ರಾಕೇಶ್‌ ಪೂಜಾರಿ ನಿಧನಕ್ಕೆ ಅವರು ಮಾಡಿದ್ದು ಸಂತಾಪವಲ್ಲ, ಶೂಟಿಂಗ್‌! ಆಪ್ತ ಗೆಳೆಯನ ಬೇಸರ; ರಿಷಬ್‌ ಶೆಟ್ಟಿ ಏನಂದ್ರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾಕೇಶ್‌ ಪೂಜಾರಿ ನಿಧನಕ್ಕೆ ಅವರು ಮಾಡಿದ್ದು ಸಂತಾಪವಲ್ಲ, ಶೂಟಿಂಗ್‌! ಆಪ್ತ ಗೆಳೆಯನ ಬೇಸರ; ರಿಷಬ್‌ ಶೆಟ್ಟಿ ಏನಂದ್ರು

ರಾಕೇಶ್‌ ಪೂಜಾರಿ ನಿಧನಕ್ಕೆ ಅವರು ಮಾಡಿದ್ದು ಸಂತಾಪವಲ್ಲ, ಶೂಟಿಂಗ್‌! ಆಪ್ತ ಗೆಳೆಯನ ಬೇಸರ; ರಿಷಬ್‌ ಶೆಟ್ಟಿ ಏನಂದ್ರು

ಕಾಮಿಡಿ ಕಿಲಾಡಿಗಳು ಸೀಸನ್‌ 3ರಲ್ಲಿ ಗೆಲುವು ಪಡೆದ ರಾಕೇಶ್‌ ಪೂಜಾರಿ ಅನಿರೀಕ್ಷಿತ ಸಾವಿನ ದುಃಖದಲ್ಲಿ ಅವರ ಆಪ್ತರಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ತಮ್ಮ ಗೆಳೆಯನನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಕಾಮಿಡಿ ಕಿಲಾಡಿಗಳು ಸೀಸನ್‌ 3ರಲ್ಲಿ ಗೆಲುವು ಪಡೆದ ರಾಕೇಶ್‌ ಪೂಜಾರಿ ಅನಿರೀಕ್ಷಿತ ಸಾವಿನ ದುಃಖದಲ್ಲಿ ಅವರ ಆಪ್ತರಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ತಮ್ಮ ಗೆಳೆಯನನ್ನು ನೆನಪಿಸಿಕೊಳ್ಳುತ್ತಿದ್ದಾರೆ. ರಾಕೇಶ್‌ ಪೂಜಾರಿ ‌ ಆಪ್ತ ಗೆಳೆಯನೊಬ್ಬ ಇನ್‌ಸ್ಟಾಗ್ರಾಂನಲ್ಲಿ ಪರೋಕ್ಷವಾಗಿ ಕಾಂತಾರ ಚಿತ್ರತಂಡವನ್ನು ಸೂಚಿಸಿ ತನ್ನ ಬೇಸರ‌ ವ್ಯಕ್ತಪಡಿಸಿದ್ದಾನೆ.
icon

(1 / 11)

"ನಮ್ಮ ಸಿನಿಮಾ ನಮ್ಮ ಸಿನಿಮಾ ಅಂದವರು.. ಅವರ ಸಿನಿಮಾದಲ್ಲಿ ಕೆಲಸ ಮಾಡಿದ ಕಲಾವಿದ ಇನ್ನಿಲ್ಲ ಎಂದಾಗ.. ಅವರು ಮಾಡಿದ್ದು ಸಂತಾಪವಲ್ಲ... ಬದಲಿಗೆ ಶೂಟಿಂಗ್‌. ಎಂತಾ ಅವಸ್ಥೆ. ಕಮರ್ಷಿಯಲ್‌ ಮೈಂಡ್‌ನಲ್ಲಿ ಕಲಾವಿದನಿಗೆ ಬೆಲೆ ಇಲ್ಲಾ" ಎಂದು ಪ್ಯಾಂಕ್‌ ಪ್ಯಾಂಕ್‌ ಖ್ಯಾತಿಯ ರಿತೇಶ್‌  ಸೋಷಿಯಲ್‌ ಮೀಡಿಯಾದಲ್ಲಿ ಬೇಸರದಲ್ಲಿ ಸ್ಟೇಟಸ್‌ ಹಾಕಿಕೊಂಡಿದ್ದಾರೆ.
icon

(2 / 11)

ಈ ಮೂಲಕ ಕಾಂತಾರ ಸಿನಿಮಾ ತಂಡವನ್ನು ರಿತೇಶ್‌ ನೆನಪಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಟಿಸಿದ ಕಲಾವಿದರೊಬ್ಬರು ಮೃತಪಟ್ಟ ಸಮಯದಲ್ಲಿ ಚಿತ್ರತಂಡವು ಶೂಟಿಂಗ್‌ ಮುಂದುವರೆಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
icon

(3 / 11)

