Nikhil Kumarswamy: ನಿಖಿಲ್ ಕುಮಾರ್ ಸ್ವಾಮಿಗೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಸೋಲು; ನಟನೆಯ ನಂತರ ಅವರ ದಶಕದ ಸಾರ್ವಜನಿಕ ಹಾದಿ ಹೇಗಿದೆ
- Channapatna by-election results 2024: ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿಗೆ ಸತತ ಮೂರನೇ ಚುನಾವಣೆ ಸೋಲು ಆಗಿದೆ. ಅವರು ಜನಿಸಿದ್ದು ಎಲ್ಲಿ, ಅವರ ಹಿನ್ನೆಲೆಯೇನು, ಪತ್ನಿಯಾರು ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.
- Channapatna by-election results 2024: ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿಗೆ ಸತತ ಮೂರನೇ ಚುನಾವಣೆ ಸೋಲು ಆಗಿದೆ. ಅವರು ಜನಿಸಿದ್ದು ಎಲ್ಲಿ, ಅವರ ಹಿನ್ನೆಲೆಯೇನು, ಪತ್ನಿಯಾರು ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.
(1 / 7)
ನಿಖಿಲ್ ಕುಮಾರಸ್ವಾಮಿ ಹಿರಿಯ ರಾಜಕೀಯ ನೇತಾರ ಎಚ್‌ಡಿದೇವೇಗೌಡ ಅವರ ಮೊಮ್ಮಗ. ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್‌ಡಿಕುಮಾರಸ್ವಾಮಿ, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಏಕೈಕ ಪುತ್ರ.
(2 / 7)
ಜನಿಸಿದ್ದು ಬೆಂಗಳೂರಿನಲ್ಲಿ.22 ಜನವರಿ 1988ರಲ್ಲಿ ಜನಿಸಿರುವ ನಿಖಿಲ್‌ಗೆ ಈಗ 36 ವರ್ಷ. ಸಾರ್ವಜನಿಕ ಜೀವನದಲ್ಲಿಯೇ ಹತ್ತು ವರ್ಷ ಕಳೆದಿದ್ದಾರೆ.
(3 / 7)
ನಿಖಿಲ್ ಕುಮಾರಸ್ವಾಮಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು 2014 ರಲ್ಲಿ. ಆಗಕನ್ನಡ-ತೆಲುಗು ದ್ವಿಭಾಷಾ ಚಿತ್ರ ಜಾಗ್ವಾರ್ ಪ್ರಕಟಿಸಿದರು. 2016 ರಲ್ಲಿ ಚಿತ್ರ ಬಿಡುಗಡೆಯಾಯಿತು. ನಂತರ ನಾಲ್ಕು ಚಿತ್ರಗಳು ಬಂದಿವೆ, ಸೀತಾರಾಮ ಕಲ್ಯಾಣ ಗಮನ ಸೆಳೆಯಿತು.
(4 / 7)
ನಿಖಿಲ್ ಮದುವೆಯಾಗಿದ್ದು 17 ಏಪ್ರಿಲ್ 2020ರಂದು ರಾಮನಗರದ ಜನಪದ ಲೋಕದಲ್ಲಿ. ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಎಂ. ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳು ರೇವತಿ ಅವರನ್ನು. ಅವರಿಗೆ ಮೂರು ವರ್ಷ ಅವ್ಯನ್ ದೇವ್ ಎಂಬ ಪುತ್ರ ಇದ್ದಾನೆ.
(5 / 7)
ಐದು ವರ್ಷದ ಹಿಂದೆ ಮಂಡ್ಯದಲ್ಲೂ ಲೋಕಸಭೆ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸಿ ಸುಮಲತಾ ಅಂಬರೀಷ್ ವಿರುದ್ದ ಸೋಲು ಅನುಭವಿಸಿದ್ದರು.
(6 / 7)
ಕಳೆದ ವರ್ಷ ರಾಮನಗರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ಇಕ್ಬಾಲ್ ಹುಸೇನ್ ವಿರುದ್ದ ಸ್ಪರ್ಧಿಸಿ ಎರಡನೇ ಸೋಲು ಕಂಡರು.
ಇತರ ಗ್ಯಾಲರಿಗಳು