Chennai Rains: ಸೈಕ್ಲೋನ್ ಸೃಷ್ಟಿಸಿದ ಭಾರೀ ಮಳೆಗೆ ತತ್ತರಿಸಿದ ಚೆನ್ನೈ ಮಹಾನಗರ; ನದಿಗಳಾದ ರಸ್ತೆಗಳು, ಜನಜೀವನ ಅಸ್ತವ್ಯಸ್ತ
- Chennai Rain Updates: ಚೆನ್ನೈ ಮಹಾನಗರಕ್ಕೆ ಅಪ್ಪಳಿಸಿದ ಫೆಂಗಾಲ್ ಚಂಡಮಾರುತದಿಂದ ಶನಿವಾರ ಭಾರೀ ಮಳೆಯಾಗುತ್ತಿದೆ. ಚೆನ್ನೈ ನ ಬಹುತೇಕ ಭಾಗಗಳಲ್ಲಿ ನೀರಿನ ಅಬ್ಬರ ಜೋರಾಗಿದೆ. ಬಡಾವಣೆಗಳು ಮುಳುಗಿದ್ದು, ರಸ್ತೆಗಳೇ ನದಿಗಳಾಗಿವೆ. ಇದರ ಚಿತ್ರನೋಟ ಇಲ್ಲಿದೆ.

(1 / 8)
ಚೆನ್ನೈ ಮಹಾನಗರದಲ್ಲಿ ಮೂರ್ನಾಲ್ಕು ದಿನದಿಂದ ಮಳೆಯ ವಾತಾವರಣವಿದ್ದರೂ ಶನಿವಾರ ಬೆಳಿಗ್ಗೆಯಿಂದಲೇ ಅನಾಹುತಕಾರಿ ಮಳೆ ಸುರಿಯುತ್ತಿದೆ. ಎಗ್ಮೋರ್‌ನಲ್ಲಿ ಮಳೆಗೆ ರಸ್ತೆಗಳು ಜಲಾವೃತವಾಗಿರುವ ಸನ್ನಿವೇಶ ಹೀಗಿದೆ.
(2 / 8)
ಚೆನ್ನೈನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು ರಸ್ತೆಯಲ್ಲಿ ಹೋಗಲು ಪರದಾಡುವ ಸನ್ನಿವೇಶ ನಿರ್ಮಾಣವಾಗಿದೆ.
(4 / 8)
ಚಂಡಮಾರುತದಿಂದ ಭಾರೀ ಮಳೆಯಾಗಿ ರಸ್ತೆಗಳು ಜಲಾವೃತ ಸನ್ನಿವೇಶದಲ್ಲಿಯೇ ಹಲವರು ವಸ್ತುಗಳ ಖರೀದಿಗೆ ಮುಗಿಬಿದ್ದುದ್ದು ಕಂಡು ಬಂದಿತು.
(6 / 8)
ದಶಕದ ಹಿಂದೆಯೂ ಹೀಗೆಯೇ ಚಂಡಮಾರುತಕ್ಕೆ ಚೆನ್ನೈ ನಗರ ತತ್ತರಿಸಿ 300 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಬಾರಿಯೂ ಆತಂಕದಲ್ಲೇ ದಿನ ದೂಡುತ್ತಿದ್ದಾರೆ.
(7 / 8)
ಅದರಲ್ಲೂ ಚೆನ್ನೈ ನಗರದ ತಗ್ಗು ಪ್ರದೇಶ ಸಹಿತ ಹಲವು ಬಡಾವಣೆಗಳು ಜಲಾವೃತಗೊಂಡಿರುವುದರಿಂದ ಜನರನ್ನು ಸ್ಥಳಾಂತರಿಸುವ ಚಟುವಟಿಕೆಯೂ ಸಾಗಿದೆ.
ಇತರ ಗ್ಯಾಲರಿಗಳು