ನಿಗದಿಯಾದ ಶೂಟಿಂಗ್‌ ನಿಲ್ಲಿಸುವುದು ಚಿತ್ರತಂಡಕ್ಕೆ ಹೊರೆಯಾಗುತ್ತದೆ. ನಿಗದಿಪಡಿಸಿದ ದಿನಾಂಕದೊಳಗೆ ಸಿನಿಮಾ ಮುಗಿಸಿ ಬಿಡುಗಡೆ ಮಾಡುವ ಒತ್ತಡ ಇರುತ್ತದೆ.
icon

(4 / 11)

ಆದರೆ, ಗೆಳೆಯ ರಾಕೇಶ್‌ ಪೂಜಾರಿ ನಿಧನಕ್ಕೆ ಚಿತ್ರತಂಡ ತೋರಿದ ಪ್ರತಿಕ್ರಿಯೆ ಆಪ್ತಗೆಳೆಯ ರಿತೇಶ್‌ಗೆ ಬೇಸರ ತಂದಿದೆ. ರಿತೇಶ್‌ ಮಾತ್ರವಲ್ಲದೆ  ದಿವಂಗತ ರಾಕೇಶ್‌ ಪೂಜಾರಿಯ ಅನೇಕ ಗೆಳೆಯರು ನೋವಿನಲ್ಲಿದ್ದಾರೆ.
icon

(5 / 11)

"ಎಷ್ಟೋ ಮನಸ್ಸುಗಳನ್ನು ನಗಿಸಿದ ಆತ್ಮಕ್ಕೆ ಹೇಗೆ ಶಾಂತಿ ಕೋರಲಿ" ಎಂದು ಶಿವರಾಜ್‌ ಕೆ. ಆರ್‌. ಪೇಟೆ ಆತ್ಮೀಯ ಗೆಳೆಯನ ಸಾವಿಗೆ ಸಂತಾಪ ಸೂಚಿಸಿದ್ದಾರೆ.
icon

(6 / 11)

 " ರಾಕೇಶ್‌ ಪೂಜಾರಿ ಎಲ್ಲರ ಜತೆ ಚೆನ್ನಾಗಿದ್ದರು. ಒಳ್ಳೆಯವರನ್ನು ದೇವರು ಬೇಗ ಕರೆದುಕೊಳ್ಳುತ್ತಾನೆ. ರಾಕೇಶ್‌ ಇದ್ದ್ಲಿ ನಗು ಇತ್ತು. ತುಂಬಾ ದುಃಖವಾಗುತ್ತಿದೆ" ಎಂದು ಹಿತೇಶ್‌ ಮಾಧ್ಯಮಗಳ ಮುಂದೆ ಕಣ್ಣೀರಾಗಿದ್ದಾರೆ.
icon

(7 / 11)

ರಕ್ಷಿತಾ ಪ್ರೇಮ್‌, ಆಂಕರ್‌ ಅನುಶ್ರೀ ಕೂಡ ರಾಕೇಶ್‌ ಸಾವಿಗೆ ಆಘಾತಗೊಂಡಿದ್ದರು.
icon

(8 / 11)

ರಕ್ಷಿತಾ ಪ್ರೇಮ್‌, ಆಂಕರ್‌ ಅನುಶ್ರೀ ಕೂಡ ರಾಕೇಶ್‌ ಸಾವಿಗೆ ಆಘಾತಗೊಂಡಿದ್ದರು.

ಕಾಂತಾರ ನಟ ಮತ್ತು ನಿರ್ದೇಶಕ ರಿಷಬ್‌ ಶೆಟ್ಟಿ ಕೂಡ ರಾಕೇಶ್‌ ಅಕಾಲಿಕ ನಿಧನಕ್ಕೆ ದುಃಖಗೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಅವರು ಹೀಗೆ ಬರೆದಿದ್ದಾರೆ.
icon

(9 / 11)

"ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗು ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ .. ಮತ್ತೆ ಹುಟ್ಟಿ ಬಾ ಗೆಳೆಯ .. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು  ಸಹಿಸುವ ಶಕ್ತಿ ನಿನ್ನ ಕುಟುಂಬಕ್ಕೆ ಕೊಡಲಿ" ಎಂದು ರಿಷಬ್‌ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದ್ದಾರೆ.
icon

(10 / 11)

ಮೇ 11ರ ರಾತ್ರಿ ಮದುವೆ ನಿಮಿತ್ತ ಕಾರ್ಕಳದಲ್ಲಿದ್ದ ರಾಕೇಶ್‌, ಆ ಕಾರ್ಯಕ್ರಮದಲ್ಲಿನ ಹಾಡಿಗೆ ಡಾನ್ಸ್‌ ಮಾಡಿದ್ದರು. ಬೆಳಗಿನ ಜಾವ 3.30ರ ಸುಮಾರಿಗೆ ರಾಕೇಶ್‌ ಇನ್ನಿಲ್ಲ ಎಂಬ ಸುದ್ದಿ ಬರಸಿಡಿಲಿನಂತೆ ಹಬ್ಬಿತು. ಹೃದಯಾಘಾತದಿಂದ ರಾಕೇಶ್‌ ಪೂಜಾರಿ ಮೃತಪಟ್ಟಿದ್ದರು.
icon

(11 / 11)

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು