ಪೂರಿ ಜಾಸ್ತಿ ಎಣ್ಣೆ ಹೀರಬಾರದು, ಗರಿಗರಿ ಇರಬೇಕಾ: ಹಾಗಿದ್ರೆ ಈ ಟಿಪ್ಸ್ ಫಾಲೊ ಮಾಡಿ- ಉಬ್ಬಿದ ಪೂರಿ ಸವಿಯಿರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪೂರಿ ಜಾಸ್ತಿ ಎಣ್ಣೆ ಹೀರಬಾರದು, ಗರಿಗರಿ ಇರಬೇಕಾ: ಹಾಗಿದ್ರೆ ಈ ಟಿಪ್ಸ್ ಫಾಲೊ ಮಾಡಿ- ಉಬ್ಬಿದ ಪೂರಿ ಸವಿಯಿರಿ

ಪೂರಿ ಜಾಸ್ತಿ ಎಣ್ಣೆ ಹೀರಬಾರದು, ಗರಿಗರಿ ಇರಬೇಕಾ: ಹಾಗಿದ್ರೆ ಈ ಟಿಪ್ಸ್ ಫಾಲೊ ಮಾಡಿ- ಉಬ್ಬಿದ ಪೂರಿ ಸವಿಯಿರಿ

  • ಗರಿಗರಿಯಾದ ಪೂರಿ ಎಲ್ಲರ ಮೆಚ್ಚಿನ ತಿಂಡಿಗಳಲ್ಲೊಂದು. ಜಾಸ್ತಿ ಎಣ್ಣೆ ಇರುವ ಪೂರಿ ಯಾರಿಗೂ ರುಚಿಸುವುದಿಲ್ಲ ಹಾಗೂ ಅದು ಆರೋಗ್ಯಕ್ಕೂ ಉತ್ತಮವಲ್ಲ. ಆದ್ದರಿಂದ ಕಡಿಮೆ ಎಣ್ಣೆ ಇರುವ ಗರಿಗರಿಯಾಗಿರುವ ಪೂರಿ ಎಲ್ಲರಿಗೂ ಇಷ್ಟವಾಗುತ್ತದೆ. ನೀವು ತಯಾರಿಸುವ ಪೂರಿ ಕೂಡಾ ಅದೇ ರೀತಿ ಆಗಬೇಕೆಂದುಕೊಂಡಿದ್ದರೆ ಈ ಕೆಳಗಿನ ಟಿಪ್ಸ್‌ ಪಾಲಿಸಿ. ಗರಿಗರಿಯಾದ ಉಬ್ಬಿದ ಪೂರಿ ಸವಿಯಿರಿ.

ಪೂರಿ ಬೆಳಗ್ಗಿನ ತಿಂಡಿಗಳಲ್ಲಿ ಒಂದಾಗಿದೆ. ಪೂರಿ–ಸಾಗು ಮಕ್ಕಳ ಲಂಚ್‌ ಬಾಕ್ಸ್‌ನಲ್ಲಿಯೂ ಜಾಗ ಪಡೆದುಕೊಂಡಿದೆ. ಆದರೆ ಕೆಲವೊಮ್ಮೆ ಪೂರಿಗಳನ್ನು ತಯಾರಿಸಿಟ್ಟಾಗಲೆಲ್ಲ ಅದು ಜಾಸ್ತಿ ಎಣ್ಣೆ ಹೀರಿಕೊಂಡಿರುವುದು ಕಾಣಿಸುತ್ತದೆ. ಟಿಶ್ಯೂ ಪೇಪರ್‌ ಬಳಸಿ ಆ ಎಣ್ಣೆಯನ್ನು ತೆಗೆದು ತಿನ್ನುವ ಸಂದರ್ಭವೂ ಬರುತ್ತದೆ. ಅಷ್ಟು ಎಣ್ಣೆಯುಕ್ತ ಪೂರಿ ರುಚಿಸುವುದೂ ಇಲ್ಲ ಹಾಗೂ ಆರೋಗ್ಯಕ್ಕೂ ಉತ್ತಮವಲ್ಲ. ಆದ್ದರಿಂದ ಕಡಿಮೆ ಎಣ್ಣೆಯಿರುವ ಪೂರಿ ಎಲ್ಲರಿಗೂ ಇಷ್ಟವಾಗುತ್ತದೆ. ಆ ರೀತಿಯ ಪೂರಿ ನೀವೂ ಮಾಡಬೇಕೆಂದಿದ್ದರೆ ಈ ಟಿಪ್ಸ್‌ ಫಾಲೋ ಮಾಡಿ.
icon

(1 / 9)

(Slurrp)

ಪೂರಿ ಹಿಟ್ಟನ್ನು ಕಲಸುವಾಗ ಅದಕ್ಕೆ ಸ್ವಲ್ಪ ಕಡ್ಲೆ ಹಿಟ್ಟನ್ನು ಸೇರಿಸಿ. ಇದರಿಂದ ಪೂರಿ ಗರಿಗರಿಯಾಗುವುದರ ಜೊತೆಗೆ ಕಡಿಮೆ ಎಣ್ಣೆ ಹೀರಿಕೊಳ್ಳುತ್ತದೆ.
icon

(2 / 9)

(HT File photo)

