Christmas 2024: ಮೈಸೂರಿನ ಇತಿಹಾಸ ಪ್ರಸಿದ್ದ ಸೆಂಟ್ ಫಿಲೋಮಿನಾ ಚರ್ಚ್ ವೈಭವ; ಬಣ್ಣಗಳಲ್ಲಿ ಕಂಗೊಳಿಸಿದ ಪಾರಂಪರಿಕ ಕಟ್ಟಡ
- Christmas 2024: ಮೈಸೂರಿನ ಎರಡು ನೂರು ವರ್ಷ ಹಳೆಯದಾದ ಸೆಂಟ್ ಫಿಲೋಮಿನಾ ಚರ್ಚ್ ಕ್ರಿಸ್ ಮಸ್ ಹಬ್ಬದ ಸಡಗರದಲ್ಲಿ ಮಿಂದೆದ್ದಿದೆ. ಬಗೆಬಗೆಯ ಬಣ್ಣದಿಂದ ಚರ್ಚ್ ಅಲಂಕಾರಗೊಂಡಿದ್ದು ಪ್ರವಾಸಿಗರನ್ನು ಸೆಳೆಯುತ್ತಿದೆ.ಚಿತ್ರಗಳು: ಅನುರಾಗ್ ಬಸವರಾಜ್, ಮೈಸೂರು

(1 / 6)
ಮೈಸೂರಿನಲ್ಲಿ ಎರಡು ಶತಮಾನದ ಹಿಂದೆಯೇ ನಿರ್ಮಾಣಗೊಂಡಿರುವ ಏಷ್ಯಾದ ಅತಿ ಎತ್ತರದ ಎರಡನೇ ಚರ್ಚ್ ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚ್‌ನಲ್ಲಿ ಕ್ರಿಸ್‌ಮಸ್ ಸಡಗರ.
(2 / 6)
ಮೈಸೂರು ಮಹಾರಾಜರ ಕಾಲದಲ್ಲಿ ವಿಶೇಷ ಶೈಲಿಯೊಂದಿಗೆ ಮರು ನಿರ್ಮಾಣಗೊಂಡು ಪ್ರಮುಖ ಪಾರಂಪರಿಕ ಹಾಗೂ ಪ್ರವಾಸಿ ತಾಣವಾಗಿ ಈ ಚರ್ಚ್ ರೂಪುಗೊಂಡಿದೆ.
(Pic: Anurag Basavaraj)(3 / 6)
ಈಗಲೂ ಇಲ್ಲಿಗೆ ನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ.ಮೈಸೂರಿಗೆ ಆಗಮಿಸುವ ಬಹುತೇಕ ಪ್ರವಾಸಿಗರು ಸೆಂಟ್ ಫಿಲೋಮಿನಾ ಚರ್ಚ್ ವೀಕ್ಷಿಸುತ್ತಾರೆ.
(4 / 6)
ಕ್ರಿಸ್ ಮಸ್ ಬಂದರೆ ಇಡೀ ಚರ್ಚ್ ಅನ್ನು ಬಣ್ಣ ಬಣ್ಣಗಳಿಂದ ಅಲಂಕರಿಸಲಾಗುತ್ತದೆ. ಇದನ್ನು ಹತ್ತಿರದಿಂದ ನೋಡುವುದೇ ಚಂದ.
(5 / 6)
ಈ ಬಾರಿಯೂ ಆರೇಳು ಬಣ್ಣಗಳಿಂದ ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚ್ ಅಲಂಕೃತಗೊಂಡು ಸಹಸ್ರಾರು ಮಂದಿಯನ್ನು ಸೆಳೆಯುತ್ತಿದೆ. ಸಂಜೆ ನಂತರ ಬೆಳಕಿನ ವೈಭವ ತೆರೆದುಕೊಳ್ಳಲಿದೆ.
ಇತರ ಗ್ಯಾಲರಿಗಳು