Chennai Rains: ಚೆನ್ನೈನಲ್ಲಿ ಕುಂಭದ್ರೋಣ ಮಳೆ: ಗೋಡೆ ಕುಸಿದು ಇಬ್ಬರ ಸಾವು,ರೈಲು, ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ
- ಚೆನ್ನೈನ ಮಹಾನಗರ(Chennai Rains) ಕುಂಭದ್ರೋಣ ಮಳೆಗೆ ತತ್ತರಿಸಿದೆ. ಮಿಚಾಂಗ್(Michaung) ಎನ್ನುವ ಸೈಕ್ಲೋನ್‌ನಿಂದ ಮಳೆ ಸುರಿಯುತ್ತಿದೆ. ಜನಜೀವನ ಚೆನ್ನೈನಲ್ಲಿ ಅಸ್ಯವ್ಯಸ್ತವಾಗಿದೆ. ಮನೆ ಗೋಡೆ ಕುಸಿದು ಇಬ್ಬರು ಜೀವ ಕಳೆದುಕೊಂಡಿದ್ದಾರೆ. ವಿಮಾನ, ರೈಲು ಸೇವೆ ವ್ಯತ್ಯಯಗೊಂಡಿದೆ. ತಮಿಳುನಾಡು ಸರ್ಕಾರ ರಕ್ಷಣಾ ಕಾರ್ಯ ಕೈಗೊಂಡಿದೆ. ಹೀಗಿದೆ ಚೆನ್ನೈ ಮಹಾಮಳೆ ಚಿತ್ರಣ

(1 / 9)
ಚೆನ್ನೈನ ವಿಮಾನ ನಿಲ್ದಾಣವು ಮಳೆ ನೀರಿನಿಂದ ಸಂಪೂರ್ಣ ಜಲಾವೃತಗೊಂಡಿದೆ. ಈ ಕಾರಣದಿಂದ ಚೆನ್ನೈನಿಂದ ಹೋಗಬೇಕಿದ್ದ ಹಲವಾರು ವಿಮಾನಗಳ ಸೇವೆ ವ್ಯತ್ಯಯಗೊಂಡಿದೆ.
(2 / 9)
ಭಾರೀ ಮಳೆಗೆ ಚೆನ್ನೈನ ಪ್ರಮುಖ ಪ್ರದೇಶವಾದ ಮರೀನಾ ಬೀಚ್ ಕೂಡ ಮುಳುಗಿದೆ. ಎಲ್ಲೆಡೆ ನೀರು ತುಂಬಿ ವಾಹನ ನಿಲುಗಡೆಯೂ ಆಗದ ಸ್ಥಿತಿ ನಿರ್ಮಾಣವಾಗಿದೆ.
(3 / 9)
ಭಾರಿ ಮಳೆ ಚೆನ್ನೈನ ಕೆಲವು ಬಡಾವಣೆಗಳ ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್‌ಗೂ ನುಗ್ಗಿದೆ. ಇದರಿಂದ ಜನ ಹೊರ ಬರಲು ಹರಸಾಹಸಪಡುವಂತಾಗಿದೆ.
(4 / 9)
ಚೆನ್ನೈನ ಬಡಾವಣೆಯೊಂದರ ರಸ್ತೆಯೇ ದೊಡ್ಡ ಕಾಲುವೆಯಾಗಿ ಮಾರ್ಪಟ್ಟಿದೆ. ಮಳೆ ನೀರು ಸರಾಗವಾಗಿ ಹರಿಯಲು ಆಗುತ್ತಿಲ್ಲ. ಇದರಿಂದ ಮನೆಗಳು, ರಸ್ತೆಗಳಿಗೆ ನೀರು ನುಗ್ಗಿದೆ. ಇದೇ ಮಳೆಯಲ್ಲಿ ನಿವಾಸಿ ಯೊಬ್ಬರು ನಡೆದು ಹೊರಟ ಸನ್ನಿವೇಶ.
(5 / 9)
ಚೆನ್ನೈನ ಬಡಾವಣೆಯೊಂದರಲ್ಲಿ ಮಳೆಯ ನೀರು ನಿಂತು ಕಾರುಗಳು ನೀರಿನಲ್ಲಿ ಮುಳುಗಿರುವ ಸನ್ನಿವೇಶ ನಿರ್ಮಾಣವಾಗಿದೆ. ಇಂತಹ ಸನ್ನಿವೇಶ ಚೆನ್ನೈನ ಬಹುತೇಕ ಭಾಗಗಳಲ್ಲಿ ಕಂಡು ಬಂದಿದೆ.
(6 / 9)
ಚೆನ್ನೈನ ಅಡ್ಯಾರ್ ಪ್ರದೇಶದಲ್ಲಿ ಭಾರೀ ಮಳೆಯ ಚಿತ್ರಣ. ರಸ್ತೆಗಳಲ್ಲಿಯೇ ನೀರು ನುಗ್ಗಿದ್ದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
(7 / 9)
ಚೆನ್ನೈನಲ್ಲಿ ಬೆಳಗ್ಗೆಯೇ ಮಳೆ.ಭಾರೀ ಮಳೆಯಿಂದ ನೀರು ರಸ್ತೆಗಳಲ್ಲೂ ಹರಿಯುತ್ತಿದೆ. ತುರ್ತು ನಿರ್ವಹಣಾ ಪಡೆಯ ಸಿಬ್ಬಂದಿಗಳು ಮಳೆ ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಡುತ್ತಿದ್ದಾರೆ.
(8 / 9)
ಚೆನ್ನೈನಲ್ಲಿ ಭಾರೀ ಮಳೆ. ಹೀಗಿದ್ದರೂ ಹಲವರ ನಿತ್ಯದ ತುತ್ತಿನ ಚೀಲ ತುಂಬಲೇಬೇಕು. ಭಾರೀ ಮಳೆಯ ನಡುವೆಯೇ ಹಾಲು ಹಾಗೂ ಮೊಸರು ಮಾರಾಟದಲ್ಲಿ ನಿರತ ವ್ಯಕ್ತಿ.
ಇತರ ಗ್ಯಾಲರಿಗಳು