ʻಮುದ್ದುಸೊಸೆʼಗೆ ಸಿಕ್ಕ ಟಿಆರ್‌ಪಿ ಎಷ್ಟು? ಕಲರ್ಸ್ ಕನ್ನಡದ ಟಾಪ್ 10 ಧಾರಾವಾಹಿಗಳು ಇಲ್ಲಿವೆ ನೋಡಿ
17ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಆ ಪೈಕಿ ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ, ಮುದ್ದುಸೊಸೆ, ಭಾರ್ಗವಿ ಎಲ್‌ಎಲ್‌ಬಿ ಸೇರಿ ಟಾಪ್ 10 ಧಾರಾವಾಹಿಗಳ ಟಿಆರ್‌ಪಿ ಎಷ್ಟು? ನಂಬರ್ 1 ಧಾರಾವಾಹಿಯಿಂದ ಹಿಡಿದು ಅತ್ಯಂತ ಕಡಿಮೆ ಟಿಆರ್‌ಪಿ ಪಡೆದ ಸೀರಿಯಲ್‌ಗಳ ವಿವರ ಇಲ್ಲಿದೆ.
(1 / 11)
17ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ ಕಲರ್ಸ್ ಕನ್ನಡದ ಧಾರಾವಾಹಿಗಳಿಗೆ ಸಿಕ್ಕ ಟಿಆರ್‌ಪಿ ಎಷ್ಟು? ಇಲ್ಲಿದೆ ವಿವರ.
(All Image\ Jio Hotstar)(2 / 11)
ಭಾಗ್ಯಲಕ್ಷ್ಮೀ: ಕಲರ್ಸ್ ಕನ್ನಡದ ಟಾಪ್ ಧಾರಾವಾಹಿಯಾಗಿ ಹೊರಹೊಮ್ಮಿದೆ ಭಾಗ್ಯಲಕ್ಷ್ಮೀ. ಈ ಧಾರಾವಾಹಿ 17ನೇ ವಾರದ ಟಿಆರ್‌ಪಿಯಲ್ಲಿ 4.5 ರೇಟಿಂಗ್ಸ್ ಪಡೆದಿದೆ.
(3 / 11)
ಮುದ್ದುಸೊಸೆ: ಇತ್ತೀಚೆಗಷ್ಟೇ ಶುರುವಾದ ಮುದ್ದುಸೊಸೆ ಧಾರಾವಾಹಿ ವೀಕ್ಷಕರಿಂದ ಮೆಚ್ಚುಗೆ ಪಡೆದಿದೆ. ಅದರಂತೆ, 17ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ 4.0 ಟಿವಿಆರ್ ಪಡೆದು ಎರಡನೇ ಸ್ಥಾನದಲ್ಲಿದೆ.
(4 / 11)
ನಿನಗಾಗಿ: ಇನ್ನು ಹೆಚ್ಚು ವೀಕ್ಷಕರನ್ನು ಹೊಂದಿರುವ ನಿನಗಾಗಿ ಧಾರಾವಾಹಿ ಸಹ ಟಾಪ್ ಸ್ಥಾನದಲ್ಲಿ ಮುಂದುವರಿದಿದೆ. ಈ ಸೀರಿಯಲ್ 3.8 ರೇಟಿಂಗ್ಸ್ ಪಡೆದು ಮೂರನೇ ಸ್ಥಾನದಲ್ಲಿದೆ.
(5 / 11)
ಭಾರ್ಗವಿ ಎಲ್‌ಎಲ್‌ಬಿ; ಆರಂಭದಲ್ಲಿ ಮೋಡಿ ಮಾಡಿದ್ದ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್ 3.3 ರೇಟಿಂಗ್ಸ್ ಪಡೆದಿದೆ. ರಾಧಾ ಭಗವತಿ ಈ ಧಾರಾವಾಹಿಯ ನಾಯಕಿ. ಈ ಸೀರಿಯಲ್ ನಾಲ್ಕನೇ ಸ್ಥಾನದಲ್ಲಿದೆ.
(6 / 11)
ದೃಷ್ಟಿಬೊಟ್ಟು: ಕಲರ್ಸ್ ಕನ್ನಡದ ದೃಷ್ಟಿಬೊಟ್ಟು ಧಾರಾವಾಹಿ, 17ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ 3.0 ಟಿಆರ್‌ಪಿ ಪಡೆದಿದೆ. ಈ ಮೂಲಕ ಐದನೇ ಸ್ಥಾನದಲ್ಲಿದೆ.
(7 / 11)
ಯಜಮಾನ: ಬಿಗ್ ಬಾಸ್ ಮುಗಿದ ಬಳಿಕ ಶುರುವಾದ ಯಜಮಾನ ಸೀರಿಯಲ್, ಅದ್ಯಾಕೋ ಟಿಆರ್‌ಪಿಯಲ್ಲಿ ಏರಿಕೆ ಕಾಣುತ್ತಿಲ್ಲ. ಈ ಸೀರಿಯಲ್ 2.6 ಟಿಆರ್‌ಪಿ ಪಡೆದು, ಆರನೇ ಸ್ಥಾನದಲ್ಲಿದೆ.
(8 / 11)
ಕರಿಮಣಿ; ಕಡಿಮೆ ಟಿಆರ್‌ಪಿ ಪಡೆದರೂ, ತನ್ನದೇ ಆದ ವೀಕ್ಷಕ ವರ್ಗವನ್ನು ಹೊಂದಿದೆ ಕರಿಮಣಿ ಸೀರಿಯಲ್. ಈ ಧಾರಾವಾಹಿ 17ನೇ ವಾರ 2.2 ಟಿಆರ್‌ಪಿ ಪಡೆದು ಏಳನೇ ಸ್ಥಾನದಲ್ಲಿದೆ.
(9 / 11)
ರಾಮಾಚಾರಿ: ರಾಮಾಚಾರಿ ಧಾರಾವಾಹಿ ಕಳೆದ ಕೆಲ ತಿಂಗಳಿಂದ ಟಿಆರ್‌ಪಿಯಲ್ಲಿ ಪಾತಾಳ ಕಂಡಿದೆ. ಈಗಲೂ ಅದೇ ಸ್ಥಿತಿ ಮುಂದುವರಿದಿದ್ದು, 2.0 ಟಿಆರ್‌ಪಿ ಪಡೆದು ಎಂಟನೇ ಸ್ಥಾನದಲ್ಲಿದೆ.
(10 / 11)
ನೂರು ಜನ್ಮಕೂ; ವಾರಾಂತ್ಯದ ಎರಡು ದಿನಗಳಲ್ಲಿ ಪ್ರಸಾರವಾಗುತ್ತಿರುವ ನೂರು ಜನ್ಮಕೂ ಧಾರಾವಾಹಿ 1.2 ಟಿಆರ್‌ಪಿ ಪಡೆದು ಒಂಬತ್ತನೇ ಸ್ಥಾನದಲ್ಲಿದೆ.
ಇತರ ಗ್ಯಾಲರಿಗಳು