ಕನ್ನಡ ಸುದ್ದಿ  /  Photo Gallery  /  Colour Psychology Color Reveals Your True Personality Which Is Your Favorite Colour What Color Psychology Tells Us Mgb

Color and Personality: ನಿಮ್ಮಿಷ್ಟದ ಬಣ್ಣಕ್ಕೂ ನಿಮ್ಮದೇ ವ್ಯಕ್ತಿತ್ವಕ್ಕೂ ಇದೆ ಸಂಬಂಧ; ನಿಮಗೆ ಇಂಥವರೊಂದಿಗೆ ಫ್ರೆಂಡ್‌ಶಿಪ್ ಸುಲಭ

  • ಎಲ್ಲರಿಗೂ ನೆಚ್ಚಿನ ಬಣ್ಣ ಎಂಬುದು ಇರುತ್ತದೆ. ಆದರೆ, ನಿಮ್ಮ ನೆಚ್ಚಿನ ಬಣ್ಣಕ್ಕೂ ನಿಮ್ಮ ವ್ಯಕ್ತಿತ್ವಕ್ಕೂ ಸಂಬಂಧ ಇದೆ ಎಂಬುದು ಎಲ್ಲರಿಗೂ ತಿಳಿದಿರುವುದಿಲ್ಲ. ವ್ಯಕ್ತಿಗಳ ವ್ಯಕ್ತಿತ್ವವನ್ನು ಅವರ ಫೇವರೆಟ್​ ಕಲರ್​ ಯಾವುದು ಎಂಬುದರ ಮೇಲೆ ತಿಳಿದು, ಬಳಿಕ ಅವರೊಂದಿಗೆ ಸ್ನೇಹ ಬೆಳೆಸಬಹುದು. ನಿಮ್ಮ ಫೇವರೆಟ್​ ಕಲರ್​ ನಿಮ್ಮ ಬಗ್ಗೆ ಏನು ಹೇಳುತ್ತೆ ನೋಡೋಣ ಬನ್ನಿ

ಬಣ್ಣ ಮನೋವಿಜ್ಞಾನದ (Color Psychology) ಪ್ರಕಾರ, ಬಣ್ಣವು ನಮ್ಮ ಗ್ರಹಿಕೆಗಳ ಮೇಲೆ ಪ್ರಭಾವ ಬೀರುತ್ತದೆ.  "ನಾವೆಲ್ಲರೂ ನೆಚ್ಚಿನ ಬಣ್ಣವನ್ನು ಹೊಂದಿದ್ದೇವೆ, ಅದು ನಮ್ಮ ವ್ಯಕ್ತಿತ್ವ ಮತ್ತು ನಡವಳಿಕೆಯ ಬಗ್ಗೆ ಬಹಳಷ್ಟು ಹೇಳುತ್ತದೆ" ಎಂದು  ಬಣ್ಣ ಮನೋವಿಜ್ಞಾನಿ ಏಂಜೆಲಾ ರೈಟ್ ಹೇಳುತ್ತಾರೆ. 
icon

(1 / 11)

ಕಪ್ಪು (Black): ಕಪ್ಪು ಬಣ್ಣವನ್ನು ಇಷ್ಟಪಡುವವರು ಗಂಭೀರ ಸ್ವರೂಪದವರಾಗಿರುತ್ತಾರೆ. ಇದು ನಮ್ಮ ಸಾಮರ್ಥ್ಯ, ಬುದ್ಧಿವಂತಿಕೆಯನ್ನು ಸಹ ಪ್ರತಿನಿಧಿಸುತ್ತದೆ. ಇವರು ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿಗಳಾಗಿರುತ್ತಾರೆ. ಆದರೆ ಕಪ್ಪು ಬಣ್ಣವನ್ನು ಇಷ್ಟಪಡುವ ಕೆಲವರು ತುಂಬಾ ಸೂಕ್ಷ್ಮ ಮತ್ತು ಎಮೋಶನಲ್​ ಕೂಡ ಆಗಿರುತ್ತಾರೆ. ನಿಗೂಢ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಅವರು ಒಳಗಡೆಯಿಂದ ಹೇಗೆ ಎನ್ನುವುದು ಹೊರಗಡೆಯಿಂದ ಗೊತ್ತಾಗುವುದಿಲ್ಲ. ತಮ್ಮ ವ್ಯಯಕ್ತಿಕ ವಿಚಾರಗಳನ್ನು ಬೇರೆಯವರೊಂದಿಗೆ ಅಷ್ಟು ಸುಲಭವಾಗಿ ಹೇಳಿಕೊಳ್ಳುವುದಿಲ್ಲ. 
icon

