ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬಂದ ಬಿಗ್‌ ಬಾಸ್‌ ಖ್ಯಾತಿಯ ಶಿಶಿರ್‌ ಶಾಸ್ತ್ರಿ ನೋಡಲು ಮುಗಿಬಿದ್ದ ಫ್ಯಾನ್ಸ್‌, ಅದ್ರಲ್ಲೂ ಹೆಣ್ಮಕ್ಳೇ ಜಾಸ್ತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬಂದ ಬಿಗ್‌ ಬಾಸ್‌ ಖ್ಯಾತಿಯ ಶಿಶಿರ್‌ ಶಾಸ್ತ್ರಿ ನೋಡಲು ಮುಗಿಬಿದ್ದ ಫ್ಯಾನ್ಸ್‌, ಅದ್ರಲ್ಲೂ ಹೆಣ್ಮಕ್ಳೇ ಜಾಸ್ತಿ

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬಂದ ಬಿಗ್‌ ಬಾಸ್‌ ಖ್ಯಾತಿಯ ಶಿಶಿರ್‌ ಶಾಸ್ತ್ರಿ ನೋಡಲು ಮುಗಿಬಿದ್ದ ಫ್ಯಾನ್ಸ್‌, ಅದ್ರಲ್ಲೂ ಹೆಣ್ಮಕ್ಳೇ ಜಾಸ್ತಿ

  • ಬಿಗ್‌ ಬಾಸ್‌ ಕನ್ನಡ 11ರ ಸ್ಪರ್ಧಿ, ನಟ ಶಿಶಿರ್‌ ಶಾಸ್ತ್ರಿ ಕಳೆದ ಎರಡು ವಾರಗಳ ಹಿಂದಷ್ಟೇ ಎಲಿಮಿನೇಟ್‌ ಆಗಿದ್ದರು. ಇದೀಗ ಇದೇ ನಟ ಬಿಗ್‌ ಬಾಸ್‌ನಿಂದ ಬಂದ ಬಳಿಕ ಮೊದಲ ಸಲ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಮೈಸೂರಿಗೆ ಆಗಮಿಸಿ, ಚಾಮುಂಡಿ ಅಮ್ಮನ ದರ್ಶನ ಪಡೆದಿದ್ದಾರೆ. ಶಿಶಿರ್‌ ಅವರನ್ನು ಕಂಡ ಸಾಕಷ್ಟು ಮಂದಿ ಅವರ ಜತೆ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಕನ್ನಡ ಕಿರುತೆರೆ, ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡ ನಟ ಶಿಶಿರ್‌ ಶಾಸ್ತ್ರಿ, ತಮ್ಮ ನಟನೆಯ ಮೂಲಕವೇ ಈಗಾಗಲೇ ಪರಿಚಿತರು. 
icon

(1 / 8)

(Instagram\ Shishir Shastry)

ಕನ್ನಡ ಕಿರುತೆರೆಯಲ್ಲಿ ಸೊಸೆ ತಂದ ಸೌಭಾಗ್ಯ, ಭಾರತಿ, ಕುಲವಧು, ಪುಟ್ಟಗೌರಿ ಮದುವೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಶಿಶಿರ್‌. 
icon

(2 / 8)

ಸೀರಿಯಲ್‌ ಜತೆಗೆ ಸಿನಿಮಾಗಳಾದ ಬಿಲ್‌ಗೇಟ್ಸ್‌,     ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸೇರಿ ಹಲವು ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. 
icon

(3 / 8)

ಹೀಗಿರುವಾಗಲೇ, ಬಿಗ್‌ಬಾಸ್‌ ಕನ್ನಡ 11ರಲ್ಲಿ ಸ್ಪರ್ಧಿಯಾಗುವ ಚಾನ್ಸ್‌ ಗಟ್ಟಿಸಿಕೊಂಡರು ಶಿಶಿರ್‌. ಸ್ಪಷ್ಟ ಕನ್ನಡ ಮಾತನಾಡುವ ಮೂಲಕವೇ ಕೇವಲ ಇತರ ಸ್ಪರ್ಧಿಗಳ ಮಾತ್ರವಲ್ಲದೆ, ಕರುನಾಡಿನ ಜನರ ಗಮನ ಸೆಳೆದರು. 
icon

(4 / 8)

ಈ ನಡುವೆ ಕಳೆದ ಎರಡು ವಾರಗಳ ಹಿಂದಷ್ಟೇ ಅನಿರೀಕ್ಷಿತವಾಗಿ ಶಿಶಿರ್‌ ಶಾಸ್ತ್ರಿ ಬಿಗ್‌ಬಾಸ್‌ನಿಂದ ಎಲಿಮಿನೇಟ್‌ ಆಗಿ ಹೊರಬಂದರು. ಹಾಗೆ ಹೊರ ಬಂದ ಬಳಿಕ ಮೊದಲ ಸಲ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. 
icon

(5 / 8)

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಶಿಶಿರ್‌, ತಾಯಿ ಚಾಮುಂಡಿ ಅಮ್ಮನ ದರ್ಶನ ಪಡೆದಿದ್ದಾರೆ. 
icon

(6 / 8)

ಶಿಶಿರ್‌ ಆಗಮಿಸುತ್ತಿದ್ದಂತೆ, ದೇವಸ್ಥಾನದ ಆವರಣದಲ್ಲಿದ್ದ ನೂರಾರು ಮಂದಿ ಅವರ ಜತೆಗೆ ಫೋಟೋಗಳಿಗೆ ಮುಖವೊಡ್ಡಿದರು. 
icon

(7 / 8)

ಮಹಿಳಾ ಅಭಿಮಾನಿಗಳ ಜತೆಗೆ ಶಿಶಿರ್‌ (ಎಡಚಿತ್ರ), ಆಪ್ತರ ಜತೆಗೆ ಚಾಮುಂಡಿ ದರ್ಶನ ಪಡೆದ ಶಿಶಿರ್‌ ಶಾಸ್ತ್ರಿ (ಬಲಚಿತ್ರ)
icon

(8 / 8)

ಇತರ ಗ್ಯಾಲರಿಗಳು