Vadhu Serial: ಮಹಾನಟಿಯಿಂದ ವಧು ಧಾರಾವಾಹಿಗೆ; ಮೊದಲ ಪ್ರೋಮೋದಲ್ಲೇ ಪ್ರಿಯಾಂಕಾ ಪಾತ್ರದಲ್ಲಿ ಮಿಂಚಿದ ಸೋನಿ ಮುಲೇವ
- Vadhu Serial: ಕಲರ್ಸ್ ಕನ್ನಡದಲ್ಲಿ ವಧು ಧಾರಾವಾಹಿ ಇಂದಿನಿಂದ (ಜನವರಿ 27)ರಿಂದ ಆರಂಭವಾಗಲಿದೆ. ಈಗಾಗಲೇ ಮೊದಲ ದಿನದ ಪ್ರೋಮೋ ಬಿಡುಡೆಯಾಗಿದೆ. ಪ್ರಿಯಾಂಕಾ ಪಾತ್ರದಲ್ಲಿ ಅಭಿನಯಿಸುತ್ತಿರುವ ಸೋನಿ ಮುಲೇವ ಮೊದಲ ಪ್ರೋಮೋದಲ್ಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ. ಈ ಹಿಂದೆ ಇವರು ಜೀ ಕನ್ನಡ ವಾಹಿನಿಯ ಮಹಾನಟಿಯ ಶೋದಲ್ಲಿ ಭಾಗವಹಿಸಿದ್ದರು.

(1 / 8)
ಸಾರ್ಥಕ್‌ನ ಪತ್ನಿ ಪ್ರಿಯಾಂಕಾ ದುರಹಂಕಾರದ ಗುಣ ಹೊಂದಿದ್ದಾಳೆ ಎಂಬುದನ್ನು ಈ ಪ್ರೋಮೋದ ಮೂಲಕ ಜನರಿಗೆ ಅರ್ಥ ಮಾಡಿಸಿದ್ದಾರೆ.
(Colors Kannada)(2 / 8)
ಯಾವಾಗಲೂ ನಾನೇ ಗೆಲ್ಲಬೇಕು. ಎಲ್ಲಾ ಕಡೆ ನನಗೇ ಹೆಚ್ಚು ಆದ್ಯತೆ ದೊರೆಯಬೇಕು ಎನ್ನುವುದು ಅವಳ ವಾದ ಎಂಬುದು ಅರ್ಥವಾಗುತ್ತದೆ.
(Colors Kannada)(3 / 8)
ಪುಸ್ತಕವೊಂದರ ಮುಖ ಪುಟದಲ್ಲಿ ತನ್ನದೇ ಫೋಟೋ ಬರಬೇಕು ಎಂದು ಅವಳು ತುಂಬಾ ಪ್ರಯತ್ನಪಡುತ್ತಾಳೆ. ಆದರೆ ಅವಳ ಅತ್ತೆ ಫೋಟೋ ಬಂದಿರುತ್ತದೆ.
(Colors Kannada)(4 / 8)
ಅತ್ತೆಯ ಫೋಟೋ ಮುಖಪುಟದಲ್ಲಿ ಬಂದಿರುವುದನ್ನು ಅವಳ ಬಳಿ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
(Colors Kannada)(5 / 8)
ತಾನೇ ಮುಖಪುಟದಲ್ಲಿ ಕಾಣಿಸಿಕೊಳ್ಳಬೇಕು ಎಂದು ಅವಳು ಹತ್ತಾರು ಉಡುಪಿನಲ್ಲಿ ಫೋಟೋಶೂಟ್ ಮಾಡಿಸಿರುತ್ತಾಳೆ.
(Colors Kannada)(6 / 8)
ಆದರೆ ಅದ್ಯಾವುದೂ ಈ ಸಂದರ್ಭದಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ. ಅದರಿಂದ ಕೋಪಗೊಂಡ ಪ್ರಿಯಾಂಕಾ ಅತ್ತೆ ಬಳಿ ಹೋಗಿದ್ದಾಳೆ.
(Colors Kannada)(7 / 8)
ತನ್ನ ಫೋಟೋ ಬಂದಿಲ್ಲ ಎಂದು ಚಿಂತೆ ಮಾಡುವ ಬದಲು, ಇದಕ್ಕೆ ತಾನು ನೇರ ಪರಿಹಾರವನ್ನೇ ಕಂಡುಕೊಳ್ಳುತ್ತೇನೆ ಎಂದು ಅವಳು ಹೊರಟಂತಿದೆ.
(Colors Kannada)ಇತರ ಗ್ಯಾಲರಿಗಳು