(2 / 11)

ಕಿತ್ತಳೆ (Orange): ಈ ಬಣ್ಣವನ್ನು ಇಷ್ಟಪಡುವವರಲ್ಲಿ ಎನರ್ಜಿ ಹಾಗೂ ಉತ್ಸಾಹ ಜಾಸ್ತಿ ಇರತ್ತೆ. ಹೀಗಾಗಿ ಇವರು ಕಷ್ಟದ ಕೆಲಸವನ್ನ ಸುಲಭವಾಗಿ ಮಾಡುತ್ತಾರೆ. ಕಿತ್ತಳೆ ಬಣ್ಣವು ಆಧ್ಯಾತ್ಮಿಕತೆಯ ಸಂಕೇತವೂ ಆಗಿದೆ. ಈ ಬಣ್ಣವನ್ನು ಇಷ್ಟಪಡುವವರು ಯಾವಾಗಲೂ ತಮ್ಮ  ಅಕ್ಕಪಕ್ಕ ಕಿತ್ತಳೆ ಬಣ್ಣದ ವಸ್ತುಗಳು ಇರಬೇಕು ಎಂದು ಬಯಸುತ್ತಾರೆ. 
icon

(3 / 11)

ಕೆಂಪು (Red): ರೆಡ್​ ಕಲರ್ ಇಷ್ಟಪಡುವವರಲ್ಲಿ ಎರಡು ಬಗೆಯ ಜನರಿರುತ್ತಾರೆ. ಕೆಲವರಲ್ಲಿ ಪ್ರೀತಿ, ಉತ್ಸಾಹ, ಲೈಂಗಿಕ ಆಸಕ್ತಿ ಹೆಚ್ಚು ಇದ್ದರೆ, ಇನ್ನು ಕೆಲವರಲ್ಲಿ ಕೋಪ ಮತ್ತು ಆಕ್ರಮಣಶೀಲತೆ ಹೆಚ್ಚಿರುತ್ತದೆ. ಬಲವಾದ ವ್ಯಕ್ತಿತ್ವ ಮತ್ತು ಬಲವಾದ ಭಾವನೆ ಇವರದ್ದಾಗಿರುತ್ತದೆ. ಅವರು ಯಾವಾಗಲೂ ಸೆಂಟರ್​ ಆಫ್​ ಅಟ್ರಾಕ್ಷನ್​ ಆಗಲು ಬಯಸುತ್ತಾರೆ. ತಮ್ಮನ್ನು ಯಾವಾಗಲೂ ವಿಶೇಷವಾಗಿ ಟ್ರೀಟ್​ ಮಾಡಬೇಕು ಎಂದು ಬಯಸುತ್ತಾರೆ. 
icon

(4 / 11)

ಗುಲಾಬಿ (Pink): ಪಿಂಕ್​ ಕಲರ್​ ಎಂದಾಕ್ಷಣ ಇದು ಹುಡುಗಿಯರ ಫೇವರೆಟ್​ ಕಲರ್​ ಅಂತ ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಅನೇಕ ಹುಡುಗರಿಗೂ ಗುಲಾಬಿ ಬಣ್ಣ ಅಂದ್ರೆ ಇಷ್ಟ. ಹುಡುಗರೋ ಹುಡುಗಿಯರೋ ಒಟ್ಟಾಗಿ ಪಿಂಕ್​ ಕಲರ್​ ಇಷ್ಟಪಡುವವರಲ್ಲಿ ಪ್ರೀತಿ ಮತ್ತು ಕಾಳಜಿ ಹೆಚ್ಚಿರುತ್ತದೆ. ನೀವು ಸಂಬಂಧಗಳಿಗೆ ಬೆಲೆ ಕೊಡುತ್ತೀರಿ,  ನಿಮಗೆ ಮತ್ತೊಬ್ಬರ ಜೊತೆ ಮಾತನಾಡುವುದು ಇಷ್ಟವಾಗುತ್ತದೆ, ಏನೇ ಮಾಡಿದ್ರೂ ಹೃದಯಪೂರ್ವಕವಾಗಿ ಮಾಡ್ತೀರ. ಆದರೆ ಈ ಬಣ್ಣವನ್ನು ಒಷ್ಟಪಡುವವರ ಪ್ರಬುದ್ಧತೆಯ ಮಟ್ಟ​ ಸ್ವಲ್ಪ ಕಡಿಮೆ ಎಂದು ಹೇಳಲಾಗುತ್ತದೆ. 
icon

