ಹಸುಗಳು ಮೇಯುವಷ್ಟು ಹುಲ್ಲು ಸಿಡ್ನಿ ಪಿಚ್ನಲ್ಲಿದೆ, ಭಾರತಕ್ಕೆ ಬಂದ್ರೆ ನೆಪ ಹೇಳ್ತಾರೆ; ಸುನಿಲ್ ಗವಾಸ್ಕರ್ ಕಿಡಿ
- Sunil Gavaskar: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಿರುವ ಸಿಡ್ನಿ ಕ್ರಿಕೆಟ್ ಮೈದಾನದ ಪಿಚ್ಗೆ ಸಂಬಂಧಿಸಿ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ.
- Sunil Gavaskar: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಿರುವ ಸಿಡ್ನಿ ಕ್ರಿಕೆಟ್ ಮೈದಾನದ ಪಿಚ್ಗೆ ಸಂಬಂಧಿಸಿ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ.
(1 / 9)
ಆಸ್ಟ್ರೇಲಿಯಾ ವಿರುದ್ದ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ vs ಆಸ್ಟ್ರೇಲಿಯಾ ತಂಡಗಳು ಸೆಣಸಾಟ ನಡೆಸುತ್ತಿವೆ. ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 185 ರನ್ಗಳಿಗೆ ಆಲೌಟ್ ಆಗಿದೆ. ಇದಕ್ಕೆ ಉತ್ತರವಾಗಿ ಆಸೀಸ್ ಮೊದಲ ಇನ್ನಿಂಗ್ಸ್ ಆರಂಭಿಸಿದೆ. ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 9 ರನ್ ಗಳಿಸಿದ್ದು, 176 ರನ್ಗಳ ಹಿನ್ನಡೆಯಲ್ಲಿದೆ.
(AP)(2 / 9)
ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವುದು ಅನಿವಾರ್ಯ. ಏಕೆಂದರೆ ಸರಣಿಯನ್ನು ಉಳಿಸಿಕೊಳ್ಳುವುದರ ಜತೆಗೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು ಭರವಸೆ ಉಳಿಸಿಕೊಳ್ಳಲಿದೆ. ಇದೀಗ ಪಂದ್ಯದ ನಡುವೆಯೇ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪಿಚ್ ಬಗ್ಗೆ ಸಮಾಧಾನ ಹೊರ ಹಾಕಿದ್ದಾರೆ.
(PTI)(3 / 9)
ಸಿಡ್ನಿ ಗ್ರೌಂಡ್ನಲ್ಲಿ ಪಿಚ್ ತುಂಬಾ ಹುಲ್ಲು ಇರುವುದಕ್ಕೆ ಗವಾಸ್ಕರ್ ಕಿಡಿಕಾರಿದ್ದಾರೆ. ಪಿಚ್ ಬಣ್ಣ ಸಂಪೂರ್ಣ ಹಸಿರಾಗಿದೆ. ಹಸಿರು ಹುಲ್ಲು ಸೊಂಪಾಗಿ ಬೆಳೆದಂತೆ ಕಾಣುತ್ತಿದೆ. ತಮಗೆ ಬೇಕಾದಂತೆ ಪಿಚ್ ಸಿದ್ಧಪಡಿಸಿಕೊಂಡಿದ್ದಾರೆ ಎಂದು ಅವರು ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
(AAP Image via REUTERS)(4 / 9)