ಪೂರಿ ಕರಿಯುವಾಗ ಎಣ್ಣೆ ಸರಿಯಾಗಿ ಬಿಸಿಯಾಗಿರಬೇಕು. ಇಲ್ಲವಾದರೆ ಪೂರಿಯನ್ನು ಎಣ್ಣೆಯಲ್ಲಿ ಹಾಕಿದಾಗ ಅದು ಉಬ್ಬಿ ಬರುವುದಿಲ್ಲ ಹಾಗೂ ಹೆಚ್ಚು ಎಣ್ಣೆ ಹೀರಿಕೊಳ್ಳುತ್ತದೆ.
icon

(3 / 9)

(HT File Photo)

ಪೂರಿಯನ್ನು ಎಣ್ಣೆಯಲ್ಲಿ ಬಿಟ್ಟ ನಂತರ ಅದನ್ನು ಚಮಚದ ಸಹಾಯದಿಂದ ನಿಧಾನವಾಗಿ ಪ್ರೆಸ್‌ ಮಾಡಿ. ಇದರಿಂದ ಪೂರಿ ಉಬ್ಬಿ ಬರುತ್ತದೆ.
icon

(4 / 9)

ಯಾವಾಗಲೂ ಪೂರಿಯನ್ನು ಎರಡೂ ಬದಿಗಳಲ್ಲಿ ಬೇಯಿಸಿ. ಮೊದಲು ಒಂದು ಬದಿಯಲ್ಲಿ ಬೇಯಿಸಿದ ನಂತರ ತಿರುಗಿಸಿ ಹಾಕಿ, ಅದರ ಇನ್ನೊಂದು ಬದಿಯನ್ನೂ ಸಹ ಬೇಯಿಸಬೇಕು. ಎರಡೂ ಕಡೆ ಗೋಲ್ಡನ್‌ ಬ್ರೌನ್‌ ಬಣ್ಣ ಬರುವವರೆಗೂ ಕರಿಯಿರಿ. ಇದರಿಂದ ಪೂರಿ ಹೆಚ್ಚು ಎಣ್ಣೆಯನ್ನು ಹೀರುವುದಿಲ್ಲ ಹಾಗೂ ಗರಿಗರಿಯಾಗಿರುತ್ತದೆ. 
icon

(5 / 9)

ಪೂರಿಯನ್ನು ಲಟ್ಟಿಸುವಾಗ ಬಹಳ ತೆಳ್ಳಗೆ ಲಟ್ಟಿಸಬೇಡಿ. ಹಾಗೆ ಮಾಡುವುದರಿಂದ ಪೂರಿ ಉಬ್ಬಿ ಬರುವುದಿಲ್ಲ. ಜೊತೆಗೆ ಪೂರಿ ಎಣ್ಣೆಯಲ್ಲಿ ಮುಳುಗುತ್ತದೆ. 
icon

(6 / 9)

(Freepik)

ಪೂರಿ ಹಿಟ್ಟನ್ನು ಕಲಸಿದ ನಂತರ ಅದನ್ನು ಕನಿಷ್ಠ ಹತ್ತು ನಿಮಿಷಗಳ ಕಾಲ ಫ್ರಿಜ್‌ನಲ್ಲಿ ಇಡಿ. ಅದು ಸೆಟ್‌ ಆಗುವುದು ಬಹಳ ಮುಖ್ಯ. ನಂತರ ಅದರಿಂದ ಪೂರಿ ತಯಾರಿಸಿ.
icon

(7 / 9)

ಪೂರಿ ಹಿಟ್ಟನ್ನು ಕಲಸಿದ ನಂತರ ಅದನ್ನು ಕನಿಷ್ಠ ಹತ್ತು ನಿಮಿಷಗಳ ಕಾಲ ಫ್ರಿಜ್‌ನಲ್ಲಿ ಇಡಿ. ಅದು ಸೆಟ್‌ ಆಗುವುದು ಬಹಳ ಮುಖ್ಯ. ನಂತರ ಅದರಿಂದ ಪೂರಿ ತಯಾರಿಸಿ.

(HT File Photo)

ಪೂರಿ ಹಿಟ್ಟನ್ನು ಕಲಸುವಾಗ ಸರಿಯಾದ ಪ್ರಮಾಣದಲ್ಲಿ ಕಲಸಿ. ಅದು ಜಾಸ್ತಿ ಗಟ್ಟಿಯಾಗಿಯೂ ಇರಬಾರದು ಅಥವಾ ಮೆತ್ತಗೂ ಇರಬಾರದು. ಸರಿಯಾಗಿ ಕಲಸಿದ ಹಿಟ್ಟಿನಿಂದ ಪೂರಿ ಲಟ್ಟಿಸುವಾಗ ಹೆಚ್ಚು ಹಿಟ್ಟು ಹಾಕಿಕೊಳ್ಳುವ ಅಗತ್ಯವಿರುವುದಿಲ್ಲ ಮತ್ತು ಹೆಚ್ಚು ಎಣ್ಣೆಯ ಅವಶ್ಯಕತೆಯೂ ಇರುವುದಿಲ್ಲ. ಇದರಿಂದ ಕಡಿಮೆ ಎಣ್ಣೆಯಲ್ಲಿ ಹೆಚ್ಚು ಪೂರಿ ಕರಿಯಬಹುದು.
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ
icon

(9 / 9)

ಇತರ ಗ್ಯಾಲರಿಗಳು