(5 / 11)

ಹಳದಿ (Yellow): ಇದು ಸಂತೋಷ, ಸನ್​ಶೈನ್​, ನಗುವನ್ನು ಪ್ರತಿನಿಧಿಸುತ್ತದೆ. ಹಳದಿ ಬಣ್ಣವನ್ನು ಇಷ್ಟಪಡುವವರು ಮೃದು ಹೃದಯದವರಾಗಿರುತ್ತಾರೆ. ಇವರಲ್ಲಿ ಆತ್ಮವಿಶ್ವಾಸ ಹೆಚ್ಚು. ಆದರೆ ಈ ಬಣ್ಣವನ್ನು ಇಷ್ಟಪಡುವ ಕೆಲವರು ಗಾಬರಿ ಮತ್ತು ನರ್ವಸ್​ ಸ್ವಭಾವದವರೂ ಆಗಿರುತ್ತಾರೆ. ಹೀಗಾಗಿ ಕೆಲವೊಮ್ಮೆ ಹಳದಿ ಬಣ್ಣವನ್ನು ನಿರಾಕರಿಸಬೇಕಾಗುತ್ತದೆ.  
icon

(6 / 11)

ನೇರಳೆ (Purple): ಹಿಂದಿನ ಕಾಲದಲ್ಲಿ ನೇರಳೆ ಬಣ್ಣವನ್ನು ಐಶಾರಾಮಿ ಸಂಕೇತವಾಗಿ ನೋಡಲಾಗುತ್ತಿತ್ತು. ಆದರೆ ಈಗ ಕ್ರಿಯೇಟಿವಿಟಿ, ಕಲಾತ್ಮಕ ಎಂದು ಭಾವಿಸಲಾಗುತ್ತಿದೆ. ನೇರಳೆ ಬಣ್ಣವನ್ನು ಹೆಚ್ಚು ಇಷ್ಟಪಡುವವರು ತುಂಬಾ ಎಮೋಷನಲ್​ ಮತ್ತು ಸೂಕ್ಷ್ಮವಾಗಿರುತ್ತಾರೆ. ಆದರೆ ಬೇರೆಯವರಿಗೆ ಹೋಲಿಸಿದರೆ ಇವರ ಕ್ರಿಯೇಟಿವಿಟಿ ಹೆಚ್ಚಿರುತ್ತದೆ. ಇವರು ಮತ್ತೊಬ್ಬರಿಗೆ ಸಹಾಯ ಮಾಡಲು ಯಾವಾಗಲೂ ರೆಡಿ ಇರ್ತಾರೆ. ಕಲೆಯನ್ನೇ ಬೆಸ್ಟ್ ಫ್ರೆಂಡ್​ ಆಗಿ ಮಾಡಿಕೊಂಡು ಯಾವಾಗಲೂ ಆರ್ಟಿಸ್ಟಿಕ್ ಕೆಲಸದಲ್ಲಿ ಮುಳುಗಿರುತ್ತಾರೆ. ಹೀಗಾಗಿ ಈ ಬಣ್ಣವನ್ನು ಒಂಟಿತನದ ಸಂಕೇತವಾಗಿಯೂ ಪರಿಗಣಿಸಲಾಗುತ್ತದೆ. 
icon

(7 / 11)

ಬಿಳಿ (White): ಇದು ಕರುಣೆ, ಶುಭ್ರತೆ, ಸ್ವಾತಂತ್ರ್ಯ, ಮುಗ್ಧತೆ, ಸರಳತೆಯ ಸಂಕೇತ. ಬಿಳಿ ಬಣ್ಣವನ್ನು ಇಷ್ಟಪಡುವವರು ಯಾವಾಗಲೂ ಒಳ್ಳೆಯದನ್ನೇ ಯೋಚನೆ ಮಾಡ್ತಾ ಇರ್ತಾರೆ, ಮತ್ತೊಬ್ಬರಿಗೆ ಸಹಾಯ ಮಾಡಲು ಒಂದು ಹೆಜ್ಜೆ ಮುಂದೆ ಇರುತ್ತಾರೆ. ತಮ್ಮನ್ನು ತಾವು ತುಂಬಾ ಕೇರ್​ ಮಾಡುತ್ತಾರೆ, ಶುಚಿತ್ವಕ್ಕೆ ಪ್ರಾಮುಖ್ಯತೆ ಕೊಡ್ತಾರೆ, ಯಾವಗಲೂ ನೀಟ್​ ಆಗಿ ಇರ್ತಾರೆ. 
icon

