ಪಿಎಸ್ಎಲ್ ಬಿಟ್ಟು ಐಪಿಎಲ್ ಆಡಿದ್ದಕ್ಕೆ ಪಿಸಿಬಿ ಕೆಂಡ; ಕಾರ್ಬಿನ್ ಬಾಷ್‌ಗೆ ನಿಷೇದ ಶಿಕ್ಷೆ ವಿಧಿಸಿದ ಪಾಕಿಸ್ತಾನ
- ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ಸಲುವಾಗಿ ಪಾಕಿಸ್ತಾನ ಸೂಪರ್ ಲೀಗ್ (PSL)ನಿಂದ ಹಿಂದೆ ಸರಿದ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕಾರ್ಬಿನ್ ಬಾಷ್ ಅವರಿಗೆ ಪಿಎಸ್‌ಎಲ್‌ನಿಂದ ಒಂದು ವರ್ಷ ನಿಷೇಧ ಹೇರಲಾಗಿದೆ. ಪಿಎಸ್ಎಲ್ ಫ್ರಾಂಚೈಸಿ ಪೇಶಾವರ್ ಝಲ್ಮಿ ತಂಡದೊಂದಿಗಿನ ಒಪ್ಪಂದದ ಬಾಧ್ಯತೆಗಳನ್ನು ಬಾಷ್ ಉಲ್ಲಂಘಿಸಿದ್ದಾರೆ ಎಂದು ಪಿಸಿಬಿ ಆರೋಪಿಸಿದೆ.
- ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುವ ಸಲುವಾಗಿ ಪಾಕಿಸ್ತಾನ ಸೂಪರ್ ಲೀಗ್ (PSL)ನಿಂದ ಹಿಂದೆ ಸರಿದ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕಾರ್ಬಿನ್ ಬಾಷ್ ಅವರಿಗೆ ಪಿಎಸ್‌ಎಲ್‌ನಿಂದ ಒಂದು ವರ್ಷ ನಿಷೇಧ ಹೇರಲಾಗಿದೆ. ಪಿಎಸ್ಎಲ್ ಫ್ರಾಂಚೈಸಿ ಪೇಶಾವರ್ ಝಲ್ಮಿ ತಂಡದೊಂದಿಗಿನ ಒಪ್ಪಂದದ ಬಾಧ್ಯತೆಗಳನ್ನು ಬಾಷ್ ಉಲ್ಲಂಘಿಸಿದ್ದಾರೆ ಎಂದು ಪಿಸಿಬಿ ಆರೋಪಿಸಿದೆ.
(1 / 7)
2025ರ ಪಿಎಸ್ಎಲ್ ಋತುವಿನಲ್ಲಿ ಆಡುವ ಸಲುವಾಗಿ, ಈ ವರ್ಷದ ಆರಂಭದಲ್ಲಿ ಹೊರಬಂದ ಡ್ರಾಫ್ಟ್‌ನಲ್ಲಿ (ರಿಟೆನ್ಷನ್ ಪಟ್ಟಿ) ಬಾಷ್ ಅವರನ್ನು ಝಲ್ಮಿ ತಂಡ ಆಯ್ಕೆ ಮಾಡಿಕೊಂಡಿತ್ತು. ಆದರೆ ದಕ್ಷಿಣ ಆಫ್ರಿಕಾ ಆಟಗಾರ ಅದರ ಬದಲಿಗೆ ಐಪಿಎಲ್‌ನಲ್ಲಿ ಆಡಲು ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡರು.
(REUTERS)(2 / 7)
ಕಾರ್ಬಿನ್ ಬಾಷ್ ಅವರನ್ನು ಎಂಐ ತಂಡವು ಗಾಯದಿಂದಾಗಿ ಹೊರಗುಳಿದ ದಕ್ಷಿಣ ಆಫ್ರಿಕಾದ ಮತ್ತೊಬ್ಬ ಆಟಗಾರ ಲಿಜಾಡ್ ವಿಲಿಯಮ್ಸ್ ಅವರ ಬದಲಿಗೆ ತಂಡ ಸೇರಿಸಿಕೊಂಡಿತ್ತು.
(3 / 7)
ಈ ವರ್ಷ ಐಪಿಎಲ್ ಮತ್ತು ಪಿಎಸ್ಎಲ್ ಟೂರ್ನಿಗಳು ಏಕಕಾಲಕ್ಕೆ ನಡೆಯುತ್ತಿದೆ. ಐಪಿಎಲ್ ಈಗಾಗಲೇ ಆರಂಭಗೊಂಡಿದ್ದು, ಪಿಎಸ್‌ಎಲ್ ಇಂದಿನಿಂದ (ಏಪ್ರಿಲ್ 11) ಆರಂಭವಾಗುತ್ತಿದೆ.
(4 / 7)
"ಆಲ್‌ರೌಂಡರ್ ಒಂದು ವರ್ಷದ ನಿಷೇಧವನ್ನು ಅನುಭವಿಸಲಿದ್ದಾರೆ. ಮುಂದಿನ ವರ್ಷದ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡಲು ಆಯ್ಕೆಗೆ ಅರ್ಹರಾಗಿರುವುದಿಲ್ಲ" ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
(AP)(5 / 7)
ವಿಶ್ವದಾದ್ಯಂತದ ಹಲವು ಲೀಗ್‌ಗಳಲ್ಲಿ ಕಾಣಿಸಿಕೊಂಡಿರುವ ಬಾಷ್, ನಿಷೇಧದ ನಂತರ ಸಾರ್ವಜನಿಕ ಕ್ಷಮೆಯಾಚಿಸಿದ್ದರು, ತಮ್ಮ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದರು. “ನನ್ನ ನಿರ್ಧಾರಕ್ಕೆ ನಾನು ತೀವ್ರ ವಿಷಾದಿಸುತ್ತೇನೆ. ಪಾಕಿಸ್ತಾನದ ಜನರಿಗೆ, ಪೇಶಾವರ್ ಝಲ್ಮಿಯ ಅಭಿಮಾನಿಗಳಿಗೆ ಪ್ರಾಮಾಣಿಕ ಕ್ಷಮೆಯಾಚಿಸುತ್ತೇನೆ” ಎಂದು ಬಾಷ್ ಹೇಳಿದ್ದರು.
(Surjeet Yadav)(6 / 7)
ದಕ್ಷಿಣ ಆಫ್ರಿಕಾದ ಆಟಗಾರ 2024ರ ಡಿಸೆಂಬರ್‌ನಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ದಕ್ಷಿಣ ಆಫ್ರಿಕಾ ಪರ ಒಂದು ಟೆಸ್ಟ್ ಮತ್ತು ಎರಡು ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಆದರೆ, ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಇವರು ಹೆಚ್ಚು ಸುದ್ದಿಯಲ್ಲಿದ್ದಾರೆ.
(AP)ಇತರ ಗ್ಯಾಲರಿಗಳು