Thangalaan 2: ಬರಲಿದೆ ತಂಗಲಾನ್ ಸೀಕ್ವೆಲ್ ಎಂದ ವಿಕ್ರಮ್, ಆಸ್ಕರ್‌ಗೆ ಕಳುಹಿಸುವುದಾಗಿ ಘೋಷಿಸಿದ ಜ್ಞಾನವೇಲ್-chiyaan vikram officially announces thangalaan 2 success meet gnanavel says plan to send to the oscar kollywood news prs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Thangalaan 2: ಬರಲಿದೆ ತಂಗಲಾನ್ ಸೀಕ್ವೆಲ್ ಎಂದ ವಿಕ್ರಮ್, ಆಸ್ಕರ್‌ಗೆ ಕಳುಹಿಸುವುದಾಗಿ ಘೋಷಿಸಿದ ಜ್ಞಾನವೇಲ್

Thangalaan 2: ಬರಲಿದೆ ತಂಗಲಾನ್ ಸೀಕ್ವೆಲ್ ಎಂದ ವಿಕ್ರಮ್, ಆಸ್ಕರ್‌ಗೆ ಕಳುಹಿಸುವುದಾಗಿ ಘೋಷಿಸಿದ ಜ್ಞಾನವೇಲ್

  • Thangalaan 2: ಹೈದರಾಬಾದ್​​ನಲ್ಲಿ ನಡೆದ ತಂಗಲಾನ್ ಚಿತ್ರದ ಸಕ್ಸಸ್ ಮೀಟ್​ನಲ್ಲಿ ಚಿಯಾನ್ ವಿಕ್ರಮ್ ಅವರು ಪಾರ್ಟ್​-2 ಕೂಡ ಬರಲಿದೆ ಎಂದು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ.

ಪ್ರಯೋಗಾತ್ಮಕ ಸಿನಿಮಾಗಳ ಮೂಲಕವೇ ಸ್ಟಾರ್ ಗಿರಿ ಸಂಪಾದಿಸಿರುವ ಚಿಯಾನ್ ವಿಕ್ರಮ್ ಅಭಿನಯದ ಸಾಹಸ ಚಿತ್ರ ತಂಗಲಾನ್ ಆಗಸ್ಟ್ 15ರಂದು ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವನ್ನು ಪಾ ರಂಜಿತ್ ಅವರು ನಿರ್ದೇಶಿಸಿದ್ದಾರೆ.
icon

(1 / 5)

ಆಗಸ್ಟ್ 16ರಂದು ಹೈದರಾಬಾದ್​​ನಲ್ಲಿ ಈ ಚಿತ್ರ ತಂಡವು ಸಕ್ಸಸ್ ಮೀಟ್ ಆಯೋಜಿಸಿತ್ತು. ಇದೇ ವೇಳೆ ಮಾತನಾಡಿದ ವಿಕ್ರಮ್, ಸೀಕ್ವೆಲ್ ಇರುವುದಾಗಿಯೂ ದೃಢಪಡಿಸಿದ್ದಾರೆ.
icon

(2 / 5)

ಎಲ್ಲರೂ ತಂಗಲಾನ್ ಇಷ್ಟಪಡುತ್ತಿರುವ ಕಾರಣ ಈ ಚಿತ್ರಕ್ಕೆ ಸೀಕ್ವೆಲ್​ ಕೂಡ ಬರಲಿದೆ ಎಂದು ವಿಕ್ರಮ್ ಖಚಿತಪಡಿಸಿದ್ದಾರೆ. ಪಾರ್ಟ್-2 ತೆರೆಗೆ ತರಲು ನಾನು, ಪಾ ರಂಜಿತ್ ಮತ್ತು ಜ್ಞಾನವೇಲ್ ಮಾತನಾಡಿದ್ದೇವೆ. ಪಾ ರಂಜಿತ್ ಅವರು ಫ್ರೀ ಆದಾಗ ಪಾರ್ಟ್-2 ಮಾಡುತ್ತೇವೆ. ನಿಮ್ಮೆಲ್ಲರ ಬೆಂಬಲದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
icon

(3 / 5)

ಸ್ಟುಡಿಯೋಗ್ರೀನ್ ಪ್ರೊಡಕ್ಷನ್ ಹೌಸ್​ನ ಸಿಇಒ ಧನುಂಜಯನ್ ಅವರು ತಂಗಲಾನ್ ಒಂದು ಮೇರುಕೃತಿಯಂತೆ ಉಳಿದಿದೆ. ಚಿತ್ರವನ್ನು ಆಸ್ಕರ್ ಪ್ರಶಸ್ತಿಗೆ ಕೊಂಡೊಯ್ಯಬೇಕೆಂದು ಪ್ರೇಕ್ಷಕರು ಬಯಸಿದ್ದಾರೆ. ಅದರಂತೆ ಆಸೆ ನೆರವೇರಿಸುತ್ತೇವೆ ಎಂದು ಹೇಳಿದ್ದಾರೆ. ಸ್ಟುಡಿಯೋ ಗ್ರೀನ್ ಬ್ಯಾನರ್ ಅಡಿಯಲ್ಲಿ ಕೆಇ ಜ್ಞಾನವೇಲ್ ಅವರು ತಂಗಲನ್ ಚಿತ್ರವನ್ನು ನಿರ್ಮಿಸಿದ್ದಾರೆ. 
icon

(4 / 5)

ತಂಗಲಾನ್ ಮೊದಲ ದಿನದಂದು ವಿಶ್ವಾದ್ಯಂತ 26.44 ಕೋಟಿ ರೂಪಾಯಿ ಗಳಿಸಿದೆ. ಚಿತ್ರದಲ್ಲಿ ವಿಕ್ರಮ್ ಅಭಿನಯಕ್ಕೆ ಹೆಚ್ಚು ಪ್ರಶಂಸೆ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ಮಾಳವಿಕಾ ಮೋಹನನ್ ಮತ್ತು ಪಾರ್ವತಿ ತಿರುವೋತು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ.
icon

(5 / 5)

ಇತರ ಗ್ಯಾಲರಿಗಳು