ಕನ್ನಡ ಸುದ್ದಿ  /  Photo Gallery  /  Cm Bommai Offers Pooja To Nandhi Dhvaja On Mysuru Dasara Last Day

Mysuru Dasara: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಬೊಮ್ಮಾಯಿ

  • ಮೈಸೂರು ದಸರಾದ 10ನೇ ಹಾಗೂ ಕೊನೆಯ ದಿನವಾದ ಇಂದು ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅರಮನೆಯ ಬಲರಾಮ ಗೇಟ್ ಬಳಿ ಕೋಟೆ ಆಂಜನೇಯ ದೇವಾಲಯ ಮುಂಭಾಗ ನಂದಿ ಧ್ವಜಕ್ಕೆ ಶುಭ ಮಕರ ಲಗ್ನದಲ್ಲಿ ಪೂಜೆ ಸಲ್ಲಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು ಅರಮನೆಯ ಬಲರಾಮ ದ್ವಾರದ ಬಳಿ ನಂದಿ ಧ್ವಜಕ್ಕೆ ಶುಭ ಮಕರ ಲಗ್ನದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ಬೊಮ್ಮಾಯಿ ಅವರ ಪತ್ನಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್​​.ಟಿ.ಸೋಮಶೇಖರ್​ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
icon

(1 / 6)

ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರವಣಿಗೆ ಆರಂಭವಾಯಿತು. ಕಂಸಾಳೆ ನೃತ್ಯದ ಫೋಟೋ ಇದಾಗಿದೆ. 
icon

(2 / 6)

ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಸಮಸ್ತ ನಾಡಿನ ಜನತೆಗೆ ಮತ್ತೊಮ್ಮೆ ದಸರಾ ಹಬ್ಬದ ಶುಭಾಶಯಗಳ ಕೋರಿದರು.
icon

(3 / 6)

ದಸರಾ ಒಂಬತ್ತು ದಿನಗಳು ಕಳೆದು 10ನೇ ದಿನಕ್ಕೆ ಕಾಲಿಟ್ಟಿದೆ. ನಾಡಿನ ಸಮಸ್ತ ಜನತೆಗೆ ಸರ್ವಮಂಗಳವಾಗಲಿ ಅಂತಾ ಚಾಮುಂಡಿ ದೇವಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.
icon

(4 / 6)

ಬೆಳಗ್ಗೆ ದೇವಿ ಪೂಜೆಯಿಂದ ಪ್ರಾರಂಭವಾಗಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಇದೀಗ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಗಿದೆ. ಈಗ ಜಂಬೂ ಸವಾರಿಗೆ ಚಾಲನೆಯನ್ನು ಕೊಡುವಂತ ಸಮಯ ಎಂದು ಹೇಳಿದರು. ಈ ವರ್ಷ ಅತ್ಯಂತ ಅದ್ದೂರಿಯಾಗಿ ಲಕ್ಷಾಂತರ ಜನ ಇಲ್ಲಿಗೆ ಬಂದಿದ್ದಾರೆ. ಅವರೆಲ್ಲರಿಗೂ ಬಂದಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು ಸಿಎಂ.
icon

(5 / 6)

ಕಳೆದ 9 ದಿನಗಳ ಎಲ್ಲಾ ಕಾರ್ಯಕ್ರಮ ಯಶಸ್ವಿಯಾಗಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡಿದಂತಹ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್​​.ಟಿ.ಸೋಮಶೇಖರ್​ ಜಿಲ್ಲಾಡಳಿತ, ಶಾಸಕರು, ಸಂಸದರು ಹಾಗೂ ಮೈಸೂರು ಜನತೆ ಸಹಕಾರ ನೀಡಿದ್ದಾರೆ ಎಂದ ಸಿಎಂ ಅವರೆಲ್ಲರಿಗೂ ಧನ್ಯವಾದ ಅರ್ಪಿಸಿದರು.
icon

(6 / 6)

IPL_Entry_Point

ಇತರ ಗ್ಯಾಲರಿಗಳು