ಕರ್ನಾಟಕದಲ್ಲಿ ಮಕ್ಕಳ ದಿನಾಚರಣೆ ಹೇಗಿತ್ತು: ಮಕ್ಕಳೊಂದಿಗೆ ಡಿಸಿಎಂ ಸಂವಾದ, ಮೈಸೂರು ವಸ್ತು ಪ್ರದರ್ಶನದಲ್ಲಿ ಅವರದ್ದೇ ಹವಾ
- ಮಕ್ಕಳ ದಿನಾಚರಣೆ ಅಂಗವಾಗಿ ಬೆಂಗಳೂರು, ಮೈಸೂರಿನಲ್ಲಿ ಕಾರ್ಯಕ್ರಮಗಳು ನಡೆದವು. ಮಕ್ಕಳೊಂದಿಗೆ ಸಂವಾದ, ವಸ್ತು ಪ್ರದರ್ಶನಕ್ಕೆ ಉಚಿತ ಭೇಟಿ ಚಟುವಟಿಕೆ ಇದ್ದವು.
- ಮಕ್ಕಳ ದಿನಾಚರಣೆ ಅಂಗವಾಗಿ ಬೆಂಗಳೂರು, ಮೈಸೂರಿನಲ್ಲಿ ಕಾರ್ಯಕ್ರಮಗಳು ನಡೆದವು. ಮಕ್ಕಳೊಂದಿಗೆ ಸಂವಾದ, ವಸ್ತು ಪ್ರದರ್ಶನಕ್ಕೆ ಉಚಿತ ಭೇಟಿ ಚಟುವಟಿಕೆ ಇದ್ದವು.
(1 / 6)
ಮಕ್ಕಳ ದಿನಾಚರಣೆ ಹಾಗೂ ಪಂಡಿತ್ ಜವಹರ ಲಾಲ್ ನೆಹರು ಅವರ ಜಯಂತಿ ಅಂಗವಾಗಿ ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ ಸರ್ಕಾರಿ ಶಾಲಾ ಮಕ್ಕಳೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಂವಾದ ನಡೆಸಿದ ವೇಳೆ ಮಕ್ಕಳು ನೆಹರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
(2 / 6)
ಮಕ್ಕಳ ದಿನಾಚರಣೆ ಹಾಗೂ ಪಂಡಿತ್ ಜವಹರ ಲಾಲ್ ನೆಹರು ಅವರ ಜಯಂತಿ ಅಂಗವಾಗಿ ವಿಧಾನಸೌಧದಲ್ಲಿ ಸರ್ಕಾರಿ ಶಾಲಾ ಮಕ್ಕಳೊಂದಿಗೆ ಡಿಸಿಎಂ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಕ್ಕಳು ಭಾಗಿಯಾದರು.
(3 / 6)
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಕ್ಕಳ ದಿನ ಹಾಗೂ ನೆಹರು ಅವರ ಜಯಂತಿಯಲ್ಲಿ ಸಾಧಕ ಮಕ್ಕಳನ್ನು ಸಿಎಂ ಸಿದ್ದರಾಮಯ್ಯ, ಡಿಸಿಎ ಡಿಕೆಶಿವಕುಮಾರ್ ಸನ್ಮಾನಿಸಿದರು.
(4 / 6)
ಮೈಸೂರಿನ ದಸರಾ ವಸ್ತುಪ್ರದರ್ಶನದಲ್ಲಿ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದರಿಂದ ಮಕ್ಕಳ ದಿನದಂದು ಚಿಣ್ಣರ ಕಲರವ ಜೋರಿತ್ತು.
(5 / 6)
ವಿಜಯಪುರದಲ್ಲಿ ಮಕ್ಕಳ ದಿನಾಚರಣೆಯಲ್ಲಿ ಕೈಗಾರಿಕಾ ಸಚಿವ ಡಾ.ಎಂ.ಬಿ.ಪಾಟೀಲ್ ಭಾಗಿಯಾಗಿ ಮಕ್ಕಳೊಂದಿಗೆ ಖುಚಿ ಹಂಚಿಕೊಂಡರು.
ಇತರ ಗ್ಯಾಲರಿಗಳು