ಚಿತ್ರದುರ್ಗ: ಸಿರಿಗೆರೆ ಚಿಕ್ಕಬೆನ್ನೂರು ಬಳಿ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ; ಕನಿಷ್ಠ 3 ಸಾವು- ಅಪಘಾತ ಸ್ಥಳದ ಫೋಟೋಸ್ ಇಲ್ಲಿವೆ
ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಇಂದು ಬೆಳಗ್ಗೆ ಸಿರಿಗೆರೆ ಚಿಕ್ಕಬೆನ್ನೂರು ಬಳಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಕನಿಷ್ಠ 3 ಸಾವು ಸಂಭವಿಸಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಫಾರ್ಚೂನರ್‌ನಲ್ಲಿದ್ದ ಪತಿ, ಪತ್ನಿ ಮಕ್ಕಳು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಇನ್ನಷ್ಟು ವಿವರ ಸಿಗಬೇಕಷ್ಟೆ. ಅಪಘಾತ ಸ್ಥಳದ ಚಿತ್ರನೋಟ.
(1 / 6)
ಚಿತ್ರದುರ್ಗದಲ್ಲಿ ಸಿರಿಗೆರೆ ಸಮೀಪ ಚಿಕ್ಕಬೆನ್ನೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು (ಜೂನ 15) ಭೀಕರ ಸರಣಿ ಅಪಘಾತ ಸಂಭವಿಸಿದೆ. ಲಾರಿಯೊಂದು ಫಾರ್ಚೂನರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅದು ಎದುರು ಹೋಗುತ್ತಿದ್ದ ಲಾರಿಗಳಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಕನಿಷ್ಠ ಮೂವರು ಮೃತಪಟ್ಟಿದ್ದಾರೆ.
(Yashwanth DVG)(2 / 6)
ಅಪಘಾತಕ್ಕೀಡಾಗಿ ಮೃತಪಟ್ಟವರು ಫಾರ್ಚೂನರ್ ಕಾರಿನಲ್ಲಿದ್ದವರು. ಪತಿ, ಪತ್ನಿ ಮತ್ತು ಮಕ್ಕಳು ಎಂದು ಹೇಳಲಾಗಿದ್ದು ಅವರ ಗುರುತು ವಿವರ ಇನ್ನಷ್ಟೆ ಬಹಿರಂಗವಾಗಬೇಕಿದೆ. ಅಪಘಾತದ ತೀವ್ರತೆಯನ್ನು ಸ್ಥಳದ ಚಿತ್ರಣ ತೋರಿಸುತ್ತಿತ್ತು.
(Yashwanth DVG)(3 / 6)
ಒಂದೆಡೆ ಸಂಪೂರ್ಣ ನಜ್ಜುಗುಜ್ಜಾಗಿರುವ ಫಾರ್ಚೂನರ್ ಕಾರು ನಿಂತಿದ್ದರೆ, ಇನ್ನೊಂದೆಡೆ, ಚಾಸಿಸ್‌ನಿಂದ ಕಿತ್ತುಕೊಂಡು ಹೋದ ಲಾರಿಯ ದೃಶ್ಯ ಗಮನಸೆಳೆಯುತ್ತಿತ್ತು.
(Yashwanth DVG)(5 / 6)
ನಜ್ಜುಗುಜ್ಜಾಗಿದ್ದ ಫಾರ್ಚೂನರ್ ಕಾರಿನಿಂದ ಗಾಯಗೊಂಡವರನ್ನು, ಮೃತ ದೇಹಗಳನ್ನು ಹೊರತೆಗೆದ ಸ್ಥಳೀಯರು.
(Yashwanth DVG)ಇತರ ಗ್ಯಾಲರಿಗಳು