹುಡುಕಿ: ಚಾಣಕ್ಯರು ದೇವರು ವಿಚಾರದಲ್ಲಿ ತಮ್ಮದೇ ಆದ ನಿಲುವು ಹೊಂದಿದ್ದರು, ಅವರ ಪ್ರಕಾರ ದೇವರು ನಮ್ಮೊಳಗೆ ಇದ್ದಾನೆ. ನಮ್ಮೊಳಗಿನ ಒಳ್ಳೆಯತನದಲ್ಲಿ ದೇವರು ಅಡಗಿದ್ದಾನೆ. 

ಇತರ ಗ್ಯಾಲರಿಗಳು