Chandrayaan 3: ಚಂದ್ರಯಾನ 3; ಚಂದ್ರನ ಸನಿಹದಲ್ಲಿ ವಿಕ್ರಮ್ ಲ್ಯಾಂಡರ್; ಫೋಟೋಸ್
ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಉಡಾವಣೆ ಮಾಡಿದ್ದ ಚಂದ್ರಯಾನ 3 ಮಿಷನ್ ತನ್ನ ಪ್ರಮುಖ ಮೈಲಿಗಲ್ಲಿನ ಸಮೀಪಕ್ಕೆ ಬಂದಿದೆ. ವಿಕ್ರಮ್ ಲ್ಯಾಂಡರ್ ಆಗಸ್ಟ್ 23ರ ಬುಧವಾರ ಚಂದ್ರನ ಮೇಲೆ ಇಳಿಯಲು ತಯಾರಿ ನಡೆಸುತ್ತಿದ್ದರೆ, ಇಸ್ರೋ ಅಂತಿಮ ಡಿ-ಬೂಸ್ಟಿಂಗ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
(1 / 5)
ವಿಕರ್ಮ್ ಲ್ಯಾಂಡರ್ ಡಿ-ಬೂಸ್ಟಿಂಗ್‌ನೊಂದಿಗೆ ಕಕ್ಷೆಯನ್ನು ಕಡಿಮೆ ಮಾಡುತ್ತಿದೆ. ಅಂತಿಮ ಡಿ-ಬೂಸ್ಟಿಂಗ್ ನಂತರ ಪ್ರಕ್ರಿಯೆಯ ನಂತರ ಲ್ಯಾಂಡರ್ 25km x 134km ಕಕ್ಷೆಯನ್ನು ಪ್ರವೇಶಿಸಿದೆ. ವಿಕ್ರಮ್ ಲ್ಯಾಂಡರ್ ಇಲ್ಲಿಂದ ಸಾಫ್ಟ್ ಲ್ಯಾಂಡಿಂಗ್ ಪ್ರಯತ್ನ ಮಾಡಲಿದೆ. (PTI)
(2 / 5)
ಲ್ಯಾಂಡಿಂಗ್ ವೇಳೆ ವಿಫಲವಾಗಿದ್ದ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ವಿನ್ಯಾಸವನ್ನೇ ಈ ಬಾರಿಯೂ ಬಳಸಲಾಗಿದೆ ಎಂದು ಭಾರತೀಯ ಬಾಹ್ಯಕಾಶ ಸಂಶೋಧನೆ ಸಂಸ್ಥೆ ಹೇಳಿದೆ. ಆದರೆ ಈ ಬಾರಿ ವಿಫಲವಾಗದ ರೀತಿಯಲ್ಲಿ ಮಿಷನ್ ಅನ್ನು ಸಿದ್ದಪಡಿಸಿರುವುದಾಗಿ ಸ್ಪಷ್ಟಪಡಿಸಿದೆ. (PTI)
(3 / 5)
ಚಂದ್ರಯಾನ್ 3 ಮಿಷನ್ ಯಶಸ್ವಿಯಾದರೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್‌ನಲ್ಲಿ ಭಾರತ ಇತಿಹಾಸ ನಿರ್ಮಿಸಲಾಗಿದೆ. ಅಲ್ಲದೆ, ಈ ಸಾಧನೆ ಮಾಡಿದ ನಾಲ್ಕೇ ದೇಶ ಎಂಬ ದಾಖಲೆಯನ್ನು ಬರೆಯಲಿದೆ. ಅಮೆರಿಕ, ರಷ್ಯಾ ಹಾಗೂ ಚೀನಾ ಈಗಾಗಲೇ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗಿವೆ.(ISRO)
(4 / 5)
ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆದ ನಂತರ ವಿಕ್ರಮ್ ಲ್ಯಾಂಡರ್‌ನಿಂದ ಪ್ರಗ್ಯಾನ್ ರೋವರ್ ಹೊರ ಬರುತ್ತದೆ. ಇದು ಚಂದ್ರನ ಮೇಲ್ಮೈಯಲ್ಲಿ 14 ದಿನಗಳವರೆಗೆ ಇರುತ್ತದೆ. ಮೇಲ್ಮೈ ಉದ್ದಕ್ಕೂ ನೀರಿನ ಕುರುಹಗಳನ್ನು ಪತ್ತೆಹಚ್ಚುವ ಕೆಲಸ ಮಾಡುತ್ತದೆ.( REUTERS)
ಇತರ ಗ್ಯಾಲರಿಗಳು