(8 / 11)

ಹಸಿರು (Green): ಇದು ಪ್ರಕೃತಿ, ಹಣ, ಅದೃಷ್ಟ ಮತ್ತು ಆರೋಗ್ಯವನ್ನು ಸೂಚಿಸುತ್ತದೆ. ಇದನ್ನು ಕೆಂಪು ಬಣ್ಣದ ವಿರುದ್ಧವಾಗಿ ನೋಡಲಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳು ಹೆಚ್ಚಾಗಿ ಹಸಿರು ಬಣ್ಣದಲ್ಲಿ ಪ್ಯಾಕ್​ ಆಗಿರುತ್ತದೆ. ಇವರು ಪಾಸಿಟಿವ್​ ಪರ್ಸನ್​ ಆಗಿರುತ್ತಾರೆ. 
icon

(9 / 11)

ಬೂದು (Grey) : ಬೂದು ಬಣ್ಣವನ್ನು ಇಷ್ಟಪಡುವವರು ಸೆಂಟರ್ ಆಪ್​ ಅಟ್ರಾಕ್ಷನ್​ ಆಗಲು ಇಷ್ಟಪಡಲ್ಲ. ಇವರ ಮೆಚ್ಯುರಿಟಿ ಲೆವೆಲ್​ ಜಾಸ್ತಿ ಇರತ್ತೆ. ಇವರು ಸಿಂಪಲ್​ ಮತ್ತು ಸ್ಟ್ರೇಟ್​ ಫಾರ್ವರ್ಡ್​ ಆಗಿರುತ್ತಾರೆ. ಇವರು ಸಮಯಕ್ಕೆ ತಕ್ಕಂತೆ ತಮ್ಮ ಅಭಿಪ್ರಾಯವನ್ನ ಬದಲಿಸುತ್ತಾ ಇರುತ್ತಾರೆ. ಇವರು ಸೆಕ್ಯುರ್ಡ್​​ ಮತ್ತು ಸೇಫ್​ ಲೈಫ್​ ಇಷ್ಟ ಪಡ್ತಾರೆ. 
icon

(10 / 11)

ನೀಲಿ (Blue): ಇದನ್ನು ಪುರುಷರ ಬಣ್ಣ ಎಂದೂ ಕರೆಯಲಾಗುತ್ತದೆ. ಅನೇಕ ಹುಡುಗರು ನೀಲಿ ಬಣ್ಣವನ್ನು ಇಷ್ಟಪಡುತ್ತಾರೆ. ನೀಲಿ ಬಣ್ಣ ನಂಬಿಕೆಯನ್ನು ಪ್ರತಿನಿಧಿಸುತ್ತದೆ ಎಂದು ಪರಿಗಣಿಸಲಾಗಿದೆ. ಟ್ವಿಟರ್​, ಫೇಸ್​ಬುಕ್​ಗಳ ಲೋಗೋ ಕೂಡ ನೀಲಿ ಬಣ್ಣದ್ದಾಗಿದೆ ಎಂಬುದನ್ನು ನೀವು ಗಮನಿಸಬಹುದು. ಹೀಗಾಗಿ ಕಾರ್ಪೋರೇಟ್​ ಕ್ಷೇತ್ರದಲ್ಲಿ ಬ್ರ್ಯಾಂಡ್​ ಬ್ಯುಲ್ಡಿಂಗ್​ಗೆ ಹೆಚ್ಚಾಗಿ ನೀಲಿ ಬಣ್ಣ ಬಳಕೆಯಾಗುತ್ತದೆ. ಈ ಬಣ್ಣವನ್ನು ಇಷ್ಟಪಡುವವರು ಶಾಂತ ಸ್ವಭಾವದವರಾಗಿರುತ್ತಾರೆ. ಬೇರೆಯವರ ಬಗ್ಗೆ ಅಷ್ಟು ಸುಲಭವಾಗಿ ತಪ್ಪಾಗಿ ತಿಳಿಯುವುದಿಲ್ಲ, ಮತ್ತೊಬ್ಬರನ್ನು ದೂರುವುದಿಲ್ಲ. 
icon

(11 / 11)

IPL_Entry_Point

ಇತರ ಗ್ಯಾಲರಿಗಳು