Correct Way of Drinking Water: ನೀರು ಕುಡಿಯುವ ಸರಿಯಾದ ವಿಧಾನ ಯಾವುದು? ತಪ್ಪಾಗಿ ಕುಡಿದರೆ ದೇಹಕ್ಕೆ ತೊಂದರೆ ಏನು?
- Correct Way of Drinking Water: ನೀರು ಹೇಗೆ ಕುಡಿದರೆ ಏನಂತೆ, ಹೊಟ್ಟೆಗೆ ತಾನೇ ಹೋಗುವುದು ಎಂದುಕೊಳ್ಳಬೇಡಿ. ತಪ್ಪಾದ ರೀತಿಯಲ್ಲಿ ನೀರು ಕುಡಿದರೆ ಮೂತ್ರಪಿಂಡದ ತೊಂದರೆ, ಸಂಧಿವಾತ ಇತ್ಯಾದಿಗಳು ಉಂಟಾಗಬಹುದು. ನೀರು ಕುಡಿಯಲು ಇರುವ ನಿಯಮಗಳು ಏನು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.
- Correct Way of Drinking Water: ನೀರು ಹೇಗೆ ಕುಡಿದರೆ ಏನಂತೆ, ಹೊಟ್ಟೆಗೆ ತಾನೇ ಹೋಗುವುದು ಎಂದುಕೊಳ್ಳಬೇಡಿ. ತಪ್ಪಾದ ರೀತಿಯಲ್ಲಿ ನೀರು ಕುಡಿದರೆ ಮೂತ್ರಪಿಂಡದ ತೊಂದರೆ, ಸಂಧಿವಾತ ಇತ್ಯಾದಿಗಳು ಉಂಟಾಗಬಹುದು. ನೀರು ಕುಡಿಯಲು ಇರುವ ನಿಯಮಗಳು ಏನು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.
(1 / 7)
ದೇಹದಲ್ಲಿ ನೀರಿನಾಂಶ ಕಡಿಮೆಯಾದರೆ, ನಿರ್ಜಲೀಕರಣ ಇತ್ಯಾದಿ ತೊಂದರೆಗಳು ಸಾಮಾನ್ಯ. ಹಾಗಂತ, ಬೇಕಾಬಿಟ್ಟಿ ನೀರುಕುಡಿಯುವುದೂ ಒಳ್ಳೆಯದಲ್ಲ. ನೀರು ಕುಡಿಯುವುದಕ್ಕೂ ನಿಯಮಗಳಿವೆ. ಸರಿಯಾದ ರೀತಿಯಲ್ಲಿ ನೀರು ಕುಡಿದರೆ ದೇಹಕ್ಕೆ ಅನೇಕ ರೀತಿಯ ಪ್ರಯೋಜನಗಳು ದೊರಕುತ್ತವೆ.
(2 / 7)
ಆಯುರ್ವೇದದ ಪ್ರಕಾರ ನೀರು ಕುಡಿಯಲು ಸಾಕಷ್ಟು ನಿಯಮಗಳಿವೆ. ಆ ನಿಯಮಗಳನ್ನು ಪಾಲಿಸಿದರೆ ಸಾಕಷ್ಟು ಪ್ರಯೋಜನಗಳಿವೆ.
(3 / 7)
ತಾಮ್ರ ಅಥವಾ ಬೆಳ್ಳಿಯ ಪಾತ್ರೆಗಳಲ್ಲಿ ನೀರು ಕುಡಿಯಿರಿ: ಇಂತಹ ಲೋಹದ ಪಾತ್ರೆಗಳಿಂದ ನೀರನ್ನು ಕುಡಿಯುವುದರಿಂದ ದೇಹಕ್ಕೆ ಅವಶ್ಯವಿರುವ ಸಾಕಷ್ಟು ಖನಿಜಾಂಶಗಳು ದೊರಕುತ್ತವೆ ಎನ್ನುವ ನಂಬಿಕೆಯಿದೆ. ಪ್ಲಾಸ್ಟಿಕ್ ಬಾಟಲಿಯ ನೀರು ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಹಾನಿ ಉಂಟಾಗಬಹುದು. ಹೀಗಾಗಿ, ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ನೀರು ಕುಡಿಯುವ ಅಭ್ಯಾಸವನ್ನೂ ಈಗಲೇ ಬಿಟ್ಟುಬಿಡಿ.
(4 / 7)
ದೇಹಕ್ಕೆ ನೀರು ಒಳ್ಳೆಯದೆಂದು ಅತಿಯಾದ ನೀರು ಸೇವನೆ ಬೇಡ. ಹೆಚ್ಚು ನೀರು ಕುಡಿಯುವುದರಿಂದ ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ. ಬಾಯಾರಿಕೆಯಾದಗ ನೀರು ಕುಡಿಯಿರಿ. ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಿರಿ. ಇದು ಉತ್ತಮ ಆರೋಗ್ಯಕ್ಕೆ ಸಹಕಾರಿ.
(5 / 7)
ತುಂಬಾ ತಣ್ಣಗಿನ ನೀರು ಕುಡಿಯಬೇಡಿ: ಫ್ರಿಡ್ಜ್‌ನಿಂದ ಕೋಲ್ಡ್ ಆಗಿರುವ ನೀರು ಕುಡಿಯುವ ಅಭ್ಯಾಸ ಸಾಕಷ್ಟು ಜನರಿಗೆ ಇರುತ್ತದೆ. ಐಸ್ ಅಥವಾ ತಣ್ಣನೆಯ ನೀರನ್ನು ಕುಡಿಯಬೇಡಿ. ಏಕೆಂದರೆ ಇದು ಚಯಾಪಚಯವನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ ನಿಮ್ಮ ದೇಹದ ತೂಕ ಹೆಚ್ಚಾಗಬಹುದು. ಇದಲ್ಲದೆ, ಕೆಲವು ಅಂಗಗಳಲ್ಲಿ ರಕ್ತ ಪರಿಚಲನೆಯ ಪ್ರಕ್ರಿಯೆಯು ನಿಧಾನವಾಗಬಹುದು. ಚಳಿಗಾಲದಲ್ಲಿ ಬೆಚ್ಚನೆಯ ನೀರು ಕುಡಿಯಿರಿ.
(6 / 7)
ತುಂಬಾ ಎತ್ತರದಿಂದ ನೀರು ಕುಡಿಯಬೇಡಿ. ಈ ರೀತಿ ಎತ್ತರದಿಂದ ಬಾಯಿ ಅಥವಾ ಗಂಟಲಿಗೆ ನೀರು ಸುರಿಯುವುದರಿಂದ ವಿವಿಧ ಅಂಗಗಳ ಮೇಲೆ ಒತ್ತಡ ಬಿದ್ದು ಹಾನಿಗೊಳಗಾಗಬಹುದು. ಅತ್ಯಧಿಕ ಒತ್ತಡವಿರುವ ನಲ್ಲಿಗೆ ಬಾಯಿ ಹಾಕುವ ಅಭ್ಯಾಸ ಬೇಡ.
ಇತರ ಗ್ಯಾಲರಿಗಳು