ಸುದೀಪ್ ಬಿಗ್ ಬಾಸ್ ಹೋಸ್ಟ್ ಮಾಡಲ್ಲ ಎನ್ನುವ ವಿಷಯ ಕೇಳಿ ಖುಷಿಯಾಯ್ತು ಎಂದ ಚಿತ್ರಾಲ್ ರಂಗಸ್ವಾಮಿ; ಆ ರಿಯಾಲಿಟಿ ಶೋಗೆ ಅಷ್ಟು ಹೈಪ್ ಬೇಕಿಲ್ಲ
- ಬಿಗ್ ಬಾಸ್ ರಿಯಾಲಿಟಿ ಶೋ ಬಗ್ಗೆ ಮಾತನಾಡಿದ ಚಿತ್ರಾಲ್ ರಂಗಸ್ವಾಮಿ ಬಿಗ್ ಬಾಸ್ ಒಂದು ಒಳ್ಳೆಯ ಶೋ ಅಲ್ಲ. ಇದರಿಂದ ಜನರಿಗೆ ಯಾವುದೇ ಮಾಹಿತಿಯೂ ಸಿಗೋದಿಲ್ಲ ಎಂದು ಹೇಳಿದ್ದಾರೆ. ಸುದೀಪ್ ಬಿಗ್ ಬಾಸ್ ಹೋಸ್ಟ್ ಮಾಡಲ್ಲ ಎನ್ನುವ ವಿಷಯ ಕೇಳಿ ಖುಷಿಯಾಯ್ತು ಎಂದಿದ್ದಾರೆ.
- ಬಿಗ್ ಬಾಸ್ ರಿಯಾಲಿಟಿ ಶೋ ಬಗ್ಗೆ ಮಾತನಾಡಿದ ಚಿತ್ರಾಲ್ ರಂಗಸ್ವಾಮಿ ಬಿಗ್ ಬಾಸ್ ಒಂದು ಒಳ್ಳೆಯ ಶೋ ಅಲ್ಲ. ಇದರಿಂದ ಜನರಿಗೆ ಯಾವುದೇ ಮಾಹಿತಿಯೂ ಸಿಗೋದಿಲ್ಲ ಎಂದು ಹೇಳಿದ್ದಾರೆ. ಸುದೀಪ್ ಬಿಗ್ ಬಾಸ್ ಹೋಸ್ಟ್ ಮಾಡಲ್ಲ ಎನ್ನುವ ವಿಷಯ ಕೇಳಿ ಖುಷಿಯಾಯ್ತು ಎಂದಿದ್ದಾರೆ.
(1 / 10)
ಬಿಗ್ ಬಾಸ್ ಬಗ್ಗೆ ನನಗೆ ಹೊಟ್ಟೆಯುರಿ ಇಲ್ಲ, ಬಿಗ್ ಬಾಸ್ ಅಂದ್ರೆ ಪದ್ಮಶ್ರೀ ಪ್ರಶಸ್ತಿ ಅಲ್ಲ ಎಂದು ಚಿತ್ರಾಲ್ ರಂಗಸ್ವಾಮಿ ಹೇಳಿದ್ದಾರೆ.
(2 / 10)
ನ್ಯಾಷನಲ್ ಟಿವಿ ಸಂದರ್ಶನದಲ್ಲಿ ಮಾತನಾಡಿದ ಅವರು ಬಿಗ್ ಬಾಸ್ ಶೋ ಬಗ್ಗೆ ಮಾತನಾಡಿದ್ದಾರೆ. ಅಲ್ಲಿನ ಕೆಲ ಒಳಗುಟ್ಟುಗಳನ್ನು ಹೇಳಿದ್ದಾರೆ.
(3 / 10)
ನಮ್ಮವರು ಹೇಗಾಗಿದ್ದಾರೆ ಎಂದರೆ ಯಾರು ಅಥ್ಲೇಟಿಕ್ಸ್‌ನಲ್ಲಿ ಯಾವ ಪ್ರಶಸ್ತಿ ಗೆದ್ದರು ಎಂದು ಪ್ರಶ್ನೆ ಮಾಡಿದರೆ ಉತ್ತರ ಹೇಳಲು ಬರೋದಿಲ್ಲ. ಆದ್ರೆ ಯಾರು ಬಿಗ್ ಬಾಸ್‌ಗೆ ಹೋದ್ರು ಅಂತ ಕೇಳಿದರೆ ಉತ್ತರಿಸುತ್ತಾರೆ ಎಂದಿದ್ದಾರೆ.
(4 / 10)
ಬಿಗ್ ಬಾಸ್‌ನಿಂದ ಯಾವುದೇ ಪ್ರಯೋಜನ ಇಲ್ಲ. ಅದರಿಂದ ಯಾವ ಮಾಹಿತಿಯೂ ಸಿಗೋದಿಲ್ಲ. ಆದರೆ ನಾನು ಅದನ್ನು ಮೀರುವ ಮೆಚ್ಯೂರಿಟಿ ಹೊಂದಿದ್ದೇನೆ ಎಂದು ಹೇಳಿದ್ದಾರೆ.
(5 / 10)
ಒಂದು ಲೆಕ್ಕದಲ್ಲಿ ನಾನು ಬಿಗ್ ಬಾಸ್‌ಗೆ ಹೋಗದೇ ಇರುವುದೇ ಒಳ್ಳೆದಾಯ್ತು. ನಾನು ಅಲ್ಲಿಗೆ ಹೋಗಿದ್ದರೆ ಬೇರೆಯವರ ರೀತಿ ಜಗಳ ಆಡಿಕೊಂಡೇ ಬದುಕ ಬೇಕಿತ್ತು ಎಂದುಉ ಹೇಳಿದ್ದಾರೆ.
(6 / 10)
ಅಲ್ಲಿ ನಾನು ನನ್ನ ವ್ಯಕ್ತಿತ್ವವನ್ನು ಯಾವುದೋ ಎಡಿಟರ್ ಕೈಗೆ ಕೊಟ್ಟು ಹಾಳು ಮಾಡಿಕೊಳ್ಳಲು ನನಗೆ ಇಷ್ಟ ಇಲ್ಲ ಎಂದು ಹೇಳಿದ್ದಾರೆ.
(7 / 10)
ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಹೋಸ್ಟಿಂಗ್ ಮಾಡುವುದಿಲ್ಲ ಎಂದು ಹೇಳಿರುವುದನ್ನು ಕೇಳಿ ನನಗೆ ಖುಷಿ ಆಯ್ತು ಎಂದು ಚಿತ್ರಾಲ್ ರಂಗಸ್ವಾಮಿ ಹೇಳಿದ್ದಾರೆ.
(9 / 10)
ಸುದೀಪ್ ಸರ್ ಒಳ್ಳೆ ಶೋಗಳನ್ನು ಪ್ರಚಾರ ಮಾಡಬೇಕು. ಹಾಗಂತ ಇದು ಕೆಟ್ಟ ಶೋ ಅಂತ ನಾನು ಹೇಳುತ್ತಿಲ್ಲ. ಎಂದೂ ಸಹ ಹೇಳಿದ್ದಾರೆ.
ಇತರ ಗ್ಯಾಲರಿಗಳು