Rajnath Singh: ಆರೋಗ್ಯಕರ ರಾಜಕಾರಣದ ಲಕ್ಷಣ ಅಲ್ಲ: ಖರ್ಗೆ 'ರಾವಣ' ಹೇಳಿಕೆ ಖಂಡಿಸಿದ ರಾಜನಾಥ್ ಸಿಂಗ್!
- ಅಹಮದಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು 'ರಾವಣ' ಎಂದು ಕರೆದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ, ಬಿಜೆಪಿ ನಾಯಕರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ ಹಲವು ಬಿಜೆಪಿ ನಾಯಕರು ಖರ್ಗೆ ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ. ಇದೀಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಖರ್ಗೆ ಹೇಳಿಕೆಯನ್ನು ಖಂಡಿಸಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ..

(1 / 5)
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು 'ರಾವಣ' ಎಂದು ಕರೆದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಹರಿಹಾಯ್ದಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಅನುಚಿತ ಪದಗಳನ್ನು ಬಳಸುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.(ANI)
(2 / 5)
ಅನುಚಿತ ಪದಗಳನ್ನು ಬಳಸುವುದು ಆರೋಗ್ಯಕರ ರಾಜಕಾರಣದ ಲಕ್ಷಣವಲ್ಲ. ಪ್ರಧಾನಿಗಾಗಿ ಕಾಂಗ್ರೆಸ್ ಮುಖ್ಯಸ್ಥ ಖರ್ಗೆ ಬಳಸಿದ ಪದಗಳು ಅವರ ಮನಸ್ಥಿತಿ ಮಾತ್ರವಲ್ಲ, ಇಡೀ ಕಾಂಗ್ರೆಸ್‌ನ ಮನಸ್ಥಿತಿಯನ್ನು ಹೊರಹಾಕಿದೆ ಎಂದು ರಾಜನಾಥ್ ಸಿಂಗ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. (ಜಮ್ಮು ಪ್ರತಿಭಟನೆ)(PTI)
(3 / 5)
ರಾಜಕಾರಣದಲ್ಲಿ ನಾವು ವಿರೋಧಿಗಳ ಬಗ್ಗೆಯೂ ಗೌರವ ಭಾವನೆ ಹೊಂದಿರಬೇಕು. ರಾಜಕೀಯ ಕಾರಣಕ್ಕೆ ವಿರೋಧಿಗಳನ್ನು ಟೀಕಿಸುವುದು ಸಹಜ. ಆದರೆ ತೀರ ವೈಯಕ್ತಿಕ ಟೀಕೆಗಳನ್ನು ಜನರು ಒಪ್ಪುವುದಿಲ್ಲ ಎಂದು ರಾಜನಾಥ್ ಸಿಂಗ್ ಗುಡುಗಿದರು. (ಸಂಗ್ರಹ ಚಿತ್ರ)(HT_PRINT)
(4 / 5)
ಪ್ರಧಾನಿ ಮೋದಿ ಕುರಿತ ಖರ್ಗೆ ಅವರ ಹೇಳಿಕೆಗೆ, ಗುಜರತ್‌ನಲ್ಲಿ ಕಾಂಗ್ರೆಸ್ ಭಾರೀ ಬೆಲೆ ತೆರಲಿದೆ. ಮೋದಿ ಕುರಿತು ಕೀಳಾಗಿ ಮಾತನಾಡಿ ಖರ್ಗೆ ಅವರು ಗುಜರಾತ್‌ನಲ್ಲಿ ಬಿಜೆಪಿ ಗೆಲುವನ್ನು ಮತ್ತಷ್ಟು ಸರಳಗೊಳಿಸಿದ್ದಾರೆ ಎಂದು ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. (ಸಂಗ್ರಹ ಚಿತ್ರ)(MINT_PRINT)
ಇತರ ಗ್ಯಾಲರಿಗಳು