Chronic Heart Diseases: ಹೃದಯದ ಆರೋಗ್ಯಕ್ಕೆ ಈ ಸೂಪರ್‌ಫುಡ್‌ಗಳೇ ಮದ್ದು; ನಿರಂತರ ಸೇವನೆಗೆ ಆದ್ಯತೆ ನೀಡಿ
- ಅಗಸೆ ಬೀಜದಿಂದ ನಿಂಬೆಹಣ್ಣಿನವರೆಗೆ ಈ ಸೂಪರ್‌ಫುಡ್‌ಗಳು ರಕ್ತವನ್ನು ತೆಳುವಾಗಿಸಿ, ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತವೆ. ಇವುಗಳ ಸೇವನೆಯಿಂದ ಹಲವು ರೀತಿಯ ಹೃದಯ ಸಂಬಂಧಿ ಸಮಸ್ಯೆಗಳಿಂದ ದೂರ ಇರಬಹುದು ಎನ್ನುತ್ತಾರೆ ತಜ್ಞರು.
- ಅಗಸೆ ಬೀಜದಿಂದ ನಿಂಬೆಹಣ್ಣಿನವರೆಗೆ ಈ ಸೂಪರ್‌ಫುಡ್‌ಗಳು ರಕ್ತವನ್ನು ತೆಳುವಾಗಿಸಿ, ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತವೆ. ಇವುಗಳ ಸೇವನೆಯಿಂದ ಹಲವು ರೀತಿಯ ಹೃದಯ ಸಂಬಂಧಿ ಸಮಸ್ಯೆಗಳಿಂದ ದೂರ ಇರಬಹುದು ಎನ್ನುತ್ತಾರೆ ತಜ್ಞರು.
(1 / 6)
ನಾವು ಅನುಸರಿಸುವ ಜೀವನಶೈಲಿಯು ಹಲವು ರೀತಿಯ ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅಸಮರ್ಪಕ ಆಹಾರಕ್ರಮದಿಂದ ಹಿಡಿದು ಧೂಮಪಾನ, ಮದ್ಯಪಾನ ಈ ಆಯ್ಕೆಗಳು ಹೃದಯದ ಆರೋಗ್ಯ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಈ ಬಗ್ಗೆ ಮಾತನಾಡುವ ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ʼಬದಲಾದ ಜೀವನಶೈಲಿ, ಒತ್ತಡ, ಅಸಮರ್ಪಕ ಆಹಾರ ಕ್ರಮ ಇವು ಆರೋಗ್ಯ ಸಮಸ್ಯೆಯ ಹೆಚ್ಚಳಕ್ಕೆ ಕಾರಣವಾಗುತ್ತವೆ. ಹೃದ್ರೋಗದ ಪ್ರಮಾಣ ಹೆಚ್ಚಳವಾಗಲು ಇದು ಕಾರಣವಾಗಬಹುದುʼ ಎನ್ನುತ್ತಾರೆ. ಅಂಜಿನಾದಂತಹ ಎದೆನೋವಿನ ಸಮಸ್ಯೆಗೂ ಇದು ಕಾರಣವಾಗಬಹುದು ಎನ್ನುವುದು ಅವರ ಅಭಿಪ್ರಾಯ. (Unsplash)
(2 / 6)
ಅಂಜಿನಾ ಎನ್ನುವುದು ಒಂದು ರೀತಿಯ ಎದೆನೋವು. ಇದು ಹೃದಯದ ಸ್ನಾಯುಗಳಿಗೆ ರಕ್ತಪರಿಚಲನೆ ಕಡಿಮೆಯಾದಾಗ ಉಂಟಾಗುತ್ತದೆ. ಸಂಕೋಚನ, ಭಾರ, ಬಿಗಿತ ಅಥವಾ ಸಂಕೋಚನದ ನೋವು ಆಂಜಿನಾದ ಲಕ್ಷಣಗಳಾಗಿವೆ. (Unsplash)
(3 / 6)
ಕೆಲವು ಸೂಪರ್‌ಫುಡ್‌ಗಳ ಸೇವನೆಯಿಂದ ಅಂಜಿನಾ ಸಮಸ್ಯೆಯನ್ನು ತಡೆಯಬಹುದು. ಅವುಗಳಲ್ಲಿ ಪ್ರಮುಖವಾದದ್ದು ಅನಾನಸ್. ಇದು ಬ್ರೊಮೆಲಿನ್, ಶಕ್ತಿಯುತ ಪ್ರೋಟಿನ್ ಜೀರ್ಣಕಾರಿ ಕಿಣ್ವದಿಂದ ಸಮೃದ್ಧವಾಗಿದೆ. ಇದು ರಕ್ತಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಆ ಮೂಲಕ ಹೃದಯಘಾತ ಹಾಗೂ ಪಾರ್ಶ್ವವಾಯು ಸಮಸ್ಯೆಯನ್ನು ತಡೆಗಟ್ಟಲು ಸಹಾಯ ಮಾಡಬಹುದು. (Unsplash)
(4 / 6)
ಅಗಸೆ ಬೀಜಗಳ ಸೇವನೆಯಿಂದ ರಕ್ತ ತೆಳುವಾಗುತ್ತದೆ, ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಆ ಮೂಲಕ ಹೃದಯ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. (Unsplash)
(5 / 6)
ಶುಂಠಿಯು ರಕ್ತ-ತೆಳುವಾಗಿಸುವ ಮತ್ತು ಕೊಲೆಸ್ಟ್ರಾಲ್-ಕಡಿಮೆಗೊಳಿಸುವ ಗುಣಲಕ್ಷಣಗಳನ್ನು ಹೊಂದಿದೆ. ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ಎದುರಿಸುವಲ್ಲಿ ಉತ್ತಮ ಸೂಪರ್‌ಫುಡ್. (Unsplash)
ಇತರ ಗ್ಯಾಲರಿಗಳು