Orange Cap: ಐಪಿಎಲ್-2024ರಲ್ಲಿ ಆರೆಂಜ್ ಕ್ಯಾಪ್ ಗೆಲ್ಲಬಲ್ಲ ಟಾಪ್-5 ಬ್ಯಾಟರ್ಸ್ ಇವರೇ ನೋಡಿ
- Orange Cap in IPL 2024: ಮಾರ್ಚ್ 22ರಿಂದ ಆರಂಭವಾಗುವ 17ನೇ ಆವೃತ್ತಿಯ ಐಪಿಎಲ್ನಲ್ಲಿ ಆರೆಂಜ್ ಕ್ಯಾಪ್ ಗೆಲ್ಲಬಲ್ಲ ಟಾಪ್-5 ಬ್ಯಾಟರ್ಸ್ ಯಾರೆಂಬುದನ್ನು ಈ ಮುಂದೆ ನೋಡೋಣ.
- Orange Cap in IPL 2024: ಮಾರ್ಚ್ 22ರಿಂದ ಆರಂಭವಾಗುವ 17ನೇ ಆವೃತ್ತಿಯ ಐಪಿಎಲ್ನಲ್ಲಿ ಆರೆಂಜ್ ಕ್ಯಾಪ್ ಗೆಲ್ಲಬಲ್ಲ ಟಾಪ್-5 ಬ್ಯಾಟರ್ಸ್ ಯಾರೆಂಬುದನ್ನು ಈ ಮುಂದೆ ನೋಡೋಣ.
(1 / 6)
ಮಾರ್ಚ್ 22ರಿಂದ ಐಪಿಎಲ್ ಪ್ರಾರಂಭವಾಗಲಿದೆ. ಅಭಿಮಾನಿಗಳು ರಂಜಿಸಲು ಬ್ಯಾಟರ್ ಮತ್ತು ಬೌಲರ್ಗಳು ಸಿದ್ದರಾಗಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ಗಾಗಿ ಪೈಪೋಟಿ ಏರ್ಪಡಲಿದೆ. ಹಾಗಾದರೆ ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲಬಲ್ಲ ಟಾಪ್-5 ಬ್ಯಾಟರ್ಸ್ ಪಟ್ಟಿಯನ್ನು ಈ ಮುಂದೆ ನೋಡೋಣ.
(2 / 6)
2023ರ ಐಪಿಎಲ್ನಲ್ಲಿ ಶುಭ್ಮನ್ ಗಿಲ್ 17 ಪಂದ್ಯಗಳಲ್ಲಿ ಕಣಕ್ಕಿಳಿದು 59.33ರ ಬ್ಯಾಟಿಂಗ್ ಸರಾಸರಿಯಲ್ಲಿ 890 ರನ್ ಗಳಿಸಿದ್ದಾರೆ, ಅವರ ಈ ಆಟದಲ್ಲಿ 3 ಶತಕ, 4 ಅರ್ಧಶತಕಗಳು ಸೇರಿವೆ. ಈಗ ಐಪಿಎಲ್ 2024ರ ಮೊದಲು ಗಿಲ್ ಉತ್ತಮ ಫಾರ್ಮ್ನಲ್ಲಿದ್ದು, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಹಾಗಾಗಿ 2024ರ ಐಪಿಎಲ್ನಲ್ಲಿ ಗಿಲ್ ರನ್ ಶಿಖರ ಕಟ್ಟುತ್ತಾರೆ ಎಂಬ ನಿರೀಕ್ಷೆ ಇದೆ. ಈ ಬಾರಿ ಅವರು ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಆದ್ದರಿಂದ ಹೆಚ್ಚಿನ ರನ್ ಗಳಿಸುವ ಒತ್ತಡ ಅವರ ಮೇಲಿದೆ.
(3 / 6)
ಆರೆಂಜ್ ಕ್ಯಾಪ್ ರೇಸ್ನಿಂದ ವಿರಾಟ್ ಕೊಹ್ಲಿ ಅವರನ್ನು ಎಂದಿಗೂ ಕೈಬಿಡಲು ಸಾಧ್ಯವಿಲ್ಲ. 2010ರಿಂದ ಇತೀಚೆಗೆ ಎಲ್ಲಾ ಐಪಿಎಲ್ ಋತುಗಳಲ್ಲಿ 300ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಕಳೆದ ಋತುವಿನಲ್ಲಿ 52.25 ಸರಾಸರಿಯಲ್ಲಿ 639 ರನ್ ಗಳಿಸಿದ್ದರು. ಕೊಹ್ಲಿ 2016 ರಲ್ಲಿ 973 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದಿದ್ದರು. ಈ ಬಾರಿಯೂ ಅವರು ಹೆಚ್ಚು ರನ್ ಗಳಿಸುವ ನಿರೀಕ್ಷೆ ಇದೆ.
(4 / 6)
2023ರ ಐಪಿಎಲ್ನಲ್ಲಿ ದೊಡ್ಡ ಆಟಗಾರನಾಗಿ ಹೊರಹೊಮ್ಮಿದ ಋತುರಾಜ್ ಗಾಯಕ್ವಾಡ್ ಅವರು 16 ಪಂದ್ಯಗಳಲ್ಲಿ 590 ರನ್ ಗಳಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಮ್ಮೆ ಗಾಯಕ್ವಾಡ್ ಅವರಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತದೆ. ಈ ಬಾರಿಯೂ ಅಂತಹದ್ದೇ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
(5 / 6)
ಅತ್ಯದ್ಭುತ ಫಾರ್ಮ್ನಲ್ಲಿರುವ ಯಶಸ್ವಿ ಜೈಸ್ವಾಲ್ ಅವರು ನಿರೀಕ್ಷೆ ದುಪ್ಪಟ್ಟು ಮಾಡಿದ್ದಾರೆ. ಕಳೆದ ಬಾರಿ ರಾಜಸ್ಥಾನ್ ರಾಯಲ್ಸ್ ಪರ 14 ಪಂದ್ಯಗಳಲ್ಲಿ 625 ರನ್ ಗಳಿಸಿದ್ದ ಜೈಸ್ವಾಲ್, ಇತ್ತೀಚೆಗೆ ಮುಗಿದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 712 ರನ್ ಗಳಿಸಿದ್ದರು. ಇದೇ ಫಾರ್ಮ್ ಮುಂದುವರೆಸಿದರೆ ಆರೆಂಜ್ ಕ್ಯಾಪ್ ಗೆಲ್ಲುವುದು ದೊಡ್ಡ ವಿಷಯವೇನಲ್ಲ.
ಇತರ ಗ್ಯಾಲರಿಗಳು