ಆಸ್ಟ್ರೇಲಿಯಾ ಆಟಗಾರರು ಭಾರತಕ್ಕೆ ಪ್ರವಾಸ ಕೈಗೊಂಡಾಗ ಬೇಕಾಬಿಟ್ಟಿ ಹೇಳಿಕೆ ನೀಡುತ್ತಾರೆ. ಭಾರತದ ಪಿಚ್ಗಳಲ್ಲಿ ಹೆಚ್ಚು ತಿರುವು ಪಡೆಯುವುದನ್ನು ಟೀಕಿಸುತ್ತಾರೆ. ಆದರೆ, ಅವರು ತಮ್ಮ ತವರು ಸಿರೀಸ್ನಲ್ಲಿ ಲಾಭವೇ ಪಡೆಯುವುದಿಲ್ಲ ಎಂಬಂತೆ ವರ್ತಿಸುತ್ತಾರೆ ಎಂದು ಗವಾಸ್ಕರ್ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
(AAP Image via REUTERS)(5 / 9)
ಇಂತಹ ಹಸಿರು ವಿಕೆಟ್ ಅನ್ನು ನಾನೆಂದಿಗೂ ನೋಡಿಲ್ಲ ಎಂದು ಭಾರತದ ಪಿಚ್ಗಳ ಬಗ್ಗೆ ಜಸ್ಟಿನ್ ಲ್ಯಾಂಗರ್ ಹಿಂದೊಮ್ಮೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ಗವಾಸ್ಕರ್, ನಿಮ್ಮಲ್ಲಿ ಯಾರಾದರೂ ಒಂದು ವಿಷಯ ಗಮನಿಸಿದ್ದೀರಾ? ಆಸ್ಟ್ರೇಲಿಯಾದ ಸಿಡ್ನಿ ಪಿಚ್ನಲ್ಲಿ ಹೆಚ್ಚು ಹುಲ್ಲು ಇದೆ. ಆದರೆ ಯಾವುದೇ ಭಾರತೀಯ ಕ್ರಿಕೆಟಿಗ ದೂರು ನೀಡುವುದನ್ನು ನೀವು ನೋಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
(PTI)(6 / 9)
ಆಸ್ಟ್ರೇಲಿಯಾ ಮಾತ್ರವಲ್ಲ, ವಿಶ್ವದ ಅನೇಕ ವಿದೇಶಿ ಆಟಗಾರರು ಭಾರತೀಯ ಪಿಚ್ಗಳ ಬಗ್ಗೆ ಟೀಕಿಸುತ್ತಾರೆ. ಆದರೆ, ಭಾರತೀಯ ಆಟಗಾರರು ಈ ರೀತಿ ಟೀಕಿಸುವುದಿಲ್ಲ. ಏಕೆಂದರೆ ಎಲ್ಲಿಗೆ ಹೋದರೂ ಆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕು ಎಂದು ಭಾರತೀಯರಿಗೆ ತಿಳಿದಿದೆ ಎಂದು ಗವಾಸ್ಕರ್ ಹೇಳಿದ್ದಾರೆ.
(AFP)(7 / 9)
ಪ್ರಸ್ತುತ ಸಿಡ್ನಿ ಕ್ರಿಕೆಟ್ ಗ್ರೌಂಡ್ ಪಿಚ್ ಟೀಕಿಸಿದ ಗವಾಸ್ಕರ್, ನಾನು ಹಿಂದೆಂದೂ ಇಷ್ಟೊಂದು ಹುಲ್ಲನ್ನು ನೋಡಿರಲಿಲ್ಲ. ಈ ವರ್ಷದ ಬಾರ್ಡರ್ ಗವಾಸ್ಕರ್ ಸರಣಿಯ ಉಳಿದ ಟೆಸ್ಟ್ ಸ್ಥಳಗಳಿಗೆ ಹೋಲಿಸಿದರೆ ಸಿಡ್ನಿ ಪಿಚ್ನಲ್ಲಿ ಹೆಚ್ಚಿನ ಹುಲ್ಲು ಇದೆ ಎಂದು ನಾನು ಭಾವಿಸುತ್ತೇನೆ. ಇಲ್ಲಿ ಬ್ಯಾಟಿಂಗ್ ತುಂಬಾ ಕಷ್ಟ ಎಂದು ಹೇಳಿದ್ದಾರೆ.
(AFP)(8 / 9)
ಪ್ರವಾಸಿ ತಂಡಗಳ ಆಟಗಾರರು ಈ ಪಿಚ್ನಲ್ಲಿ ರನ್ ಗಳಿಸಲು ಪರದಾಡುತ್ತಾರೆ ಎಂದ ಗವಾಸ್ಕರ್, ಹಸುಗಳು ಮೇಯುವಷ್ಟು ಹುಲ್ಲು ಸಿಡ್ನಿ ಪಿಚ್ನಲ್ಲಿದೆ ಎಂದು ನಗುತ್ತಾ ಹೇಳಿದ್ದಾರೆ.
(AAP Image via REUTERS)ಇತರ ಗ್ಯಾಲರಿಗಳು